JANANUDI NEWS NETWORK (EDITOR : BERNARD D’COSTA)
ಕುಂದಾಪುರ: ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ 50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಪ್ರಕಾಶ ಟಿ. ಸೋನ್ಸ್ ರವರು ಲಯನ್ ಕ್ಲಬ್ ಕುಂದಾಪುರದ ನೂತನ ಪದಾದಿಕಾರಿಗಳಗೆ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿ ಹೇಳಿದರು.
ನೂತನ ಅಧ್ಯಕ್ಷರಾಗಿ ನವೀನ ಕುಮಾರ ಶೆಟ್ಟಿ, ಕಾರ್ಯದರ್ಶಿ ಡಾ. ರಾಜೇಂದ್ರ ಕೆ., ಕೋಶಾಧಿಕಾರಿ ಬಿ. ಶಂಕರಶೆಟ್ಟಿಯವರಿಗೆ ಪ್ರಮಾಣ ವಚನ ಭೋದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಜಯಕರ ಶೆಟ್ಟಿಯವರು ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಮಾತನಾಡಿ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಲ. ಕಿರಣ್ ಕುಂದಾಪುರ ಉಪಸ್ಥಿತರಿದ್ದರು.
ಲ.ಅಧ್ಯಕ್ಷ ರಾಧಾಕೃಷ್ಣ ನಾಯಕರವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಜ್ಞೇಶ್ ಪ್ರಭು ಹಾಗೂ ಕೋಶಾಧಿಕಾರಿ ಡಾ. ರವೀಂದ್ರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಉಮೇಶ್ ಭಟ್‍ರವರನ್ನು ಸನ್ಮಾನಿಸುವುದರ ಮೂಲಕ ವೈದ್ಯ ದಿನಾಚರಣೆ ಆಚರಿಸಲಾಯಿತು. ಹಲವಾರು ಸೇವಾಕಾರ್ಯಗಳನ್ನು ಮಾಡಲಾಯಿತು.
For news : bjdcosta@mail.com Contact :9964620998 (WhatsApp)