

ಕುಂದಾಪುರ; ಮಕ್ಕಳ ಕ್ಯಾನ್ಸರ್ ಜಾಗೃತಿಗಾಗಿ ಹಮ್ಮಿಕೊಂಡ ಮಂಗಳೂರು ಮೂಲದ ದಂಪತಿಗಳ “ಕರ್ಮಭೂಮಿ ಟು ಜನ್ಮಭೂಮಿ” ಓಟಕ್ಕೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ನಿಂದ ಭವ್ಯ ಸ್ವಾಗತ ನೀಡಲಾಯಿತು.
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ, ಮಕ್ಕಳ ಕ್ಯಾನ್ಸರ್ ಜಾಗೃತಿಗಾಗಿ ಮುಂಬಯಿಯಿಂದ ಮಂಗಳೂರಿಗೆ ಮ್ಯಾರಥಾನ್ ಓಟ ನಡೆಸುತ್ತಿರುವ ಮಂಗಳೂರು ಮೂಲದ ರೇಷ್ಮಾ ಶೆಟ್ಟಿ ಮತ್ತು ಗಿರೀಶ್ ಶೆಟ್ಟಿ ದಂಪತಿಗಳಿಗೆ ಹಾಗೂ ಅವರ ತಂಡಕ್ಕೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ತಪಸ್ಯಾ ಫೌಂಡೇಶನ್ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಈ ದಂಪತಿಯ ಮಾನವೀಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಹಮ್ಮಿಕೊಂಡ ಓಟವು ಕುಂದಾಪುರಕ್ಕೆ ಮಾರ್ಚ್ 5ರಂದು ತಲುಪಿದಾಗ ಆತ್ಮೀಯವಾಗಿ ಸ್ವಾಗತಿಸಿ ಅವರ ಉದ್ದೇಶಿತ ಓಟವನ್ನು ಪ್ರಸಂಸಿಸಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ದಂಪತಿಗಳಿಗೆ ಗೌರವ ಸಲ್ಲಿಸಿ, ಅವರ ಮುಂದಿನ ಯಾತ್ರೆಗೆ ಹಾರೈಸಿದರು. ಈ ಮಹತ್ವಾಕಾಂಕ್ಷಿ ಸೇವಾ ಯೋಜನೆಗೆ ಬೆಂಬಲ ನೀಡುವ ಸಲುವಾಗಿ, ತಪಸ್ಯಾ ಫೌಂಡೇಶನ್ಗೆ ಆರ್ಥಿಕ ಸಹಾಯ ಮಾಡುವ ನಿರ್ಧಾರವನ್ನು ಕೂಡಾ ನಮ್ಮ ಕ್ಲಬ್ ಕೈಗೊಂಡಿದೆ. ಈ ಸಹಾಯ ಧನ, ಕ್ಯಾನ್ಸರ್ ಪೀಡಿತ ಮಕ್ಕಳ ಉಚಿತ ಚಿಕಿತ್ಸೆಗೆ ಹಾಗೂ ಜಾಗೃತಿಗೆ ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷರಾದ ಜನನಿ ದಿನಕರ್ ಶೆಟ್ಟಿ, ಕಾರ್ಯದರ್ಶಿ ಲಯನ್ಸ್ ಶ್ರೀಧರ್ ಮರವಂತೆ, ಕೋಶಾಧಿಕಾರಿ ಜಗದೀಶ್, ಸ್ಥಾಪಕ ಅಧ್ಯಕ್ಷ ಲಯನ್ ಕಿರಣ್ ಕುಂದಾಪುರ, ನಿಕಟಪೂರ್ವ ಅಧ್ಯಕ್ಷರಾದ ಲಯನ್ಸ್ ಪ್ರವೀಣ್ ಕುಮಾರ್ ಶೆಟ್ಟಿ, ಲಯನ್ಸ್ ಮೊಹಮ್ಮದ್ ಆಶ್ರಫ್, ಹಾಗೂ ಹೆಚ್ಚಿನ ಪದಾಧಿಕಾರಿಗಳ ಮಾತು ಕುಂದಾಪುರದ ನಾಗರಿಕರ ಸಮಕ್ಷಮದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.


