ಶ್ರೀನಿವಾಸಪುರ : ಎಲ್ ಐ ಸಿ ಒಂದು ಜನ ಕ್ಷೇಮಾಭಿವೃದ್ಧಿ ಸಂಸ್ಥೆಯಾಗಿದ್ದು , ಏಜೆಂಟರು ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸುವಂತೆ ಜನರ ಮನವೊಲಿಸಬೇಕು ಎಂದು ತಾಲ್ಲೂಕು ಎಲ್‌ಐಸಿ ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಹೇಳಿದರು .
ಪಟ್ಟಣದ ಎಲ್‌ಐಸಿ ಉಪ ಶಾಖೆಯಲ್ಲಿ ಏರ್ಪಡಿಸಿದ್ದ ಎಲ್‌ಐಸಿ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು , ಎಲ್‌ಐಸಿ ದೇಶದ ಜನರ ಭವಿಷ್ಯದಕಡೆ ಗಮನ ಹರಿಸುವ ಸಂಸ್ಥೆಯಾಗಿ ಮಾತ್ರ ಉಳಿದಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ನೆರವು ನೀಡುತ್ತಿದೆ , ಅದರಿಂದ ದೇಶದ ಪ್ರಗತಿ ಶೀಘ್ರಗತಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ಎಲ್ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಮಾತನಾಡಿ , ಸಂಸ್ಥೆ ಏಜೆಂಟರು ಮನೆ ಮನೆಗೆ ಹೋಗಿ ಜೀವ ವಿಮೆ ಮಹತ್ವ ತಿಳಿಸಬೇಕು. ಅವರವರ ಆರ್ಥಿಕ ಮಟ್ಟಕ್ಕೆತಕ್ಕ೦ತೆ ಪಾಲಿಸಿ ಮಾಡಿಸುವಂತೆ ಮನವೊಲಿಸಬೇಕು. ಪಾಲಿಸಿದಾರರಿಗೆ ಉತ್ತಮ ಸೇವೆ ನೀಡಬೇಕು. ಸಮಯ ಬಂದಾಗ ಎಲ್‌ಐಸಿಯಿಂದ ದೊರೆಯುವ ಸೌಲಭ್ಯ ಕೊಡಿಸಬೇಕು. ಜನರ ವಿಶ್ವಾಸಗಳಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಎಲ್ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಏಜೆಂಟರು ಸಭೆಯಲ್ಲಿ ಭಾಗವಹಿಸಿದರು.