ಜಬಲ್ಪುರ್: ಮಧ್ಯ ಪ್ರದೇಶದ ಕತ್ನಿ ಎಂಬಲ್ಲಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಾವು ಲಂಚ ಸ್ವೀಕರಿಸುತ್ತಿದ್ದಾಗ ಆಗಮಿಸಿದ ಲೋಕಾಯುಕ್ತ ವಿಶೇಷ ಪೊಲೀಸ್ ಎಸ್ಟಾಬ್ಲಿಶ್ಮೆಂಟ್
ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನು ಕಂಡು ದಂಗಾಗಿ ಲಂಚವಾಗಿ ಸ್ವೀಕರಿಸಿದ ಆತ ರೂ. 5,000 ಹಣವನ್ನೇ ಜಗಿದು ನುಂಗಿಬಿಟ್ಟಿದ್ದಾನೆ.
ಕಂದಾಯ ವಿಭಾಗದ ಅಧಿಕಾರಿ ಪಟ್ವಾರಿ ಗಜೇಂದ್ರ ಸಿಂಗ್ ಎಂಬವರು ಸೋಮವಾರ ತಮ್ಮ ಖಾಸಗಿ ಕಚೇರಿಯಲ್ಲಿ ರೂ. 5,000 ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಅಧಿಕಾರಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಲೋಕಾಯುಕ್ತದ ಬಳಿ ದೂರೂ ನೀಡಿದ್ದರು. ಲಂಚ ಸ್ವೀಕರಿಸಿದಾಕ್ಷಣ ಲೋಕಾಯುಕ್ತ ಅಧಿಕಾರಿಗಳನ್ನ ಗಮನಿಸಿದ ಸಿಂಗ್ ಏನು ಮಾಡಬೇಕೆಂದು ತೋಚದೆ ನೋಟುಗಳನ್ನು ನುಂಗಿ ಬಿಟ್ಟಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ವೈದ್ಯರ ಸಹಾಯದಿಂದ ಹಣವನ್ನು ಹೊರಗೆ ತೆಗೆಯಲು ಪ್ರಯತ್ನ ಪಟ್ಟರು. ಹಣ ಸುರುಳಿ ರೂಪದಲ್ಲಿ ವಾಂತಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗ ಅವರು ಚೆನ್ನಾಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ.
ಹಣ ಜಗಿದು ನುಂಗುವ ದ್ರಶ್ಯದ ವಿಡೀಯೊ ಲಬ್ದವಾಗಿದೆ