ಶ್ರೀನಿವಾಸಪುರ : ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ ಎಂದು ಬಿಆರ್ಸಿ ಕೆ.ಸಿ.ವಸಂತ ಹೇಳಿದರು.
ಪಟ್ಟಣದ ಬಿಆರ್ಸಿ ಕೇಂದ್ರದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಸಾಕ್ಷರತಾ ಪ್ರಮಾಣ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ಸಾಕ್ಷರತೆಯನ್ನು ಸಾಧಿಸಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ನಿಮ್ಮ ಮನೆ ಮತ್ತು ನಿಮ್ಮ ಪಕ್ಕದಮಯ ಅನಕ್ಷರಸ್ಥರಿಗೆ ಅಕ್ಷರ ಕಲಿಸಿಕೊಟ್ಟಾಗ ನೀವು ಕಲಿತ ಋಣಕ್ಕೆ ಸಾರ್ಥಕತೆ ಮೆರೆದಂತಾಗುತ್ತದೆ ಹಾಗೂ ಇನ್ನೊಬ್ಬ ಅನಕ್ಷರಸ್ಥರ ಬಾಳಿಗೆ ದಾರಿದೀಪವಾಗುತ್ತಿರಿ ಎಂದರು .
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಕಲಾ ಶಂಕರ್ ಮಾತನಾಡಿ ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಅಂಶ ಎಂದು ಪರಿಗಣಿಸಲಾಗಿದೆ ಎಂದರು.ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ನಡೆದು ಬಂದ ದಾರಿ ಮತ್ತು. ಸಾಕ್ಷರತೆ ಮಹತ್ವವನ್ನು ಎಲ್ಲಾ ಸಾಕ್ಷರ ಬಂಧುಗಳಿಗೆ ತಿಳಿಸಿಕೊಟ್ಟರು.
ಬಿಆರ್ಸಿ ಸಾಕ್ಷರತಾ ಅಧಿಕಾರಿ ನೋಡಲ್ ಅಧಿಕಾರಿ ವೆಂಕಟಾಚಲಪತಿ , ಸಿಬ್ಬಂದಿ ನಾಗೇಂದ್ರ ಪ್ರಕಾಶ್ ಇಸಿಒ ಗಳಾದ ಆರ್ ಸುಬ್ರಮಣ್ಯ , ವೆಂಕಟರಮಣಪ್ಪ ಕೆ.ಸಿ ಶ್ರೀನಿವಾಸ್ , ಬಿಐಆರ್ಟಿಐ ಅಧಿಕಾರಿ ಜಿ.ವಿ.ಚಂದ್ರಪ್ಪ ಹಾಗು ಸಿಆರ್ಪಿಗಳು ಇದ್ದರು.