ಶ್ರೀನಿವಾಸಪುರ : ಆರೋಪಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಿ ನಿಜವಾದ ಸಂಚೊಕೋರರನ್ನು ಬಹಿರಂಗ ಪಡಿಸಬೇಕು ಎಂದು ಸಮತ ಸೈನಿಕಧಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಶನಿವಾರ ವಿವಿಧ ಧರ್ಮಗುರುಗಳ ಆರ್ಶೀಚನದೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೌನ್ಸಿಲರ್ ದಿ|| ಎಂ.ಶ್ರೀನಿವಾಸನ್ ರವರ ಶ್ರದ್ಧಾಂಜಲಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಹತ್ಯೆಯ ಸಂಚುಕೋರರನ್ನು ಮರೆಮಾಚಲು ಬಂಧನಕ್ಕೂಳಗಾದ ಆರೋಪಿಗಳ ಬಾಯಿಂದಲೇ ಶ್ರೀನಿವಾಸನ್ ವಿರುದ್ಧ ಸೇಡು ತೀರಿಸಿಕೊಂಡರೆಂಬಂತೆ ಸುಳ್ಳು ಹೇಳಿಕೆಗಳು ಹೊರಬಂದವು . ದಿ|| ಶ್ರೀನಿವಾಸನ್ ರವರನ್ನ ಕೊಲೆಯಾದ ಕೂಡಲೇ ಖಳನಾಯಕನ ರೀತಿಯಲ್ಲಿ ಸಾರ್ವಜನಿ ಅಭಿಪ್ರಾಯ ರೂಪಿಸಿದ್ದು ತೀವ್ರ ಅಘಾತಕಾರಿ ಸಂಗತಿಯಾಗಿದೆ ಎಂದರು. ಸಾರ್ವಜನಿಕ ಅಭಿಪ್ರಾಯವನ್ನು ಹೀಗೆ ರೂಪಿಸಿ ಸಂಚುಕೋರರು ತಾವು ತಪ್ಪಿಸಿಕೊಳ್ಳುವ ಕುತಂತ್ರವೇ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿತೂರಿಯ ಸಂಚುಕೋರರನ್ನು ಬಂಧಿಸದೇ ಈ ಕೊಲೆಗೆ ನ್ಯಾಯ ಸಿಗಲಾರದೆಂಬ ನಿರ್ಧಾರಕ್ಕೆ ಶ್ರೀನಿವಾಸನ್ ಕುಟುಂಬದವರು ಬಂದಿದ್ದಾರೆ ಇಂದಿನ ಸಂತಾಪ ಸೂಚನಾ ಸಭೆಯಲ್ಲಿ ಭಾಗವಹಿಸಿರುವ ಸಮಸ್ತ ಸಾರ್ವಜನಿಕ ಬಂಧುಗಳು ಕುಟುಂಬದ ಬೆನ್ನಿಗೆ ನಿಲ್ಲಬೇಕು ಮತ್ತು ಸಂಚುಕೋರರನ್ನು ಬಯಲಿಗೆಳೆಯಲು ಅವರ ಹೋರಾಟವನ್ನು ಬೆಂಬಲಿಬೇಕೆಂದರು.
