ಬಾರಕೂರು : ಕೆಲ ಒಂದು ಕೆಲಸದಲ್ಲಿ ಸ್ಥಳೀಯರು ಸಹಾಯ ಮಾಡಿದರೆ ಚೆನ್ನಾಗಿರುತ್ತದೆ ಮತ್ತು ಅದು ನಮ್ಮ ಕರ್ತವ್ಯವಾಗುತ್ತದೆ. ಕಳೆದವಾರ ಬಾರಕೂರಿನ ಹಾಳೆಕೋಡಿಯಲ್ಲಿ ಅಂತಾ ನೆರೆ ಬಂದಾಗ ಹಾಲೆಕೊಡಿಯಲ್ಲಿ ನಮ್ಮ ಮಿತ್ತರು ಉದಾರಣೆಯಾದರು.
ಅಂದು ನೆರೆ ಬಂದ ದಿನ ನಾಗಬನದ ಹತ್ತಿರ ತೆಂಗಿನಮರವೊಂದು ಉರುಳಿ ಬಿತ್ತು, ಆದರೆ ಮರ ಬಿದ್ದಾಗ ವಿದ್ಯುತ್ ತಂತಿ ತುಂಡಾಗದೆ ವಿದ್ಯುತ್ ತಂತಿ ಮೇಲೆ ಸಿಕ್ಕಿ ಬಿದ್ದಿತ್ತು. ಮೆಸ್ಕಾಂನ ಸಿಬ್ಬಂದಿ ಮೂರು ಜನ ಸ್ಥಳಕ್ಕೆ ಧಾವಿಸಿದರು, ಆದರೆ ಮರವನ್ನು ತೆರವುಗೊಳಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಮರವನ್ನು ತೆರವು ಮಾಡಿ ತಂತಿಗಳನ್ನು ಪುನಃ ಜೋಡಿಸುವುದು ಕಷ್ಟಕರ ಕೆಲಸಕ್ಕೆ ಸ್ಥಳೀಯರಾದ ಮಿತ್ರರಾದ ದಯಾನಂದ. ಅನಿಲ್ . ಮುದ್ದ, ಜಾನ್ಸನ್. ಚಾರ್ಲಿ. ರೋಶನ್ ಇವರುಗಳು ನೆರೆಯಲ್ಲಿ ದೋಣಿಯನ್ನು ತಂದು, ಮೆಸ್ಕಾಂ ನವರಿಗೆ ಮರವನ್ನು ತೆರವು ಮಾಡಲು ಸಹಕರಿಸಿದರು. ಮೆಸ್ಕಾಂ ಸಿಬಂದಿ ನೆರೆ ಮತ್ತು ಮಳೆಯಲ್ಲೂ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಕ್ಕೆ ಹಾಳೆಕೋಡಿ ಮಿತ್ರರ ಗುಂಪು ಮೆಸ್ಕಾಂ ಸಿಬಂದಿವರಿಗೂ ಆತ್ಮೀಯವಾದ ಧನ್ಯವಾದಗಳನ್ನು ಹೇಳುತ್ತಾರೆ.