ಶ್ರೀನಿವಾಸಪುರ : ಎಲ್ಐಸಿ ಕಂಪನಿಯು ಸಾರ್ವಜನಿಕರ ರಕ್ಷಣೆಗೆ ನಿಂತಿದೆ. ಖಾಸಗಿ ಕಂಪನಿಗಳಿಂದ ಸಾರ್ವಜನಿಕರು ಮೋಸ ಹೋಗುತ್ತಿದ್ದು ಅದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಶ್ರೀನಿವಾಸಪುರ ಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಶ್ರೀನಿವಾಸಪುರ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ತಾಲೂಕಿನ ಪ್ರತಿನಿದಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಅತಿ ದೊಡ್ಡ ಇನ್ಸೋರೆನ್ಸ್ ಕಂಪನಿ ಇದಾಗಿದ್ದು, ಮಾರುಕಟ್ಟೆಯಲ್ಲಿ ಹತ್ತು ಹಲವಾರು ಕಂಪನಿಗಳು ಇದ್ದು ಅದರಲ್ಲಿ ಎಲ್ಐಸಿ ಕಂಪನಿಯ 64.02% ಕೋಟಿ ಹೂಡಿಕೆ ಇದೆ. ಉಳಿದವು ಬೇರೆ ಕಂಪನಿಗಳಿದ್ದು, ಈ ಒಂದು ದೃಷ್ಟಿಯಿಂದ ಎಲ್ಐಸಿ ಕಂಪನಿ ನಂಬಿಕೆಯ ಕಂಪನಿಯಾಗಿದೆ . ಕೇಂದ್ರ ಸರ್ಕಾರ ಶಾಶ್ವತ ನಿಧಿಯನ್ನ ಎಲ್ಐಸಿ ಕಂಪನಿ ಇಟ್ಟಿದೆ . ಬೇರೆ ಕಂಪನಿಗಳು ದಿವಾಳಿಯಾಗಿತ್ತದೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಮಾತನಾಡಿ ಪ್ರತಿನಿದಿಗಳು ಪಾಲಸಿದಾರರಿಗೆ ಶೈಕ್ಷಣಿಕ, ವ್ಯವಸಾಯ, ವಯೋವೃದ್ಧರಿಗೆ , ಕುಟುಂಬ ನಿರ್ವಹಣೆಗೆ ಸಂಬಂದಿ ಪಾಲಿಸಿ ಹಾಗು ಹೆಣ್ಣು ಮಗುವಿಗೆ ಮದುವೆ ಮಾಡುವ ಸಂದರ್ಭಕ್ಕೆ ಹಣ ಯಾವ ರೀತಿ ಕ್ರೋಡಿಕರಿಸುವುದು ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ತಿಳಿಸುವಂತೆ ಪ್ರತಿನಿದಿಗಳಿಗೆ ತರಬೇತಿ ನೀಡಿ, ಪಾಲಿಸಿದಾರ ಅನಿಸಿಕೆಗೆ ತಕ್ಕಂತೆ ಯಾವ ಪಾಲಿಸಿ ಹೊಂದುವುದು ಅದನ್ನು ಮಾಡಿಸುವಂತೆ ಪ್ರತಿನಿದಿಗಳಿಗೆ ಸೂಚಿಸಿದರು.