ಶ್ರೀನಿವಾಸಪುರ : ಪಟ್ಟಣದಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯಗಳನ್ನು ಕಾಪಾಡುವುದು ಪೌರಕಾರ್ಮಿಕರೆ, ಪೌರಕಾರ್ಮಿಕರು ಪಟ್ಟಣದಲ್ಲಿ ತಮ್ಮಗೆ ಯಾವುದೇ ರೀತಿಯಾದ ಅನಾರೋಗ್ಯವಿರಲಿ ತಮ್ಮ ಕರ್ತವ್ಯದ ನಿಮಿತ್ತ ತಮ್ಮಗೆ ಒಪ್ಪಿಸಿರುವ ಕೆಲಸ ಕಾರ್ಯಗಳನ್ನು ಜವ್ದಾರಿಯುತವಾಗಿ ನಿರ್ವಹಿಸುತ್ತಾರೆ ಎಂದರು. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ನಗರೇಶ್ವರ ದೇವಾಲಯಲದಲ್ಲಿ ಶನಿವಾರ ಪುರಸಭಾ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಾಲಯ ಆವರಣವನ್ನು ಸ್ವಚ್ಚತೆಯನ್ನು ಹಮ್ಮಿಕೊಂಡು ಮಾತನಾಡಿದರು.
ಜನವರಿ 22 ರಂದು ಅಯೋದ್ಯೆಯಲ್ಲಿ ರಾಮಮಂದಿರ ಉದ್ಗಾಟನೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ದೇವಾಲಯಗಳ ಸ್ವಚ್ಚತೆ ಮಾಡಲಾಗುತ್ತಿದೆ. 22 ರಂದು ದೇಶದ ಎಲ್ಲಾ ಗ್ರಾಮಗಳ ದೇವಾಲಯಗಳಲ್ಲಿ ವಿಶೇಷ ಪೂಜೆ , ಸಾಂಸ್ಕøತಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಗಿದ್ದು, ನಾಗರೀಕರೆಲ್ಲರೂ ಸೇರಿ ಅಂದು ರಾಮನ ಸ್ಮರಣೆ ಮಾಡುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು, ಸನ್ಮಾನಿಸಿ ಗೌರವಿಸಿದರು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್, ಜಿ.ಪಂ.ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡ ರೋಣೂರು ಚಂದ್ರಶೇಖರ್, ರಾಮಾಂಜಿ, ಸುರೇಶ್ನಾಯಕ್ ಪುರಸಭಾ ವ್ಯವಸ್ಥಾಪಕ ನವೀನ್ ಚಂದ್ರ, ಪರಿಸರ ಅಭಯಂತರ ಲಕ್ಷ್ಮೀಶ, ಬಾಲಕೃಷ್ಣ ಕಂದಾಯ ನಿರೀಕ್ಷ ಶಂಕರ್ ನರಗರೇಶ್ವರ ಸೇವ ಸಮಿತಿ ಅಧ್ಯಕ್ಷ ಪಿ.ಗಿರೀಶ್, ಕಾರ್ಯದರ್ಶಿ ಬಿ.ಶಿವಕುಮಾರ್, ಖಜಾಂಚಿ ಹರೀಶ್, ಸೇವ ಸಮಿತಿ ಸದಸ್ಯರಾದ ಮೋಹನ್, ಅನಿಲ್ಕುಮಾರ್, ಪಿ.ನರೇಂದ್ರ , ದಿಲೀಪ್, ರಾಮಲಿಂಗ, ನವೀನ್,ರಾಜಶೇಖರ್, ಕೆ.ಎಸ್.ಮಂಜುನಾಥ್, ಮುರಳಿ, ಗೋಪಿನಾಥ್, ಇದ್ದರು .
20, ಎಸ್ವಿಪುರ್