ಕೋಲಾರ:- ಪುಸ್ತಕಗಳು ಜೀವನ ಸಂಗಾತಿಗಳಾದರೆ ಜೀವನದಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಮಹಿಳಾ ಸರಕಾರಿ ಕಾಲೇಜಿನ ಪ್ರಾಂಶುಪಾಲ ಸಿ.ಗಂಗಾಧರರಾವ್ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಮೊಬೈಲ್ ಬಳಕೆಯಿಂದ ಉಪಯೋಗವೂ ಇದೆ, ಅಪಾಯವೂ ಇದೆ, ಆದರೆ, ಪುಸ್ತಕಗಳ ಓದು ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತದೆ, ವಿಷಯ ಪರಿಣಿತಿಗಳಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ನೈತಿಕ ಶಿಕ್ಷಣ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮಾರ್ಕ್ಸ್ ಮತ್ತು ಮನಿ ಹಿಂದೆ ಓಡುತ್ತಿರುವ ವಿದ್ಯಾರ್ಥಿಗಳಲ್ಲಿ ಸಮಗ್ರವಾಗಿ ವ್ಯಕ್ತಿತ್ವ ವಿಕಸನ ಆಗಬೇಕಾದರೆ ಪುಸ್ತಕಗಳ ಓದು ಅನಿವಾರ್ಯವಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಧೈರ್ಯದಿಂದ ಭಾಗವಹಿಸಲು, ಬದುಕಿನ ಸವಾಲುಗಳನ್ನು ಎದುರಿಸಲು, ಕತ್ತಲು ತುಂಬಿದ ಬದುಕಿಗೆ e್ಞÁನದ ಬೆಳಕು ಹರಿಸಲು ಪುಸ್ತಕಗಳು ಸಹಕಾರಿ, ಪುಸ್ತಕಗಳನ್ನು ಓದಿಯೇ ಅಂಬೇಡ್ಕರ್ e್ಞÁನಕ್ಕೆ ಮತ್ತೊಂದು ಹೆಸರು ಎಂಬಂತಾಗಿ ವಿಶ್ವ ವಿಖ್ಯಾತರಾದರೆಂದು ವಿವರಿಸಿದರು.
ಮಹಿಳಾ ಸಮಾಜ ಪಿಯು ಕಾಲೇಜಿನ ಪ್ರಾಂಶುಪಾ ಎಂ.ನವೀನ ಮಾತನಾಡಿ, ಒಂದು ಪುಸ್ತಕ 100 ಗೆಳೆಯರಿಗೆ ಸಮ ಎಂಬುದನ್ನು ಗೌರವಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ನಿತ್ಯವೂ ಮಲಗುವ ಮುನ್ನ ಪುಸ್ತಕವೊಂದನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅರೆ ಬರೆ ಮಾಹಿತಿ ನೀಡುವ ಗೂಗಲ್ ಹುಡುಕಾಟಕ್ಕೆ ಬದಲು ವಿದ್ಯಾರ್ಥಿಗಳು ವಿಷಯವೊಂದರ ಆಳವಾದ ಅಧ್ಯಯನಕ್ಕಾಗಿ ಪುಸ್ತಕಗಳನ್ನು ಅವಲಂಬಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಸಿ.ಗಣೇಶ್ ಮಾತನಾಡಿ, ಗ್ರಂಥಾಲಯದಲ್ಲಿ ಎಲ್ಲಾ ವಿಷಯಗಳ ಪುಸ್ತಕಗಳು ಲಭ್ಯ ಇರುವುದರಿಂದ ವಿದ್ಯಾರ್ಥಿಗಳು ಗ್ರಂಥಾಲಯದ ಸದಸ್ಯರಾಗಿ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಂಥಾಯ ಸಪ್ತಾಹ ಅಂಗವಾಗಿ ಆಯೋಜಿಸಲಾಗಿದ್ದ ಆರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಗ್ರಂಥಾಲಯದ ಅತ್ಯುತ್ತಮ ಓದುಗರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗ್ರಂಥಪಾಲಕರಾದÀ ಆರ್.ನಾಗಮಣಿ ನಿರೂಪಿಸಿ, ಶಿಕ್ಷಕಿ ರಾಜೇಶ್ವರಿ ಪ್ರಾರ್ಥಿಸಿ, ಧನ್ಯಶ್ರೀ ಕನ್ನಡ ಗೀತೆ ಗಾಯನ, ಸಿ.ಗಣೇಶ್ ಸ್ವಾಗತಿಸಿ, ಗ್ರಂಥಾಲಯ ಸಹಾಯಕಿ ಎಸ್.ಎನ್.ಹೇಮಾವತಿ ವಂದಿಸಿದರು.