ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ; ಬೇಸಿಗೆ ಸಮೀಪಿಸುತ್ತಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪ, ನರೇಗಾ ಕಾಮಗಾರಿಗಳು ಪಂಚಾಯಿತಿಯ ಎಲ್ಲಾ ಹಳ್ಳಿಗಳಿಗೆ ಪಕ್ಷಬೇದವನ್ನು ಮರೆತು ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡೋಣ ಎಂದು ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷಣಿ ರವಣಮ್ಮ ತಿಳಿಸಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಕಛೇರಿಯಲ್ಲಿ ಅಧ್ಯಕ್ಷಣಿ ರವಣಮ್ಮ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡೋಣ ಎಲ್ಲಾ ಗ್ರಾಮಗಳಿಗೂ ಬೀದಿ ದೀಪ, ಸ್ವಚ್ಚತೆ, ನರೇಗಾ ಅಭಿವೃದ್ದಿ ಕೆಲಸಗಳು ಒದಗಿಸೋಣ ಪಂಚಾಯಿತಿ ಅಭಿವೃದ್ದಿಗೆ ಎಲ್ಲಾ ಸದಸ್ಯರು ಒಂದಾಗಿ ಕೆಲಸ ಮಾಡೋಣ ಎಂದರು.
ಪಿಡಿಓ ಶಂಕರಪ್ಪ ಮಾತನಾಡಿ 2021-22ನೇ ಸಾಲಿನ ಸದಸ್ಯರು ಆಯ್ಕೆ ನಂತರ ಇದೇ ಮೊದಲು ಸಾಮಾನ್ಯ ಸಭೆಯಾಗಿದ್ದು, ನೀವು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರು ತಮ್ಮ ಜಮೀನುಗಳಲ್ಲಿ ನಮ್ಮ ಹೊಲ ನಮ್ಮ ದಾರಿ ಹೂಳು ಎತ್ತುವುದು, ಸ್ಮಶಾನ ಅಭಿವೃದ್ದಿ ಹೀಗೆ ಹಲವು ಕಾರ್ಯಕ್ರಮಗಳು ಜಾರಿಯಿದ್ದು, ಇದೇ ತಿಂಗಳು 8 ಮತ್ತು 9 ರಂದು ವಾರ್ಡ್ ಸಭೆ ನಿಮ್ಮ ಗ್ರಾಮಗಳಲ್ಲೆ ನಡೆಯಲಿದ್ದು ಈ ಸಭೆಯಲ್ಲಿ ಭಾಗವಹಿಸಿ ನಿಮ್ಮ ಗ್ರಾಮಕ್ಕೆ ಬೇಕಾದ ಕೆಲಸ ಕಾರ್ಯಗಳ ಪಟ್ಟಿಯನ್ನು ತಯಾರಿಸಿ ನಮಗೆ ನೀಡಿ ಅದನ್ನು ಅನುಷ್ಠಾನ ತರುವ ಕೆಲಸ ನಾವು ಮಾಡುತ್ತೇವೆ ಎಂದರು.
ಸರ್ಕಾರಿ ಶಾಲೆಯ ಅವರಣದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಲು ಜಾಗಕ್ಕೆ ಬಿಇಓ ಗೆ ಅನುಮತಿ ಪತ್ರ ಬರೆಯುತ್ತೇವೆ. ಹಾಗೆಯೇ ಗ್ರಾಮ ಪಂಚಾಯಿತಿಗೆ ಬೇಕಾದ ಪೀಠೋಪಕರಣಗಳು ಖರೀದಿ ಮಾಡಲಾಗುವುದು. ಚಲ್ದಿಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದ್ದು ಇದರ ಅವಧಿ ಮುಗಿದಿದ್ದು, ಪಂಚಾಯಿತಿಯ ವಶಕ್ಕೆ ಪಡೆಯುತ್ತೇವೆ 14 ಮತ್ತು 15 ನೇ ಹಣಕಾಸು ಯೋಜನೆಯಲ್ಲಿ 54 ಲಕ್ಷ ಇದ್ದು ಇದರಲ್ಲಿ 14 ಹಣಕಾಸು ಯೋಜನೆಯಡಿ 29 ಲಕ್ಷಕ್ಕೆ ಕ್ರಿಯಾ ಯೋಜನೆ ತಯಾರಿಸಿದ್ದೇವೆ. ಉಳಿಕೆಯ ಅನುದಾನಕ್ಕೂ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಚೆರ್ಚಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎನ್. ಶ್ರೀನಿವಾಸ್, ಸವಿತಾ, ಪೂತಲಪ್ಪ, ಜಿ.ಗಿರಿಯಪ್ಪ, ಹೆಚ್.ಎನ್. ವೀಣಾ, ಲಕ್ಷ್ಮೀದೇವಮ್ಮ, ರಾಮಾದೇವಿ, ಎಂ.ವಿ. ಲಕ್ಷ್ಮಣರೆಡ್ಡಿ, ಕೆ. ಎಂ. ಆನಂತ್‍ಕುಮಾರ್, ತಾಸೀನಾ ತಾಜ್, ಲಕ್ಷ್ಮೀದೇವಮ್ಮ, ಎಂ.ಟಿ. ಮುನಿಯಪ್ಪ, ನಾಗರತ್ನಮ್ಮ, ಶಿಲ್ಪ, ಜಿ.ಗುರ್ರಪ್ಪ, ಸತ್ಯನಾರಾಯಣ್, ಕರವಸೂಲಿಗಾರ ನಾರಾಯಣಸ್ವಾಮಿ, ಕಂಪ್ಯೂಟರ್ ಆಫ್‍ರೇಟರ್ ಸುನೀತ, ಗ್ರಾಮ ಪಂಚಾಯಿತಿ ಸಿಬ್ಬಂದಿಯಾದ ವೆಂಕಟರವಣಪ್ಪ, ಜಲಗಾರರು ಹಾಜರಿದ್ದರು.