ಕೋಲಾರ:- ಅಂಬೇಡ್ಕರ್ ದೇಶಕ್ಕೆ ನೀಡಿದ ಅತ್ಯುನ್ನತ ಸಂವಿಧಾನವನ್ನು ಬಳಸಿಕೊಂಡು ಭಾರತ ದೇಶವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಬೇಡ್ಕರ್ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರ ಸಮವಿಧಾನವು ಸಮಾನತೆ, ಸಹೋದರತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ನಾಲ್ಕು ಪ್ರಮುಖ ಅಂಶಗಳ ಮೇಲೆ ನಿಂತಿದೆ, ಸಂವಿಧಾನದ ಈ ಆಶಯಗಳನ್ನು ಪಾಲಿಸಿ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ಅವರು ಇಟ್ಟ ಹೆಜ್ಜೆ ಗುರುತುಗಳಲ್ಲಿ ಕಾಲಿಟ್ಟು ದೇಶವನ್ನು ಮುನ್ನಡೆಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಅಧ್ಯಯನ ಶೀಲತೆ ಅವರನ್ನು ವಿಶ್ವe್ಞÁನಿ ಪಟ್ಟಕ್ಕೇರಿಸಿದೆ, ಯಾವುದೇ ವಿಷಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿ ಮಾತನಾಡುವುದನ್ನು ಅಂಬೇಡ್ಕರ್ ಜೀವಮಾನದುದ್ದಕ್ಕೂ ಕರಗತ ಮಾಡಿಕೊಂಡಿದ್ದರು. ಪ್ರತಿ ವಿದ್ಯಾರ್ಥಿಯು ಅಂಬೇಡ್ಕರ್ರಂತೆ ಅಧ್ಯಯನಶೀಲರಾದರೆ e್ಞÁನವಂತರಾಗಿ ಸುಲಭವಾಗಿ ಜೀವನದ ಗುರಿ ಮುಟ್ಟಬಹುದು ಎಂದರು.
ಅಂಬೇಡ್ಕರ್ರನ್ನು ಕೇವಲ ಜನ್ಮದಿನದಂದು ಮಾತ್ರವೇ ಸ್ಮರಿಸಿಕೊಳ್ಳದೆ ದೇಶಕ್ಕಾಗಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ನಿತ್ಯವೂ ಸ್ಮರಿಸುತ್ತಾ, ಪ್ರತಿಯೊಬ್ಬರೂ ಜಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಭಾರತ ಉಜ್ವಲ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ಕೋಶಾಧ್ಯಕ್ಷ ಎಂ.ನಾಗರಾಜ್, ಜಿಲ್ಲಾ ಸಂಚಾಲಕ ಬಹಾದ್ದೂರ್ ಸಾಬ್, ತಾಲೂಕು ಅಧ್ಯಕ್ಷ ಶ್ರೀರಾಮ್, ತಾಲೂಕು ಕೋಶಾಧ್ಯಕ್ಷ ಗೋಕುಲ ಚಲಪತಿ, ಕಾರ್ಯದರ್ಶಿ ಫಲ್ಗುಣ, ಬಿಇಒ ಕಚೇರಿ ಶಿಕ್ಷಣ ಸಂಯೋಜಕರಾದ ಮುನಿರತ್ನ, ನಂಜುಂಡಪ್ಪ, ಶ್ರೀನಿವಾಸ್, ವ್ಯವಸ್ಥಾಪಕ ಪ್ರಸಾದ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸೇವಾದಳ ಪದ್ಧತಿಯಂತೆ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.
ಭಾರತ ಸೇವಾದಳ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.