ನನ್ನ ಟೀಚರನ್ನ ಅರೆಸ್ಟ್ ಮಾಡಿ : ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿಯ ಪೋರ

JANANUDI.COM NETWORK

ನನ್ನ ಟೀಚರನ್ನ ಅರೆಸ್ಟ್ ಮಾಡಿ : ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿಯ ಪೋರ
ಪ್ರಾಯಕ್ಕೆ ಬಂದವರು, ಕಾನೂನು ತಿಳಿದವರೂ, ಪೊಲೀಸ್ ಠಾಣೆ ಮೆಟ್ಟಲೇರಲು ಭಯ ಪಡುತ್ತೀರುವಾಗ, ಸಣ್ಣ ಪೋರೊನೊಬ್ಬ ಟೀಚರ್ ನನನ್ನು ಹೊಡೆಯುತ್ತಾರೆ ಎಂದು, ಟೀಚರ್‍ನ್ನು ಬಂಧಿಸುವಂತೆ 2ನೇ ತರಗತಿಯ ವಿದ್ಯಾರ್ಥಿಯೊಬ್ಬ ಠಾಣೆ ಮೆಟ್ಟಿಲೇರಿದ ಕೌತುಕಮಯ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಪೊಲೀಸ್ ಠಾಣೆಗೆ ಆಗಮಿಸಿದ 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್ ನನ್ನು ಲೇಡಿ ಇನ್ ಸ್ಪೆಕ್ಟರ್ ಯಾಕೆ ಇಲ್ಲಿಗೆ ಬಂದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪೋರ ಅನಿಲ್ ‘ನನ್ನ ಟೀಚರ್ ನನ್ನು ಅರೆಸ್ಟ್ ಮಾಡಿ ಎಂದು ಹೇಳಿದ್ದಾನೆ. ಯಾಕೆ ಎಂದು ಕೇಳಿದಕ್ಕೆ ‘ನನಗೆ ಟೀಚರ್ ಹೊಡಿತಾರೆ’ ಎಂದಿದ್ದಾನೆ. ಯಾಕೆ ಹೊಡೆದರು ಅಂದರೆ ನಾನು ಸರಿಯಾಗಿ ಓದುತ್ತಿಲ್ಲ ಅದಕ್ಕೆ ಹೊಡೆಯುತ್ತಾರೆ ಎಂದು ಹೇಳಿದ್ದಾನೆ.
ಪೋರನ ಮಾತು ಕೇಳಿದ ಮಹಿಳಾ ಇನ್ ಸ್ಪೆಕ್ಟರ್ ರಮಾದೇವಿ, ಟೀಚರ್ ಈ ವಿದ್ಯಾರ್ಥಿ ಅಲ್ಲದೇ ಬೇರೆಯವರಿಗೂ ಹೊಡೆಯುತ್ತಾರಾ ಎಂದು ವಿಚಾರಿಸಿದಕ್ಕೆ. ನನನ್ನು ಬಿಟ್ಟು ಮತ್ತಾರಿಗೂ ಹೊಡೆಯುದಿಲ್ಲ ಎಂದು
ಹೇಳಿದ್ದಾನೆ.
ತೆಲಂಗಾಣದ ಮೆಹಬೂಬ್ ನಗರದ ಬಯ್ಯಾರಾಮ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಅನಿಲ್ ನಾಯ್ಕ್ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಮಗುವಿನ ಮಾತನ್ನು ತಾಳ್ಮೆಯಿಂದ ಆಲಿಸಿದ ಇನ್ ಸ್ಪೆಕ್ಟರ್ ರಮಾದೇವಿ, ಶಾಲೆಗೆ ಕರೆದೊಯ್ದು ಆತನನ್ನು ಓಲೈಸಲು ಎಷ್ಟು ಪ್ರಯತ್ನಿಸಿದರೂ ಆತ ಹಠಕ್ಕೆ ಬಿದ್ದಿದ್ದ ಎಂದು ತಿಳಿದು ಬಂದಿದೆ. ನಂತರ ಕೌನ್ಸಿಲಿಂಗ್ ಮೂಲಕ ಮಗುವಿಗೆ ತಿಳಿ ಹೇಳಿ ಸಮಸ್ಯೆಯನ್ನು ಬಗೆಹರಿಸಲಾಯಿತೆಂದು ತಿಳಿದು ಬಂದಿದೆ.