ಕೋಲಾರ:- ಸೌಹಾರ್ದತೆ ಸಾಮರಸ್ಯದಿಂದ ದಸರಾ ಆಚರಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸೋಣ ಎಂದು ಅಂಬೇಡ್ಕರ್ ನಗರ ಶ್ರೀರೇಣುಕಾ ಯಲ್ಲಮ್ಮ ದೇವಾಲಯ ಧರ್ಮಾಧಿಕಾರಿ ಡಾ.ಎ.ಕೃಷ್ಣಪ್ಪ ಹೇಳಿದರು.
ನಗರದಲ್ಲಿ ದಸರಾ ಉತ್ಸವ ಸಮಿತಿಯಿಂದ ವಿಜಯದಶಮಿ ಅಂಗವಾಗಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಕೆ.ಆರ್.ಧನರಾಜ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮದೇವತೆಗಳ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೋಲಾರ ನಗರದಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಎಲ್ಲಾ ಜಾತಿ ಧರ್ಮೀಯರು ಕೂಡಿ ಆಚರಿಸುವಂತ ವಾತಾವರಣವನ್ನು ದಸರಾ ಉತ್ಸವ ಸಮಿತಿ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಕೋಲಾರ ದಸರಾ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ನಗರದಲ್ಲಿ ದಸರಾ ಉತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಆಚರಿಸುವ ಸಲುವಾಗಿ ಸಮಿತಿಯನ್ನು ಆರಂಭಿಸಿದ್ದು, ನಾಲ್ಕು ವರ್ಷಗಳಿಂದಲೂ ದಸರಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಕೋಲಾರ ನಗರದಲ್ಲಿ ಪೆÇಲೀಸ್ ಬಂದೋಬಸ್ತ್ ಹಾಗೂ ಭಯದ ವಾತಾವಾರಣದಲ್ಲಿ ಹಬ್ಬಗಳನ್ನು ಆಚರಿಸದೆ ಎಲ್ಲರೂ ಒಗ್ಗೂಡಿ ಹಬ್ಬಗಳನ್ನು ಆಚರಿಸುವಂತಾಗಲು ದಸರಾ ಉತ್ಸವ ಸಮಿತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಹೊಂದಿದೆ, ನಗರಸಭೆ ಸೇರಿದಂತೆ ಜಿಲ್ಲಾಡಳಿತ ಈ ಕಾರ್ಯಕ್ರಮಗ ಳಲ್ಲಿ ಕೈಜೋಡಿಸಿ ಸಹಕಾರ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಿಂದ ಬನ್ನಿ ಪೂಜೆ ಮುಗಿಸಿಕೊಂಡು ದೇವಾಲಯಗಳಿಗೆ ವಾಪಸ್ ಹಿಂತಿರುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ದೇವಾಲಯಗಳ ದೇವಾನು ದೇವತೆಗಳ ಉತ್ಸವ ಮೂರ್ತಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಗತಿಸಿ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಸದಸ್ಯರಾದ ಮರಳೀಗೌಡ, ಕೆ.ವಿ.ಮಂಜುನಾಥ್, ರಫೀಕ್, ಸಾಕ್, ಡಿವೈಎಸ್ಪಿ ನಾಗ್ತೆ, ಇಮ್ರಾನ್, ಮು.ರಾಘವೇಂದ್ರ, ಮುಖಂಡರಾದ ಓಂಶಕ್ತಿ ಚಲಪತಿ, ಕಿಶೋರ್, ತ್ಯಾಗರಾಜು, ಮಲ್ಲೇಶ್, ಕಿಶೋರ್, ಮುನಿವೆಂಕಟ್, ಪ್ರಶಾಂತ್, ಕೆ.ಟಿ.ಅಶೋಕ, ಅನ್ಸರ್, ಕೌಸರ್, ಡೆಕೋರೇಷನ್ ಕೃಷ್ಣ ಮತ್ತಿತರರು ಹಾಜರಿದ್ದರು.
ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಎನ್.ಹರೀಶ್ಬಾಬು ಮತ್ತು ಸದಸ್ಯರುಗಳು ಅತಿಥಿಗಳನ್ನು ಗೌರವಿಸಿ ಸತ್ಕರಿಸಿದರು. ಶಿಕ್ಷಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.