ಶ್ರೀನಿವಾಸಪುರ 1 : ಸ್ವಚ್ಚಭಾರತ್ ನಿರ್ಮಾಣ ಬಗ್ಗೆ ಎಲ್ಲರೂ ಗಮನಹರಿಸಿದರೆ ಮಾತ್ರ ಮಹಾತ್ಮ ಗಾಂಧೀಜಿ ಕಂಡಂತಹ ಕನಸು ನನಸು ಆಗುತ್ತದೆ. ಹಾಗಾಗಿ ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚ ಸುಂದರವಾಗಿ ಮಾಡಲು ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅವಶ್ಯಕ ಪಟ್ಟಣದ ಜನತೆ ಪ್ಲಾಸ್ಟಿಕ್ ನೀಷೆದಿಸಬೇಕು ಹಾಗಾಗಿ ಪಟ್ಟಣದ ನಾಗರೀಕರು ಸ್ವಚ್ಚತೆಯನ್ನು ಕಾಪಾಡಬೇಕೆಂದು ಪುರಸಭೆಯ ಆರೋಗ್ಯ ನಿರೀಕ್ಷಕ ಕೆ.ಜಿ. ರಮೇಶ್ ತಿಳಿಸಿದರು.
ಪಟ್ಟಣದ ಪುರಸಬೆ ಕಾರ್ಯಾಲಯ ಮುಂದೆ ನಂದೀಶ್ವರ ರೂರಲ್ ಡೆವಲಪ್ಮೆಂಟ್ ಸೆಂಟರ್ ರವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಪುನರ್ ಬಳಿಕೆ ಮಾಡುವ ಪ್ಲಾಸ್ಟಿಕ್ನ್ನು ಬಳಿಸಬೇಕು ನಮ್ಮ ಮನೆಯಿಂದಲೇ ಸ್ವಚ್ಚಕಾರ್ಯಕ್ರಮವನ್ನು ಪ್ರಾರಂಭಿಸಬೇಕು ಪ್ರಧಾನ ಮಂತ್ರಿ ಕಂಡ ಸ್ವಚ್ಚಭಾರತ್ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಸಬೇಕೆಂದ ಇವರು ಎಲ್ಲಂದರಲ್ಲಿ ಕಸ ಹಾಕುವುದರಿಂದ ಮಲೇರಿಯಾ, ಡೇಗ್ಯೂ ಜ್ವರದಂತಹ ಸಂಕ್ರಾಮಿಕ ರೋಗಗಳು ಹರಡುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮವನ್ನು ನಂದೀಶ್ವರ ರೂರಲ್ ಡೆವಲಪ್ಮೆಂಟ್ ಸೆಂಟರ್ನ ನಿರ್ದೇಶಕ ವೆಂಕಟರವಣಪ್ಪ ಸಿಬ್ಬಂದಿಯಾದ ಹರೇಂದ್ರ , ಅರುಣ, ಪುರಸಬೆಯ ಕಂದಾಯ ನಿರೀಕ್ಷಕ ಮಂಜುನಾಥ್, ಜೆ.ಇ. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.