ಶ್ರೀನಿವಾಸಪುರ 1 : ಕೊಲೆಯ ಹಿಂದೆ ಒಂದು ಸಂಚು ಇದ್ದು, ಕೊಲೆಯನ್ನು ಏಕೆ ಮಾಡಿದರು, ಯಾರು ಮಾಡಿಸಿದರು ಎಂಬುದನ್ನ ಆರೋಪಿಗಳಿಂದ ನಿಜವಾದ ಸತ್ಯವನ್ನು ಬಹಿರಂಗಗೊಳಿಸಬೇಕಿದೆ ಎಂದು ದಿವಗಂತ ಎಂ.ಶ್ರೀನಿವಾಸನ್ ಧರ್ಮಪತ್ನಿ ಡಾ|| ಚಂದ್ರಕಳಾಶ್ರೀನಿವಾಸನ್ ಒತ್ತಾಯಿಸಿದರು.
ಪಟ್ಟಣದ ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿ||ಎಂ.ಶ್ರೀನಿವಾಸನ್ ರವರ ಮನೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಂ.ಶ್ರೀನಿವಾಸನ್ ಅವರಿಲ್ಲದ ತಬ್ಬಲಿತನವು ನಮ್ಮ ಕುಟುಂಬ ವರ್ಗವನ್ನು ಎಷ್ಟು ಕಾಡುತ್ತಿದೆಯೋ ಅಷ್ಟೇ ತಬ್ಬಲಿತನವನ್ನು ನಮ್ಮ ಬಂಧು-ಬಳಗ ಹಾಗು ಸಮಸ್ತ ಸಾರ್ವಜನಕರ ಬಂಧುಗಳೂ ಅನುಭವಿಸುತ್ತಿದೆ. ಇಂತಹ ದೈರ್ಯಶಾಲಿ ಜನನಾಯಕನನ್ನು ನಮಗಾರಿಗೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು. ನನಗೆ, ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವು ಯಾರಿಗೂ ಆಗಬಾರದು ಎಂದು ದುಃಖತಪ್ತರಾದರು.
ನಮ್ಮ ಕುಟುಂದ ಹಿತ ಚಿಂತಕರೆಲ್ಲರೂ ಸೇರಿ ದಿನಾಂಕ 13-1-2024 ರ ಶನಿವಾರ ದಂದು ಬೆಳಗ್ಗೆ 11 ಗಂಟೆಗೆ ತಹಶೀಲ್ದಾರ್ ಕಛೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಸಾಮೂಹಿಕ ಶ್ರದ್ಧಾಂಜಲಿಯನ್ನು ನಡೆಸಲಾಗುತ್ತಿದ್ದು, ಶ್ರೀನಿವಾಸನ್ ಅಭಿಮಾನಿಗಳು ಹಾಗು ಸಾರ್ವಜನಿಕರು ಸಾಮೂಹಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೊಲೆ ಆರೋಪಿಗಳಿಂದ ಸುಳ್ಳು ಮಾಹಿತಿ : ಪವನ್ ಕಲ್ಯಾಣ್ ಎಂಬ ಯುವಕನ ಪ್ರೇಮವಿಚಾರದಲ್ಲಿ ಕೌನ್ಸಿಲರ್ ಎಂ.ಶ್ರೀನಿವಾಸನ್ ಮಧ್ಯಪ್ರವೇಶಿಸಿ ತೊಂದರೆ ಮಾಡಿ ಪವನ್ಕಲ್ಯಾಣ್ ಸಾವಿಗೆ ಕಾರಣರಾಗಿದ್ದರೆ ಎನ್ನುವ ವಿಚಾರಕ್ಕೆ ಸಂಬಂಸಿದಂತೆ ಪವನ್ ಕೊಲೆಗೆ ಸೇಡು ತೀರಿಸುವ ನೆಪದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ.
