ಎಲ್‍ಐಸಿ ಪ್ರತಿನಿಧಿಗಳು ಚುರುಕಾಗಿ ಕಾರ್ಯನಿರ್ವಹಿಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು :ಎಸ್.ವಿ.ಪ್ರಸಾದ್

ಶ್ರೀನಿವಾಸಪುರ: ಎಲ್‍ಐಸಿ ಪ್ರತಿನಿಧಿಗಳು ಚುರುಕಾಗಿ ಕಾರ್ಯನಿರ್ವಹಿಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‍ಐಸಿ ಒಂದು ಸಮಾಜ ಮುಖಿ ಸಂಸ್ಥೆಯಾಗಿದ್ದು, ಜನಪರ ಕಾಳಜಿ ಹೊಂದಿದೆ. ಜನರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಪಾಲಿಸಿ ಪಡೆಯಬೇಕು. ಸಮಾಜದ ಎಲ್ಲ ವರ್ಗದ ಜನರೂ ಸಹ ಜೀವ ವಿಮೆ ಮಾಡಿಸಲು ನೆರವಾಗಬೇಕು. ಎಲ್‍ಐಸಿ ಪಾಲಿಸಿ ಪಡೆದ ಕುಟುಂಬ ಸಂಭವನೀಯ ದುರ್ಘಟನೆಗಳಿಂದ ಉಂಟಾಗುವ ಕಷ್ಟ ನಷ್ಟದ ನಿವಾರಣೆಗೆ ಸಹಾಯಕವಾಗುವುದು ಎಂಬ ವಿಷಯವನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಹಾಗೂ ಎಲ್‍ಐಸಿ ಪ್ರತಿನಿಧಿಗಳು ಇದ್ದರು.