

ಉಡುಪಿ – ಚಿಕ್ಕ ಮಂಗಳೂರು ಸಂಸದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಕೊಂಕಣ ರೈಲ್ವೆ ಮಡಗಾವ್- ವೆಲಂಕಣಿ ಗೆ ಕುಂದಾಪುರ -ಉಡುಪಿ – ಮಂಗಳೂರು ಮಾರ್ಗ ವಾಗಿ ವಿಶೇಷ ರೈಲಿಗೆ ಆದೇಶ ಹೊರಡಿಸಿದೆ.
ದಿನಾಂಕ 6/09/2024 ರಂದು ಮದ್ಯಾಹ್ನ 12.30 ಕ್ಕೆ ಮಡಗಾವ ದಿಂದ ಹೊರಟು ಸಂಜೆ 4.18 ಕ್ಕೆ ಕುಂದಾಪುರ 5.55 ಕ್ಕೆ ಮಂಗಳೂರು ತಲುಪಿ ಮರುದಿನ ಮದ್ಯಾಹ್ನ 12.25 ಕ್ಕೆ ವೆಲಂಕಣಿ ತಲುಪಲಿದೆ.
ಅದೇ ರೀತಿ 7/09/2024 ರಾತ್ರಿ 11.55 ಕ್ಕೆ ವೆಲಂಕಣಿ ಯಿಂದ ಹೊರಟ ರೈಲು ಮರುದಿನ ಸಂಜೆ 6.40 ಕ್ಕೆ ಕುಂದಾಪುರ ರಾತ್ರಿ 11ಕ್ಕೆ ಮಡಗಾವ ತಲುಪಿಲಿದೆ.
ಕರಾವಳಿಯ ಹೆಚ್ಚಿನ ಜನರು ಇದರ ಸದುಪಯೋಗ ಪಡೆಯಬೇಕಾಗಿ ಕುಂದಾಪುರ ರೈಲ್ವೆ ಸಮಿತಿ ವಿನಂತಿಸಿದೆ