

ಎಂ.ಐ.ಟಿ. ಕುಂದಾಪುರದ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಳೆದ ವರ್ಷದ ವಿಜೇತ ಇಶಾನ್ ಕ್ರೀಡಾಜ್ಯೋತಿಯನ್ನು ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜರವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳ ಎಂಟು ತಂಡಗಳು 12 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬೈಸನ್ಸ್ ತಂಡದವರು ಈ ಬಾರಿಯ ಚಾಂಪಿಯನ್ಸ್ ಹಾಗೂ ಪ್ಯಾಂತರ್ಸ್ ತಂಡದವರು ರನ್ನರ್ಸ್. ಎಂ.ಬಿ.ಎ ವಿಭಾಗದಿಂದ ಪೀಕಿ ಬ್ಲಿಂಡರ್ಸ್ ತಂಡ ಚಾಂಪಿಯನ್ಸ್ ಹಾಗೂ ಹುಡುಗರ ವಿಭಾಗದಲ್ಲಿ ಸ್ಪಂದನ್ ಹಾಗೂ ಹುಡುಗಿಯರ ವಿಭಾಗದಲ್ಲಿ ಪ್ರಜ್ಞ ಚಾಂಪಿಯನ್‍ರಾದರು.


