ಶ್ರೀನಿವಾಸಪುರ: ಎಲ್ಐಸಿ ಜೀವನ ಉತ್ಸವ ಪಾಲಿಸಿ, ಪಾಲಿಸಿದಾರರಿಗೆ ವರದಾನವಾಗಿದೆ ಎಂದು ಎಲ್ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಲ್ಐಸಿ ಜೀವನ ಉತ್ಸವ ಪಾಲಸಿ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಸಿ ಮುಗಿದ ಬಳಿಕವೂ ಪಾಲಿಸಿದಾರರಿಗೆ ಜೀವನಪರ್ಯಂತ ಪಾಲಿಸಿಯ ಶೇ.10 ರಷ್ಟು ಹಣ ನೀಡುವುದು ಈ ಪಾಲಿಸಿ ವಿಶೇಷ ಎಂದು ಹೇಳಿದರು.
ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಜೀವನ ಉತ್ಸವ ಪಾಲಿಸಿ ಪ್ರಚಾರ ಮಾಡಬೇಕು. ಈ ಪಾಲಿಸಿಯಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗುವುದರಿಂದ ಹೆಚ್ಚು ಪಾಲಿಸಿ ಮಾಡಿಸಬೇಕು. ಸೇವಾ ಮನೋಭಾವದಿಂದ ಈ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಮಾಜಕ್ಕೆ ಆರ್ಥಿಕ ದೃಢತೆ ನೀಡುವಲ್ಲಿ ಎಲ್ಐಸಿ ಮುಂಚೂಣಿಯಲ್ಲಿದೆ. ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡುವುದರ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಆದ್ದರಿಂದ ಜನರ ಮನವೊಲಿಸಿ ಈ ವಿಶೇಷ ಪಾಲಿಸಿ ಮಾಡಿಸಬೇಕು ಎಂದು ಹೇಳೀದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್, ಲಿಖಿತ್ ಕುಮಾರ್, ಪ್ರತಿನಿಧಿಗಳಾದ ಪ್ರಮೀಳ, ಪೆದ್ದನ್ನ, ಶ್ರೀನಿವಾಸ್, ಎಸ್.ಲಕ್ಷ್ಮಣಬಾಬು ಇದ್ದರು.