ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಫೆ. 28 : ಗಡಿನಾಡು ಭಾಗಗಳಲ್ಲಿ ಜನರು ಬೇರೆ ಭಾಷಗಳ ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾμÉಯನ್ನು ಉಳಿಸಿ ಬೆಳೆಸವುದು ಪ್ರತಿಯೊಬ್ಬರ ಕರ್ತವ್ಯ. ಕನ್ನಡ ಭಾಷೆ ಮೇಲೆ ಅಭಿಮಾನ ಬೆಳಿಸಿಕೊಳ್ಳುವುದರಿಂದ ನಮ್ಮ ಅಭಿವೃದ್ಧಿ ಸಾಧ್ಯ. ಸ್ಥಳೀಯ ಪ್ರತಿಭೆಗಳು, ಹಿರಿಯ ಕಲಾವಿದರನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದು ಮಾಲೂರು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಗಾನಸುಧಾ ಸಾಂಸ್ಕøತಿಕ ಕಲಾ ಸಂಸ್ಥೆ ಜಯಮಂಗಲ ಮಾಲೂರು ತಾಲ್ಲೂಕು ಇವರ ಸಂಯುಕ್ತಾಶ್ರಯದಲ್ಲಿ ಫೆ. 27 ಭಾನುವಾರ ಮಾಲೂರು ತಾಲ್ಲೂಕು ಆಲಂಬಾಡಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಸಾಂಸ್ಕøತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಈ ಗಡಿನಾಡು ಭಾಗದಲ್ಲಿ ಸಂಗೀತ, ನೃತ್ಯ, ನಾಟಕ, ಗಡಿನಾಡು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂತಹ ಕಲೆಗಳು ಉಳಿಯಬೇಕಾದರೆ ನಾವೆಲ್ಲರೂ ಪೆÇ್ರೀತ್ಸಾಹಿಸಬೇಕು ಎಂದರು. ಕಲೆಗಳು ಬೆಳೆಯಬೇಕಾದರೆ ಕಲಪೆÇೀಷಕರು ಅವಶ್ಯಕತೆ ಇದೆ. ಈ ಕಾರ್ಯಕ್ರಮ ಪ್ರತಿ ಹಳ್ಳಿಗಳಲ್ಲಿ ನಡಿಯುವಂತಾಗಲಿ ಎಂದು ಶುಭ ಕೋರಿದರು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉತ್ಸುಕನಾಗಿ ನೋಡಲು ಬಂದಿದ್ದೇನೆ ಎಂದರು.
ರಾಷ್ಟ್ರೀಯ ಭಾವೈಕ್ಯತೆ ಕುರಿತಾಗಿ ಸಂಸ್ಕøತಿ ಚಿಂತಕ ವೆಂಕಟಾಪು ಸತ್ಯಂ ಮಾತನಾಡಿ ಭಾರತ ಹಲವು ಮತ ಧರ್ಮಗಳನ್ನು ಹೊಂದಿರುವ ದೇಶ , ಹಲವು ಜನಾಂಗದ ಜನರು ಪ್ರಾಚೀನ ಕಾಲದಿಂದ ಇಲ್ಲಿ ನೆಲೆಸಿದ್ದಾರೆ . ವೇಷ , ಭೂಷಣ , ಭಾμÉ ಬೇರೆ ಬೇರೆಯಾದರೂ ಎಲ್ಲರೂ ಭಾರತೀಯರು. ಇಲ್ಲಿ ಭಾμÉ , ಆಚಾರ , ವಿಚಾರ , ಉಡುಗೆ , ಹಬ್ಬಗಳಲ್ಲಿ ಭಿನ್ನತೆ ಇದ್ದರೂ ರಾಷ್ಟ್ರದ ಏಕತೆಗೆ ಅಡ್ಡಿಯಾಗಿಲ್ಲ ಎಂದರು.
ಸರ್ಕಾರಿ ಮಹಿಳಾ ಕಾಲೇಜು, ಕೋಲಾರ ಉಪನ್ಯಾಸಕ ಡಾ. ಜಿ. ಶಿವಪ್ಪ ಅರಿವು ಮಾತನಾಡಿ ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು, ಜನ, ಭಾμÉ ಮತ್ತು ಸಂಸ್ಕøತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು ಎಂದರು.
ಸರ್ಕಾರಿ ಮಹಿಳಾ ಕಾಲೇಜು, ಕೋಲಾರ ಉಪನ್ಯಾಸಕ ಡಾ.ಸಿ.ಎ. ರಮೇಶ್‍ರವರು ಕನ್ನಡ ಹೋರಾಟಗಾರ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಾದ ನಡೆಸಿದರು. ಅಧ್ಯಕ್ಷತೆಯನ್ನು ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ನಾಗೇಶ್ ವಹಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ವೆಂಕಟೇಶಪ್ಪ ಗಡಿ ಸಮಸ್ಯೆಗಳ ಕುರಿತು ಮಾತನಾಡಿದರು.
ಸದರಿ ಕಾರ್ಯಕ್ರಮದಲ್ಲಿ ಈನೆಲ ಈಜಲ ವೆಂಕಟಾಚಲಪತಿ ಜನಪದ ಗಾಯನ, ಸುಗಮ ಸಂಗೀತ ದೊಡ್ಡಮಲ್ಲೆ ರವಿ, ಗಗನ್ ಮತ್ತು ತಂಡದಿಂದ ತಮಟೆ ವಾದನ, ವರ್ಷಿಣಿ ಮೋಹನ್ ನೃತ್ಯ ರೂಪಕ ಮತ್ತು ಯಡಹಳ್ಳಿ ಶ್ರೀನಿವಾಸ್ ತಂಡದಿಂದ ಜನಪದ ಗಾಯಕನ ಮತ್ತು ಸಂಜೀವಯ್ಯ ಮತ್ತು ತಂಡದಿಂದ ತತ್ವಪದ ಗಾಯನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಕುಮಾರ್, ಸದಸ್ಯರಾದ ವಿ.ರಾಘವೇಂದ್ರ ಪ್ರಸಾದ್, ಜಿ.ವಿ.ಮಂಜುನಾಥ, ಮಾಜಿ ಪುರಸಭಾ ಅಧ್ಯಕ್ಷ ಎನ್.ವಿ.ಮುರಳಿಧರ, ಗಾನಸುಧ ಸಾಂಸ್ಕøತಿಕ ಕಲಾ ಸಂಸ್ಥೆಯ ಅಧ್ಯಕ್ಷ ಕೆ.ಗೌತಮ್ ಮುಂತಾದವರು ಭಾಗವಹಿಸಿದ್ದರು.