ರಾಜ್ಯದ 13 ಜಿಲ್ಲೆಗಳಲ್ಲಿ ಲಾಕ್, 16 ಜಿಲ್ಲೆಗಳು ಅನ್ ಲಾಕ್: ಏಲ್ಲಲ್ಲಿ ಇದೆ, ಇಲ್ಲ, ಶರತ್ತುಗಳು ಏನು?

JANANUDI.COM NETWORK

(ಉಡುಪಿ, ದ.ಕನ್ನಡ ಸಡಲಿಕೆ ಇಲ್ಲ)

ಬೆಂಗಳೂರು : ರಾಜ್ಯದಲ್ಲಿ ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ. ಜೊತೆಗೆ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಸಾರಿಗೆ ಸಂಚಾರ , ಹೋಟೆಲ್ , ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಸಹ ಶೇ. 50 ರಷ್ಟು ಜನರೊಂದಿಗೆ ತೆರೆಯೋದಕ್ಕೂ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ .

ಈ ಕುರಿತಂತೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ದರ ಇದೆ.  ಬೆಂಗಳೂರು, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಜಿಲ್ಲೆಗಳಿಗೆ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ.

    ಇನ್ನು ಶೇಕಡ 5 ಕ್ಕಿಂತ ಪಾಸಿಟಿವಿಟಿದ ದರ ಜಾಸ್ತಿ ಇರುವ ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ, ದಕ್ಷಿಣ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಏನಿರುತ್ತೆ, ಏನಿರಲ್ಲ ಎಂಬುವುದನ್ನು ನೋಡುವುದಾದರೆ

ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಅವಕಾಶ

ಎಲ್ಲಾ ಅಂಗಡಿಗಳನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ತೆರಯಲು ಅವಕಾಶ

ರಾಜ್ಯಾದ್ಯಂತ ಕೆ ಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ಮದ್ಯಪಾನ ಹೊರತುಪಡಿಸಿ ಹೋಟೆಲ್ ಗಳನ್ನು ತೆರೆಯಲು ಅವಕಾಶವಿದೆ

ಬಸ್, ಮೆಟ್ರೋ ಸಂಚಾರ ಇರಲಿದೆ, ಆದರೆ 50 % ಪ್ರಯಾಣಿಕರಿಗೆ ಮಾತ್ರ ಅವಕಾಶ

ಎಲ್ಲಾ ಅಂಗಡಿಗಳನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ

ಎಸಿ ಚಾಲನೆ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೊರೆಂಟ್ ಓಪನ್

ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ

ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ

ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆ

ಸರ್ಕಾರಿ, ಖಾಸಗಿ ಕಚೇರಿ ಶೇಕಡ 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆ

ಲಾಡ್ಜ್, ರೆಸಾರ್ಟ್ ಗಳಲ್ಲಿ ಶೇಕಡ 50 ಸಾಮರ್ಥ್ಯ

. ಹೊರಾಂಗಣ ಕ್ರೀಡೆಗೆ ಅವಕಾಶ, ಆದರೆ ವೀಕ್ಷಕರ ಪ್ರವೇಶ ನಿರ್ಬಂಧ

ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯೋದಕ್ಕೆ ಅವಕಾಶನೀಡಲಾಗಿದೆ. ಎಸಿ ಚಾಲನೆಗೊಳಿಸದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಮಧ್ಯಪಾನಹೊರತುಪಡಿಸಿ ಸಂಜೆ 5 ಗಂಟೆಯವರೆಗೆ ಶೇ.50ರಷ್ಟು ಜನರಿಗೆ ಅವಕಾಶ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ. ಬಸ್ ಮತ್ತು ಮೆಟ್ರೋಗೆ ಶೇ.50ರಷ್ಟು ಜನರೊಂದಿಗೆ ಕಾರ್ಯಾಚರಣೆಗೆ ಅವಕಾಶ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಾಡ್ಜ್, ರೆಸಾರ್ಟ್ ಶೇ.50ರಷ್ಟು ಜನರೊಂದಿಗೆ ಅವಕಾಶ. ಜಿಮ್ ಗಳಲ್ಲಿ ಹವಾನಿಯಂತ್ರಣ ಇಲ್ಲದೇ ಅವಕಾಶ. ಶೇ.5ಕ್ಕಿಂತ ಹೆಚ್ಚು ಇರುವಂತ 13 ಜಿಲ್ಲೆಗಳಾದಂತ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಾವಣಗೆರೆ, ಧಾರವಾಡ, ಕೊಡಗು ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ದಿನಾಂಕ 11-06-2021ರ ಆದೇಶವೇ ಮುಂದುವರೆಯಲಿದೆ ಎಂದು ತಿಳಿಸಿದರು.

ಶೇ.10ಕ್ಕಿಂತಹೆಚ್ಚಿರುವಂತಮೈಸೂರುಜಿಲ್ಲೆಯಲ್ಲಿಈಗಇರುವಂತನಿಬಂಧನೆಗಳುಯಥಾಸ್ಥಿತಿಮುಂದುವರೆಯಲಿದೆ. ರಾಜ್ಯಾಧ್ಯಂತನೈಟ್ಕರ್ಪ್ಯೂ, ವಾರಾಂತ್ಯಕರ್ಪ್ಯೂಹಾಗೆಯೇಮುಂದುವರೆಯಲಿದೆ. ಬಸ್ಸಂಚಾರಶೇ.50ರಷ್ಟುಪ್ರಯಾಣಿಕರಿಗೆಮಿತಿಗೊಳಿಸಿ, ಸಂಚಾರಕ್ಕೆಅನುಮತಿನೀಡಲಾಗಿದೆ. ಇಡೀರಾಜ್ಯದಲ್ಲಿನಿರ್ಬಂಧಿಸಿರುವಂತಚಟುವಟಿಕೆಗಳು, ಈಜುಕೊಳ, ಸಭೆಸಮಾರಂಭ, ಪೂಜಾಸ್ಥಳ, ಶಾಫಿಂಗ್ಮಾಲ್, ಅಮ್ಯೂಸ್ಮೆಂಟ್ಪಾರ್ಕ್, ಪಬ್ಗಳಿಗೆನಿರ್ಬಂಧಿಸಲಾಗಿದೆ. ಈಆದೇಶವುಜುಲೈ.5ರವರೆಗೆಜಾರಿಯಲ್ಲಿರಲಿದ್ದು, ಅಲ್ಲಿಯವರೆಗೆವಾರಾಂತ್ಯಹಾಗೂನೈಟ್ಕರ್ಪ್ಯೂಮುಂದುವರೆಸಲಾಗಿದೆಎಂಬುದಾಗಿತಿಳಿಸಿದ್ದಾರೆ