ಶ್ರೀನಿವಾಸಪುರ : ದೇಶದಲ್ಲೆ ಎಲ್ಐಸಿಯು ದೊಡ್ಡ ಸಂಸ್ಥೆಯಾಗಿದ್ದು, ಎಲ್ಐಸಿ ಸಂಸ್ಥೆಯು ಖಾಸಗಿ ಸಂಸ್ಥೆಗಳಿಂತ ಹೆಚ್ಚು ಭದ್ರತೆಯನ್ನು ನೀಡಲಿದೆ. ದೇಶದ ಅತಿವೃಷ್ಟಿ , ಅನಾವೃಷ್ಟಿ ಸಮಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸುತ್ತಿದೆ ಎಂದು ಎಲ್ಐಸಿ ಕೇಂದ್ರ ಶಾಖೆಯ ಬೆಂಗಳೂರಿನ ವಿಭಾಗ-2ರ ಮಾರುಕಟ್ಟೆ ವ್ಯವಸ್ಥಾಪಕ ಕೆ.ಅರವಿಂದ್ ಹೇಳಿದರು.
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಮಂಗಳವಾರ ಪಾಲಸಿ ಅಭಿಯಾನದ ಅಂಗವಾಗಿ ತಾಲೂಕಿನ ಎಲ್ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಎಲ್ಐಸಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಅರಿವು ಮೂಡಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಮಹಿಳಾ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಬೇಕು. ದುರ್ಘಟನೆಗಳು ಹೇಳಿ ಕೇಳಿ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ಎಲ್ಐಸಿ ಪಾಲಿಸಿದಾರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
24-6-24 ರ ಒಳಗೆ ಪ್ರತಿನಿದಿಗಳು ಹತ್ತು ಸಾವಿರ ಪಾಲಿಸಿಗಳನ್ನು ಮಾಡಿಸಬೇಕು ಪ್ರತಿನಿದಿಗಳು ಹತ್ತು ಸಾವಿರ ಪಾಲಿಸಿಗಳ ಗುರಿಯನ್ನ ಮಟ್ಟಲು ಶ್ರಮಿಸುವಂತೆ ಎಂದು ಸೂಚಿಸಿದರು.
ಮಾರುಕಟ್ಟೆಯ ಸೇಲ್ಸ್ ಮ್ಯಾನೇಜರ್ ಬಷೀರ್ ಅಹಮ್ಮದ್, ಸ್ಥಳೀಯ ಶಾಖೆಯ ವ್ಯವಸ್ಥಾಪಕ ಎಸ್.ವಿ.ಪ್ರಸಾದ್, ಅಧಿಕಾರಿಗಳಾದ ರವಿಶಂಕರ್, ಬಾಲಚಂದ್ರ, ಶ್ರೀನಿವಾಸ್, ಲಿಖಿತ್ಕುಮಾರ್ ಹಾಗೂ ಪ್ರತಿನಿಧಿಗಳು ಇದ್ದರು.