

ಕುಂದಾಪುರ : ಎಂ. ಸಿ. ಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ದಿನಾಂಕ 10.06.2024 ರಂದು ಸಂತ ಜೋಸೆಫರ ಹಿರಿಯ ಪ್ರಾರ್ಥಮಿಕ ಶಾಲೆ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಎಂ. ಸಿ. ಸಿ ಬ್ಯಾಂಕ್ ಹಲವು ಯೋಜನೆಗಳನ್ನು ಕೈಗೊಂಡಿದೆ. ಅದರ ಒಂದು ಭಾಗವಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂ. ಸಿ. ಸಿ. ಬ್ಯಾಂಕ್ ಲಿಮಿಟೆಡ್ ಇದರ ಕುಂದಾಪುರ ಶಾಖೆಯ ವ್ಯವಸ್ಥಾಪಕರಾದ ಜ್ಯೋತಿ ಬರೆಟ್ಟೋ, ಬ್ಯಾಂಕ್ ಸಿಬ್ಬಂದಿಗಳಾದ ಆಲ್ಡ್ರಿನ್ ಡಿಸೋಜಾ, ಸ್ಟೀವನ್ ಡಿಸಿಲ್ವಾ, ಶಾಲೆಯ ಮುಖ್ಯ್ಯೊಪಾಧ್ಯಾಯಿನಿ ಸಿಸ್ಟರ್ ಪ್ರೇಮಿಕಾ, ಸುಪೀರಿಯರ್ ಸಿಸ್ಟರ್ ಸುಪ್ರಿಯಾ ವೇದಿಕೆಯಲ್ಲಿ ಹಾಜರಿದ್ದರು.