ಚಂದ್ರಕಳಾಶ್ರೀನಿವಾಸನ್ ಮಾತನಾಡಿ ನನ್ನ ಯಜಮಾನರು ತುಂಬಾ ಸ್ವಾಭಿಮಾನಿಗಳು . ದೈರ್ಯಶಾಲಿಗಳು ಕೊಲೆಯಾಗಿದ್ದಾರೆ ಎಂದು ಹೇಳುತ್ತಾ, ದುಖಃತಪ್ತರಾದರು. ನಾನು ವೈದ್ಯರಾಗಿ ತಾಲೂಕಿನ ಅನೇಕ ಮಕ್ಕಳಿಗೆ ಜೀವಕೊಟ್ಟಿದ್ದೇನೆ. ಆದರೆ ಇಂದು ನನಗೆ ಈ ತರದ ಸಮಸ್ಯೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಕೊಲೆ ಆರೋಪಿಗಳು ಇಲ್ಲ ಸಲ್ಲದ ಸುಳ್ಳನ್ನು ಹೇಳುತ್ತಾ ಸಾರ್ವಜನಿಕ ನನ್ನ ಗಂಡನ ಹೆಸರಿಗೆ ಮಸಿ ಬಳಯುತ್ತಿದ್ದು, ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೊಲೆಯ ಸಂಚುಕೋರರನ್ನು ಬಹಿರಂಗಪಡಿಸಿ ನನಗೆ ನ್ಯಾಯ ಒದಗಿಸಲು ನೀವೆಲ್ಲರೂ ನನ್ನೊಂದಿಗೆ ಕೈಜೋಡಿಸಬೇಕೆ ಎಂದರು.
ಚಿತ್ರದುರ್ಗ ಛಲವಾದಿ ಮಹಾಗುರುಪೀಠದ ಶ್ರೀ ಶ್ರೀ ಜಗದ್ಗುರು ಬಸವನಾಗಿದೇವ ಶರಣರು, ತುಮಕೂರು ಬಿ.ಕಲ್ಕೆರೆ ಅಲ್ಲಮಪ್ರಭು ಮಹಾಸಂಸ್ಥಾನ ಶ್ರೀ ಶ್ರೀ ಜಗದ್ಗುರು ತಿಪ್ಪೇರುದ್ರಸ್ವಾಮಿ ಶರಣರು , ಪೂರ್ಣಾಂನದ ಸ್ವಾಮಿಗಳು ಆರ್ಶೀಚನವನ್ನು ಮಾಡಿದರು .
ತಹಶೀಲ್ದಾರ್ ಮುಂಭಾಗ ಪಾರ್ಕ್ನಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಂವಿಧಾನ ಬಗ್ಗೆ ಪ್ರತಿಜ್ಞವಿಧಿಯನ್ನು ಭೋದಿಸಲಾಯಿತು. ಇಒ ಶಿವಕುಮಾರಿ ಜಿ.ಪಂ.ಮಾಜಿ ಸದಸ್ಯ ಮ್ಯಾಕಲನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖಂಡರಾದ ಎನ್.ಬಿ.ಬ್ಯಾಟಪ್ಪ, ಕೆ.ಕೆ.ಮಂಜುನಾಥ್, ಬಿ.ಜಿ.ಖಾದರ್, ಸಂಜಯ್ರೆಡ್ಡಿ, ಬಕ್ಷುಸಾಬ್, ಗೊಲ್ಲಹಳ್ಳಿ ಶಿವಪ್ರಸಾದ್, ಸೀತಾರಾಮರೆಡ್ಡಿ, ಪಾಲ್ಯ ಗೋಪಾಲರೆಡ್ಡಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಬಂಗಾರಪೇಟೆ ಮಾಜಿ ಎಂಎಲ್ಎ ಬಿ.ಪಿ.ವೆಂಕಟಮುನಿಯಪ್ಪ, ಎಲ್.ಗೋಪಾಲಕೃಷ್ಣ, ಪುರಸಭೆ ಸದಸ್ಯ ಭಾಸ್ಕರ್, ಚಲ್ದಿಗಾನಹಳ್ಳಿ ಈರಪ್ಪ, ರಾಮಾಜಮ್ಮ, ವಿಮುನಿಯಪ್ಪ, ಆಂಬರೀಶ್, ಮುನಿಯಪ್ಪ ಇದ್ದರು.
13, ಎಸ್ವಿಪುರ್ 6 : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ವಿವಿಧ ಧರ್ಮಗುರುಗಳ ಆರ್ಶೀಚನದೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೌನ್ಸಿಲರ್ ದಿ|| ಎಂ.ಶ್ರೀನಿವಾಸನ್ ರವರ ಶ್ರದ್ಧಾಂಜಲಿ ಸಭೆಗೆ ನಡೆಯಿತು.