

ಕೋಲಾರ:- ಸರ್ಕಾರಿ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ಉತ್ತಮ ಯೋಜನೆ ಜಾರಿ ಮಾಡಿದ್ದು, ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರೊಂದಿಗೆ ಸಹಕಾರ ಹೊಂದಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು.
ಮಂಗಳವಾರ ತಾಲ್ಲೂಕಿನ ಗದ್ದೆಕಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಯೋಜನೆಯದ ಮೊಟ್ಟೆ, ಬಾಳೆಹಣ್ಣು,ಶೇಂಗಾ, ಚಿಕ್ಕಿ ವಿತರಣೆ ಹಾಗೂ ಈ ಶಾಲೆಯ ನಿವೃತ್ತಿ ಶಿಕ್ಷಕಿ ಪಿ.ಲಕ್ಷ್ಮಮ್ಮ ಅವರನ್ನ ಸನ್ಮಾನಿಸಿ ಮಾತನಾಡುತ್ತಿದ್ದರು.
ಈಗಾಗಲೇ ಇಲಾಖೆ ಆದೇಶ ಇರುವಂತೆ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಬಿಸಿಯೂಟ ಕೆನೆಭರಿತ ಹಾಲು, ಜೊತೆಗೆ ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಿರುವ ಮುಖ್ಯ ಉದ್ದೇಶವು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಿ ಆರೋಗ್ಯದಿಂದ ಕೂಡಿರಲಿ ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿ ಎಂಬುದಾಗಿದೆ ಎಂದರು.
ಶಿಕ್ಷಕರು ಪ್ರಾಮಾಣಿಕವಾಗಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕೆಂದ ಅವರು, ಮಕ್ಕಳಲ್ಲಿ ಕಲಿಕೆಯ ಜ್ಞಾನ ಹೆಚ್ಚಿಸಲು ಕಾಲಕಾಲಕ್ಕೆ ಇಲಾಖೆ ನೀಡುವ ನಿಯಮಗಳನ್ನ ಪಾಲಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತ ಮೌಲ್ಯಗಳನ್ನ ಬೆಳೆಸಬೇಕೆಂದರು.
ಇತ್ತೀಚಿಗೆ 18 ವರ್ಷದ ಒಳಗಿನ ಮಕ್ಕಳಲ್ಲಿ ಕ್ರೈಂ ಹೆಚ್ಚು ಕಂಡು ಬರುತ್ತಿದ್ದು ಇದಕ್ಕೆ ಕಾರಣಗಳೇನೆಂಬುದನ್ನು ತಿಳಿದುಕೊಂಡು ಪೆÇೀಷಕರನ್ನು ಆಗಾಗ ಶಾಲೆಯ ಹತ್ತಿರ ಬರಮಾಡಿಕೊಂಡು ಮಕ್ಕಳ ಚಲನವಲನದ ಬಗ್ಗೆ ತಿಳಿಸಬೇಕು ಎಂದರು.
ಈಗಾಗಲೇ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ಈ ಶಾಲೆಯ ಲಕ್ಷ್ಮಮ್ಮ ನಿವೃತ್ತಿ ಶಿಕ್ಷಕರನ್ನು ಸನ್ಮಾನಿಸಿ ತಾವುಗಳು ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ತಮ್ಮ ಸಂತೋಷಕರ ಜೀವನವನ್ನು ಅನುಭವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ಶಿಕ್ಷಕರಾದ ವೈ.ನಾರಾಯಣಸ್ವಾಮಿ, ಚಂದ್ರಶೇಖರ್, ಸುಮಿತ್ರಮ್ಮಮ,ಎಸ್‍ಡಿಎಂಸಿ ಅಧ್ಯಕ್ಷರಾದ ನಯಾಜ್ ಪಾಷಾ, ಸಂಧ್ಯಾರಾಣಿ, ಚೌಡೇಶ್ವರಿ ಮತ್ತು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.