ಶ್ರೀನಿವಾಸಪುರ 1 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುವಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಜಿಲ್ಲಾರಕ್ಷಣಾಧಿಕಾರಿ ಎಂ.ನಾರಾಯಣ್ ಸಲಹೆ ನೀಡಿದರು.
ತಾಲೂಕಿನ ರೋಣೂರು ಕ್ರಾಸ್ ಬಳಿಯ ವಿಐಪಿ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಶಾಲಾಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯವಾಗಿ ಮಕ್ಕಳ ತಂದೆತಾಯಿಂದಿರು 10 ನೇ ತರಗತಿ ಹಾಗು ಪಿಯುಸಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ಗಳನ್ನು ತಗೆಸಿಕೊಡಬೇಡಿ ಎಂದು ಕಿವಿಮಾತು ಹೇಳಿದರು. ತಮ್ಮ ಮಕ್ಕಳೊಂದಿಗೆ ತಂದೆತಾಯಿಂದರು ಮಕ್ಕಳೊಂದಿಗೆ ಕ್ಷೇಮ ಸಮಾಚಾರಗಳನ್ನು ಹಾಗು ಇತರೆ ಮಾತುನಾಡಿ , ಮಕ್ಕಳಿಗೆ ಕೇವಲ ಅಂಕಗಳನ್ನೇ ಮಾನದಂಡ ಮಾಡಬಾರದು . ಮಕ್ಕಳಿಗೆ ಓದುವುದರ ಜೊತೆಗೆ ಮೌಲ್ಯಗಳನ್ನು ಕಲಿಸಿಕೊಡಿ ಎಂದು ಸಲಹೆ ನೀಡಿದರು.
ಶ್ರೀನಿವಾಸಪುರ ಹೆಸರನ್ನ ಪ್ರಂಪಚನಾದ್ಯಾಂತ ವಿವಿಧ ಕ್ಷೇತ್ರಗಳಲ್ಲಿ ಪಸರಿಸಲು ಎಲ್ಲಾ ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಗುರಿಯನ್ನು ಮುಟ್ಟುವಂತೆ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಕೈಗೊಂಡು, ಪೋಷಕರ ಹಾಗು ಶಾಲೆಯ ಹೆಸರು ಮುನ್ನೆಲೆಗೆ ತರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಾಲೆ ಹೆಸರನ್ನು ರಾಜ್ಯಮಟ್ಟದಲ್ಲಿ ಹೆಸರು ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ವಿದ್ಯಾಸಂಸ್ಥೆ ತಮ್ಮ ಮಕ್ಕಳ ಗುರಿಯ ಸಾಧನೆಗೆ ಶಾಲೆಯ ಶಿಕ್ಷಕರು, ಶಾಲಾ ಆಡಳಿತ ಮಂಡಲಿ, ಪೋಷಕರು ಹಗಲಿರಲು ದುಡಿಯುತ್ತಾರೆ ಈ ಒಂದು ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ ಕನಸನ್ನು ನನಸು ಮಾಡಲು ಶ್ರದ್ಧಾಭಕ್ತಿಯಿಂದ ಓದಬೇಕು.
ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ರಾಜೀವ್ಗಾಂದಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ|| ಎಂ.ಆರ್.ರವಿಕುಮಾರ್, ಡಾ|| ವೆಂಕಟಗಿರಿ , ಕಾರ್ಯದರ್ಶಿ ಡಾ|| ಕವಿತಾ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಆಹಾರ ಇಲಾಖೆ ಜಿಲ್ಲಾ ನಿವೃತ್ತ ಉಪನಿರ್ದೇಶಕ ನಾರಾಯಣಪ್ಪ , ಎಲ್ಐಸಿ ಡೆವಲಪ್ಮೆಂಟ್ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ, ಪ್ರಾಂಶುಪಾಲೆ ಅಸ್ಮತಬುಸಮ್ ಹಾಗು ಶಿಕ್ಷಕ ಸಿಬ್ಬಂದಿ ವರ್ಗದವರು ಇದ್ದರು.