ಆದರೆ ಪವನ್ ಕಲ್ಯಾನ್ ಸಾವಿಗೆ ನಮ್ಮ ಯಜಮಾನರಾದ ಎಂ.ಶ್ರೀನಿವಾಸನ್ ರವರಿಗೆ ಯಾವುದೇ ಸಂಬಂದವಿಲ್ಲ ಎಂಬುದು ತಿಳಿಸುತ್ತಾ, ಪವನ್ಕಲ್ಯಾಣ್ 28.09.2022 ರಿಂದ 19.10.2022 ರವರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಟಿಬಿ ಮತ್ತು ಶುಗುರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂಬುದನ್ನ ಆರ್ಟಿಐ ಅರ್ಜಿ ಸಲ್ಲಿಸಿ ಆರ್ಟಿಐ ಮುಖಾಂತರ ಪವನ್ಕಲ್ಯಾಣ್ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡುತ್ತಾ, ಆರೋಪಿಗಳು ಸುಳ್ಳು ಕಾರಣ ಹೇಳಿ ನಿಜವಾದ ಕಾರಣವನ್ನು ಬಚ್ಚಿಇಡುತ್ತಿದ್ದಾರೆ ಎಂದು ಹೇಳುತ್ತಾ ಕೊಲೆಗೆ ನಿಜವಾದ ಕಾರಣವನ್ನು ಆರೋಪಿಗಳಿಂದ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಜನವರಿ 13 ರಂದು ನಡೆಯುವ ಸಾಮೂಹಿಕ ಶ್ರದಾಂಜಲಿ ಸಭೆಗೆ ವಿವಿಧ ಮಠಗಳ ಸ್ವಾಮಿಗಳು ಹಾಗು ವಿಶೇಷ ಆಹ್ವಾನಿತರಾಗಿ ಪ್ರಗತಿಪರ ಹೋರಾಟಗಾರ ಅಹಿಂಸಾ ಚೇತನ್ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ಪಿಐ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ ದಿ|| ಎಂ.ಶ್ರೀನಿವಾಸನ್ ಕೊಲೆ ಎ1 ಆರೋಪಿ ವ್ಯಯಕ್ತಿಕ ವಿಚಾರಕ್ಕೆ ಕೊಲೆ ನಡೆಸಲಾಗಿದೆ ಎಂದು ಆರೋಪಿಗಳು ಬಿಂಬಿಸುತ್ತಿದ್ದಾರೆ. ಆದರೆ ಕೊಲೆಗೆ ಸಂಚಿನ ಹಿಂದೆ ಯಾರೋ ಇದ್ದಾರೆ ಎಂಬುದನ್ನು ಆರೋಪಿಗಳು ಇದುವರೆಗೂ ಹೇಳಿಕೆಯನ್ನು ನೀಡುತ್ತಿಲ್ಲ ಆದ್ದರಿಂದ ಆರೋಪಿಗಳನ್ನು ಮಂಪರು ಪರೀಕ್ಷೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಒತ್ತಾಯಪಡಿಸದರು. ಇದುವರೆಗೂ ಕ್ರಮಕೈಗೊಂಡಿಲ್ಲ.
ಶ್ರದ್ಧಾಂಜಲಿ ಸಭೆಯನ್ನು ಶಾಂತಿಯುತವಾಗಿ ನಡೆಸಬೇಕು. ಶ್ರೀನಿವಾಸನ್ ಕುಟುಂಬಕ್ಕೆ ಸಾಂತ್ವನವನ್ನು ನಾವೆಲ್ಲರೂ ಹೇಳಿಬೇಕಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಪುರಸಭೆ ಸದಸ್ಯರಾದ ಭಾಸ್ಕರ್, ತಜಮುಲ್, ಮುಖಂಡರಾದ ಬಂಗವಾದಿ ನಾಗರಾಜ್, ಕೆ.ಕೆ.ಮಂಜುನಾಥ್, ಹೊಗಳಗೆರೆ ಆಂಜಿ, ರಾಮಾಂಜಮ್ಮ, ಉಪ್ಪರಪಲ್ಲಿ ತಿಮ್ಮಯ್ಯ, ಚಿಂತಾಮಣಿ ಈಶ್ವರ್, ಚಲ್ದಿಗಾನಹಳ್ಳಿ ಈರಪ್ಪ, ಚಿಕ್ಕಬಳ್ಳಾಪುರ ವೆಂಕಟರಮಣಪ್ಪ, ಶಂಕರ್, ವರ್ತನಹಳ್ಳಿ ವೆಂಕಟೇಶ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ವಾಸು, ತಾ.ಪಂ. ಮಾಜಿಸದಸ್ಯ ಆರ್.ಜಿ.ನರಸಿಂಹಯ್ಯ, ಪುರಸಭೆ ಮಾಜಿ ಸದಸ್ಯ ಶಂಕರ್ , ಹೆಬ್ಬಟ ಗ್ರಾ.ಪಂ. ಸದಸ್ಯ ಆನಂದ್ಕುಮಾರ್ ಇದ್ದರು.