ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿ.

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ 30: ಹಂಗಳೂರಿನ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರು ಇತ್ತೀಚೆಗೆ ಅಧಿಕ್ರತ ಭೇಟಿ ನೀಡಿದರು.

ಗರ್ವನರ್ ಭೇಟಿ ಸಂದರ್ಭದಲ್ಲಿ ಕ್ಲಬ್ ನವರು ಆನೇಕ ಸೇವಾ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದರು.

ಕ್ಲಬ್ ನ ಅಧ್ಯಕ್ಷ ರಾದ ಲಯನ್ ರಮೇಶ್ ಕೆ ಕುಂದರ್ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯದರ್ಶಿ ಲಯನ್ ವಿಲ್ಫ್ರೆಡ್ ಮಿನೇಜಸ್ ರವರು ವರ್ಷದ ಸೇವಾ ಚಟುವಟಿಕೆಗಳ ವರದಿ ಸಲ್ಲಿಸಿದರು.

ಸೇವಾ ಕಾರ್ಯಕ್ರಮದ ಅಂಗವಾಗಿ ಬಡ ಮಹಿಳೆಗೆ ಸ್ವ ಉದ್ಯೋಗ ನಿಮಿತ ಹೊಲಿಗೆ ಯಂತ್ರವನ್ನು, ಧೃಷ್ಟಿ ಕಳೆದುಕೊಂಡ ಕಲ್ಪನಾ ಹುಡುಗಿಗೆ ಕಣ್ಣಿನ ಚಿಕಿತ್ಸೆಗಾಗಿ ₹25,000/- ಧನ ಸಹಾಯ, ಅಪಘಾತಕ್ಕೆ ಈಡಾದ ರತ್ನಾಕರ ಎಂಬ ರೋಗಿಗೆ ಧನ ಸಹಾಯ ನೀಡಲಾಯಿತು. ಜಿಲ್ಲಾ ಗವರ್ನರ್ ಇಲ್ಲಿನ ಕಲ್ಪನಾ ಇವರ ಕಣ್ಣಿನ ಚಕ್ಸಿಗೆ ಧನ ಸಹಾಯ ಮಾಡಿದರು. ಈ ಸೇವಾ ಚಟುವಟಿಕೆಗಳಿಗೆ ಲಯನ್ ಫಿಲಿಪ್ ಡಿಕೊಸ್ತಾ, ಲಯನ್ ಜಯರಾಜ್ ಶೆಟ್ಟಿ ಮತ್ತು ಪ್ರಪುಲ್ಲ ವಿಠಲ್ ಶೆಟ್ಟಿಯವರು ಧನ ಸಹಾಯ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ 100 ಭಾರಿ ರಕ್ತ ಧಾನ ಮಾಡಿದ ಯೋಜನ ಪ್ರಧಿಕಾರದ ಅಧ್ಯಕ್ಷ ರಾದ ಶ್ರೀ ವಿಜಯ್ ಪೂಜಾರಿ, ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಳಿಸಿದ ಛಯಾಗ್ರಾಹಕರಾದ ಸಂತೋಷ ಕುಂದೇಶ್ವರ್ ಹಾಗೂ HMT ಬಸ್ಸು ತಂಗುದಾಣ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಲಯನ್ ಕೊತ್ವಾಲ್ ಪಧ್ಮನಾಭ ಶೇರುಗಾರ್ ರವರನ್ನು ಸನ್ಮಾನಿಸಲಾಯಿತು.

ಲಯನ್ ವಿಲ್ಫ್ರೆಡ್ ಡಿಸೋಜಾ ವಂದಿಸಿದರು, ಲಯನ್ ರಜನಿ ಮ್ಯಾಥ್ಯೂ ಕಾರ್ಯ ಕ್ರಮ ನಿರೂಪಿಸಿದರು, ಲಯನ್ ಪಧಾಧಿಕಾರಿಗಳು, ಸದಸ್ಯರು ಮತ್ತು ಅಥಿತಿಗಳು ಭಾಗವಹಿಸಿದರು.