ಶ್ರೀನಿವಾಸಪುರ : ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಗ್ರಾಮಪಂಚಾಯಿತಿ ಕೈ ಜೋಡಿಸಿ ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.
ಪಟ್ಟಣದ ಹೊರವಲಯದ ಹೊಗಳಗೆರೆ ತೋಟಗಾರಿಕಾ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಕೆಡಿಪಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಸರಿಪಡಿಸುವಂತೆ ಪಿಡಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳ್ಳಿಗಳಲ್ಲಿನ ಸಶ್ಮಾನಗಳನ್ನು ಸರ್ವೆ ಮಾಡಿಸಿ ಬೌಂಡರಿ ಹಾಕಿಸುವಂತೆ ಪಿಡಿಒ ರವರಿಗೆ ಸೂಚಿಸಿದರು. ಆರೋಗ್ಯ ಇಲಾಖೆಯು ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ತುರ್ತಚಿಕಿತ್ಸೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳಲು ದೂರವಾಣಿ ಮೂಲಕ ಸೂಚಿಸಿದರು.
ಜೆಜೆಎಂ ಗೆ ಸಂಬಂದಿಸಿದ ಕಾಮಗಾರಿಯು ಹಣದ ಕೊರತೆಯಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿರುವದನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನ ಬದಲಾಯಿಸಲಾಗುವುದು ಎಂದು ಉತ್ತರಿಸಿದರು. ಕೇಂದ್ರ ಸರ್ಕಾರದ ಪಾಲಿನ ಹಣವನ್ನು ಬಳಿಸಿಕೊಂಡು ಜಲ ಜೀವನ್ ಮಿಷನ್ ಯೋಜನೆಗೆ ಸಂಬಂದಿಸಿದಂತೆ ಡಿಸಂಬರ್ 10 ತಾರೀಖು ಯೋಜನೆಯು ಮುಕ್ತಾಯವಾಗಲಿದ್ದು ಅದರ ಒಳಗೆ ಎಲ್ಲಾ ಕಾಮಾಗಾರಿಗಳು ಪೂರ್ಣಗೊಳಿಸಲಾಗುತ್ತದೆ.
ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ನಾವೆ ಸೃಷ್ಟಿಮಾಡಿಕೊಳ್ಳಬೇಕಾಗಿದೆ ಎಂದು ಮಾಹಿತಿ ನೀಡಿದರು. ಎಂಎಲ್ಸಿ ನಸೀರ್ ಅಹಮ್ಮದ್ರವರು ಗುತ್ತಿಗೆದಾರರ ಮೇಲೆ ಕೋಪಗೊಂಡು ಪಿಡಬ್ಲ್ಯುಡಿ ಇಲಾಖೆಗೆ ಸಂಬಂದಿಸಿದ ಎಲ್ಲಾ ರಸ್ತೆಗಳ ಕಾಮಗಾರಿ ನಿಲ್ಲಿಸಲಾಗಿದೆ.
ಮುಂದಿನ ದಿನಗಳಲ್ಲಿ ಬಂಗಾರುಪೇಟೆಯಿಂದ ಆಂದ್ರದ ಬಿ.ಕೊತ್ತಕೊಟಗೆ ಹಾಗು ಮದನಪಲ್ಲಿಗೆ ಹೋಗುವ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುವುದು. ಹಾಗೂ ಮುಳಬಾಗಿಲು ಹಾಗು ಮದನಪಲ್ಲಿಗೆ ಹೋಗುವ ರಸ್ತೆಗೆ ಸಂಬಂದಿಸಿದಂತೆ ಆರೇಳು ಎಕರೆ ಭೂಮಿ ಪ್ರದೇಶದಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಪಟ್ಟಣವನ್ನು ಹಾಗೂ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀನಿವಾಸನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಬಿ.ಎಸ್.ರೋಹಿತ್, ಪಿಡಬ್ಲ್ಯುಡಿ ಅಧಿಕಾರಿ ಎನ್.ನಾರಾಯಣಸ್ವಾಮಿ, ರೇಷ್ಮೆ ಇಲಾಖೆ ಕೃಷ್ಣಪ್ಪ, ವಾಟರ್ ಬೋರ್ಡ್ ಅಧಿಕಾರಿ ನಾರಾಯಣಸ್ವಾಮಿ, ತಾಲೂಕಿನ ಎಲ್ಲಾ ಪಿಡಿಒಗಳು, ಮುಖಂಡರಾದ ಬಂಡಪಲ್ಲಿ ಕೃಷ್ಣಾರೆಡ್ಡಿ, ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ರವಿಕುಮಾರ್ ಇತರರು ಇದ್ದರು.