ಉದ್ಯಮಿ ಬಿ.ಆರ್ ಶೆಟ್ಟಿ ಸಾಮ್ರಾಜ್ಯಕ್ಕೆ ಅಘಾತ : 131 ದಶಲಕ್ಷ ಡಾಲರ್ ದಂಡ ಕಟ್ಟಲು ಲಂಡನ್ ಕೋರ್ಟು ಆದೇಶ

JANANUDI.COM NETWORK

ಮಂಗಳೂರು ಮೂಲದ ಯು.ಎ,ಇ. ಯ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿಗೆ ಬಾಕ್ರ್ಲೇಸ್ ಕಂಪನಿ ಹಾಕಿದ ಕೇಸ್ ನಲ್ಲಿ ಲಂಡನ್ ಕೋರ್ಟ್ 131 ದಶಲಕ್ಷ ಡಾಲರ್ ಕಟ್ಟುವಂತೆ ಆದೇಶಿಸಿದೆ. ಮೊದಲೇ ದಿವಾಳಿಯೆದ್ದಿರುವ ಬಿ ಆರ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾಕ್ರ್ಲೇಸ್ ಕಂಪನಿ ಪರ ಆದೇಶ ನೀಡಿತ್ತು.
ಮಂಗಳೂರಿನ ಬಿ ಆರ್ ಶೆಟ್ಟಿ, ಯು.ಎ,ಇ. ಯಲ್ಲಿ ಖ್ಯಾತ ಉದ್ಯಮಿಯಾಗಿ ಬೆಳೆದಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಆದರೆ ಈಗ ಅವರು ಬಾಕ್ರ್ಲೇಸ್ ಕಂಪನಿ ಅವರ ವಿರುದ್ದ ವ್ಯಾಜ್ಯ ಹೂಡಿದ್ದಾರೆ ಅದರ ಪ್ರಕಾರ “ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ಬಿಸಿನೆಸ್ ಅಗ್ರಿಮೆಂಟ್ ಪ್ರಕಾರ ಹಣ ಪಾವತಿಸುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ಅವರಿಂದ ಹಣ ಕೊಡಿಸಬೇಕು” ಎಂದು ಬಾಕ್ರ್ಲೇಸ್ ಕಂಪನಿ ಲಂಡನ್ ಕೋರ್ಟ್ ಮೊರೆ ಹೋಗಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಲಂಡನ್ ಕೋರ್ಟ್ ಇದೀಗ ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದೆ.
ಉದ್ಯಮಿ ಬಿ ಆರ್ ಶೆಟ್ಟಿ ವಿರುದ್ಧ ಬಾಕ್ರ್ಲೇಸ್ ಕಂಪನಿ ಕಾನೂನು ಸಮರ ಗೆದ್ದಿದ್ದು ಶೆಟ್ಟಿ 131 ದಶಲಕ್ಷ ಡಾಲರ್ ಪಾವತಿ ಮಾಡಬೇಕಿದೆ.
ಯುಕೆ ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಉದ್ಯಮಿ ಬಿ ಆರ್ ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರ ಸಂಸ್ಥೆಯು ಆರ್ಥಿಕವಾಗಿ ಪರದಾಡುತ್ತಿದ್ದಾರೆ ಎಂದು ಅಲವತ್ತು ಮಾಡಿಕೊಂಡಿದ್ದರು. ಹಾಗಾಗಿ ತಮ್ಮ ಕಕ್ಷಿದಾರ ಸಂಸ್ಥೆಗೆ ಕಾನೂನಾತ್ಮಕವಾಗಿ ವಿನಾಯಿತಿ ನೀಡಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಕೋರ್ಟ್ ಬಿ ಆರ್ ಶೆಟ್ಟಿ ಪರ ವಕೀಲರ ಮನವಿಯನ್ನು ಇದೀಗ ತಿರಸ್ಕರಿಸಿದೆ.
79 ವರ್ಷದ ಅಂತರಾಷ್ಟ್ರೀಯ ಉದ್ಯಮಿ ಬಿ ಆರ್ ಶೆಟ್ಟಿ ಆರ್ಥಿಕ ದಿವಾಳಿತನಕ್ಕೆ ಗುರಿಯಾಗಿದ್ದು, ತೀವ್ರ ಸಂಕಷ್ಟಕ್ಕೆ ಇಡಾಗಿದ್ದು ಅವರು ಸದ್ಯ ಮಂಗಳೂರಿನಲ್ಲಿ ವಾಸ ಮಾಡುತಿದ್ದರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ಬಿ ಆರ್ ಶೆಟ್ಟಿಯ ಖಾತೆಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸುವಂತೆ ಬಾಕ್ರ್ಲೇಸ್ ಕಂಪನಿ ಪರ ವಕೀಲರು ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದರು.