

ಶ್ರೀನಿವಾಸಪುರ : ಪ್ರಸ್ತುತ ವಿಶ್ವದಲ್ಲಿ ಅಹಿಂಸೆ , ಅಶಾಂತಿ ವಾತವರಣ ನೆಲಸಿದ್ದು ಇದನ್ನ ಹೋಗಲಾಡಿಸಲು ನಾವೆಲ್ಲರೂ ಒಗ್ಗೂಡಿಕೊಂಡು ಸಮಾಜದಲ್ಲಿ ಶಾಂತಿ ನೆಲಸುವ ಪ್ರಯತ್ನ ಮಾಡಬೇಕಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರೆನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮಹಾತ್ಮ ಗಾಂಧೀ ಜಯಂತಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಗಾಂಧಿಜೀ ಮತ್ತು ಶಾಸ್ತ್ರೀಜಿಯವರು ದೇಶಕ್ಕೆ ಸ್ವಾತ್ರಂತ್ರ್ಯವನ್ನು ತಂದುಕೊಡಲು ಪ್ರಮುಖ ಪಾತ್ರವಹಿಸಿದ್ದು ಆನೇಕ ಸತ್ಯಾಗ್ರಹಗಳನ್ನು ನಡೆಸಿ ನಮಗೆ ಸ್ವಾತ್ರಂತ್ರ್ಯವನ್ನು ತಂದುಕೊಟ್ಟಿದ್ದು ,ಅವರಲ್ಲಿನ ಸರಳತೆ, ದೇಶಾಭಿಮಾನ ನಾವು ಬೆಳಿಸಿಕೊಳ್ಳಬೇಕಾಗಿದೆ ಎಂದರು. ಯುವ ಪೀಳಿಗೆ ದೇಶ ಪ್ರೇಮವನ್ನು ಬೆಳಿಸಿಕೊಂಡು ಗಾಂಧಿಜೀ ಹಾಗು ಶಾಸ್ತ್ರಿರವರ ಆದರ್ಶವನ್ನು ಪಾಲಿಸುವಂತೆ ಕಿವಿಮಾತು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಗಾಂಧಿಜೀರವರು ದೇಶದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಅನೇಕ ಹೋರಾಟಗಳಿಂದ ನಮಗೆ ಸ್ವಾತಂತ್ರ್ಯ ತಂದುಕೊಂಡಿದ್ದಾರೆ . ಲಾಲ್ಬಹೂದ್ದೂರ್ ಶಾಸ್ತ್ರೀಯವರು ದೈರ್ಯ , ಸಾಹಸ,ಸಹನೆ,ಸಂಯಮ,ವಿನಯ,ಪರೋಪಕಾರ,ಸರಳತೆ ಸಜ್ಜನತೆಯಿಂದ ದೇಶದ ಪ್ರದಾನಿಯಾಗಿ ಕಾರ್ಯನಿರ್ವಹಿಸಿದರು ಇಂತಹ ಮಹಾನ್ ವ್ಯಕ್ತಿಗಳನ್ನ ಪ್ರಾಥಃ ಸ್ಮರೀಯರು ಎಂದರು.
ಇದೇ ಸಮಯದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ ಶಾಸಕರ ಅನುದಾನದಲ್ಲಿ 20 ವಿಕಲಚೇತನರಿಗೆ ಉಚಿತ ತ್ರಿಚಕ್ರವಾಹನಗಳನ್ನು ಹಸ್ತಾಂತರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸಭೆ ಉಪಾಧ್ಯಕ್ಷೆ ಸುನಿತಾ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಆರ್.ಐ ಗಳಾದ ಗುರುರಾಜರಾವ್, ಮುನಿರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಸಿಬ್ಬಂದಿ ಹೆಚ್.ಎಸ್.ಅಭಿಷೇಕ, ಮುಖಂಡರಾದ ಪೂಲು ಶಿವಾರೆಡ್ಡಿ, ಮನು, ಹೂಹಳ್ಳಿ ಅಂಬರೀಶ್, ಕೃಷ್ಣಪ್ಪ, ವಿಕಲಚೇತನರ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ಇದ್ದರು.
