ಕೋಲಾರ,ಅ.03: ಸೈನಿಕರು, ಪೊಲೀಸರ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಅನನ್ಯವಾದುದು, ತಮ್ಮ ಆರೋಗ್ಯ ಲೆಕ್ಕಿಸದೆ ಅಪರಾಧ ನಡೆದ ಜಾಗದಲ್ಲಿ ಪೆÇಲೀಸರಿಗಿಂತ ಮೊದಲೇ ಪತ್ರಕರ್ತರು ಹೋಗಿರುತ್ತಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಾರಾಯಣ್ ಪ್ರಶಂಶಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಾರಾಯಣ ಹೃದಯಾಲಯದಿಂದ ನಗರದ ಜಾಲಪ್ಪ ಹೊರರೋಗಿಗಳ ವಿಭಾಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರು ಸರಿಯಾಗಿ ಊಟ, ನಿದ್ದೆ ಮಾಡಲ್ಲ. ಪೊಲೀಸರಿಗಿಂತ ಮೊದಲೇ ಅಪಘಾತ, ಅಪರಾಧ ನಡೆದ ಜಾಗದಲ್ಲಿದ್ದು, ವರದಿ ಮಾಡುತ್ತಾರೆ, ಅವರ ಆರೋಗ್ಯ ರಕ್ಷಣೆಗೆ ನಾರಾಯಣ ಹೃದಯಾಲಯ ನೆರವಾಗಿರುವುದು ಶ್ಲಾಘನೀಯ ಎಂದರು.
ನಾವೂ ಪೆÇಲೀಸ್ ಇಲಾಖೆಯಲ್ಲಿ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತಿರುತ್ತೇವೆ ಎಂದ ಅವರು, ಕೋಲಾರ ಪತ್ರಕರ್ತರ ಸಂಘ ರಾಜ್ಯದಲ್ಲಿ ಕ್ರಿಯಾಶೀಲ ಹಾಗೂ ಜನಪರ ಸಂಘ ಎಂದು ಹೆಸರು ಪಡೆದಿದೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋವಿಡ್ ಸಮಯದಲ್ಲಿ ಜಾಲಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯಲ್ಲಿ ಸಾವಿರಾರು ಮಂದಿ ಚಿಕಿತ್ಸೆ ಪಡೆದಿದ್ದು, ಅವರ ಸೇವೆ ಸ್ಮರಣೀಯ ಎಂದರು.
ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ತಪಾಸಣೆಯಿಂದ ಮುನ್ನೆಚ್ಚರಿಕೆ ವಹಿಸಬಹುದು, ದೇಹದೊಳಗಿನ ಕಾಯಿಲೆ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ,ಜೀವ ರಕ್ಷಣೆ ಸಾಧ್ಯ ಈ ನಿಟ್ಟಿನಲ್ಲಿ ಜಾಲಪ್ಪ ಆಸ್ಪತ್ರೆ ಮಾಧ್ಯಮದವರ ಆರೋಗ್ಯ ರಕ್ಷಣೆಗೆ ಸದಾ ನೆರವಾಗಿದೆ ಎಂದು ತಿಳಿಸಿದರು.
ನಾರಾಯಣ ಹೃದಯಾಲಯದ ವೈದ್ಯ ಡಾ.ಯಶವಂತ್ ಲಕ್ಷ್ಮಯ್ಯ ಮಾತನಾಡಿ, ಹೃದಯ ಚಟುವಟಿಕೆಗಳಲ್ಲಿ ಹೃದಯ ತೊಡಗಿಸಿಕೊಳ್ಳಬೇಕು. 35 ವರ್ಷಕ್ಕೆ ಹೃದಯಾಘಾತ ಹೆಚ್ಚಿದೆ. ಕೋವಿಡ್ ಬಳಿಕ ಈ ಸಂಖ್ಯೆ ಹೆಚ್ಚಿರುವುದರಿಂದ ಜಾಗೃತಿ ಮೂಡಿಸಬೇಕು, ವರ್ಷಕ್ಕೆ ಒಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಜಾಲಪ್ಪ ಆಸ್ಪತ್ರೆಯ ಶೇಖ್ ನಸೀರ್ ಸಾಬ್ ಮಾತನಾಡಿ, ಜಾಲಪ್ಪ ಆಸ್ಪತ್ರೆಯ ಆರೋಗ್ಯ ಸೇವೆಗೆ ಪತ್ರಕರ್ತರ ಸಂಘ ಸದಾ ಸ್ಪಂದಿಸಿದೆ, ನಮ್ಮ ಸೇವೆಯನ್ನು ಸಮಾಜಕ್ಕೆ ತಲುಪಿಸಿ ಸಮಾಜದ ಆರೋಗ್ಯ ರಕ್ಷಣೆಗೂ ನೀವು ನೆರವಾಗಿದ್ದೀರಿ, ನಿಮ್ಮ ಆರೋಗ್ಯ ರಕ್ಷಣೆ ಕಾರ್ಯದಲ್ಲಿ ನಾವೂ ಸದಾ ಮುಂಚೂಣಿಯಲ್ಲಿ ಇರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ವೈದ್ಯರಾದ ಡಾ.ಕಿರಣ್ಕುಮಾರ್, ಮಾರ್ಕೇಟಿಂಗ್ ಮ್ಯಾನೇಜರ್ ಶಶಿಧರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವೆಂಕಟರಾಮರೆಡ್ಡಿ, ನರೇಶ್, ವೆಂಕಟರಾಂ, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದ್ದು, ಶಿಬಿರದಲ್ಲಿ ಪತ್ರಕರ್ತರು, ಅವರ ಕುಟುಂಬದವರು ತಪಾಸಣೆಗೆ ಒಳಗಾಗಿ ಶಿಬಿರದ ಪ್ರಯೋಜನ ಪಡೆದುಕೊಂಡರು.