ಬೆಂಗಳೂರು: ಲೀನಾ ಸಿಕ್ವೇರಾ ಯಾನೆ ಖ್ಯಾತ ನಟಿ ಲೀಲಾವತಿ ಬಾರದ ಲೋಕಕ್ಕೆ ತೆರಳಿರುವ ಕನ್ನಡದ ಕಲಾವತಿಗೆ ರಾಜಕೀಯ ಗಣ್ಯರು, ಸಿನಿಮಾ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಮರೆಯಾದ ಚಂದನವನದ ಹಿರಿಯ ನಟಿಗೆ ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ. ಅಗಲಿದ ರಂಗನಾಯಕಿಗೆ ಅಂತಿಮ ನಮನದ ಬಳಿಕ ಇಂದು ಅಂತ್ಯಸಂಸ್ಕಾರ ನೆರವೇರಲಿದೆ.ನೀಜ ಅಂದರೆ ಲಿಲಾವತಿ ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದು ಅವರ ನೀಜ ಹೆಸರು ಲೀನಾ ಸಿಕ್ವೇರಾ.
ವಯೋಸಹಜ ಕಾಯಿಲೆಯಿಂದ ಲೀಲಾವತಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ಪದೇ ಪದೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಲೀಲಾವತಿಯನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಏನೋ ಕಾಣಿಸಿತ್ತು. ನಿನ್ನೆ ಮಧ್ಯಾಹ್ನ ದಿಢೀರ್ ಬಿಪಿ ಲೋ ಆಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ.
1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನನ ಲೀಲಾವತಿ ಅವರ ಮೂಲ ಹೆಸರು ಲೀನಾ ಸಿಕ್ವೇರಾ 6ನೇ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡ ಅವರು ದೊಡ್ಡಪ್ಪನ ಮಗಳು ಅಂಜಲಿ ಸಿಕ್ವೇರಾರವರ ಅವರನ್ನು ನೋಡಿಕೊಳ್ಳುತಿದ್ದರು. ಅವರು ಮೊದಲು ಬೆಳ್ತಂಗಡಿ ಚರ್ಚಿಗೆ ಹೋಗುತಿದ್ದರು, ಬಳಿಕ ಇಂದಬೆಟ್ಟು ಚರ್ಚ್ ಸ್ಥಾಪನೆ ಆಗಿದ್ದರಿಂದ ಅಲ್ಲಿಗೆ ಹೋಗುತಿದ್ದರು. ಚಿಕ್ಕ ವಯಸ್ಸಿನಲ್ಲೆ ನ್ರತ್ಯ ನಾಟಕಗಳಲ್ಲಿ ಆಸಕ್ತಿಯಿದ್ದವಳನ್ನು ಒರ್ವ ಮುಸ್ಲಿಮರು ಅವರನ್ನು ಮಂಗಳೂರಿಗೆ ಕಳುಹಿಸಿದರು. ನಂತರ ನಾಟಕ ರಂಗಭೂಮಿಯಿಂದ ಸಿನಿಮಾದ ಅವಕಾಶ ಸಿಕ್ಕಿ ಸಿನಿಮಾ ರಂಗಕ್ಕೆ ತೆರಳಿದರು. ಅದ ನಂತರ ಸಿನಿಅಮಾಕ್ಕಾಗಿ ಲೀನಾ ಮದ್ರಾಸಲ್ಲೆ ಉಳಿದರು.ಲೀನಾ ಇದ್ದದ್ದು ಲಿಲಾವತಿಯಾದರು.
ನಂತರ ಬಹುಭಾಷ ನಟಿಯಾಗಿ ಸುಮಾರು ೬೫೦ ಸಿನಿಮಾಗಳಲ್ಲಿ ಲೀಲಾವತಿ ನಟಿಸಿದರು, ಕನ್ನಡದ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯ ಮೈಸೂರಿನ ರಂಗಭೂಮಿಯಲ್ಲಿ ವೃತ್ತಿಜೀವನ ಆರಂಭ 1949ರಲ್ಲಿ ‘ನಾಗಕನ್ನಿಕ’ ಚಿತ್ರದಲ್ಲಿ ಮೊದಲ ಸಲ ನಟಿಸಿದರು. ಅವರ ಸಾಧನೆಗಾಗಿ 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್
ಮಗಳು, ಸಖಿ, ನಾಯಕಿ, ಅಮ್ಮ, ಸಹೋದರಿ ಆಗಿ ನಟನೆ ಗೆಜ್ಜೆ ಪೂಜೆ, ಮಹಾತ್ಯಾಗ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ ಸಾರ್ವ ಭೌಮ ರಾಜಕುಮಾರ್ ನಾಯಕಿಯಾಗಿ ತುಂಬ ಹೆಸರು ಗಳಿಸಿದ್ದರು.
ಅಮ್ಮನೇ ಸರ್ವಸ್ವ ಆಗಿಸಿಕೊಂಡಿದ್ದ ವಿನೋದ್ ರಾಜ್, ತಾಯಿ ಇನ್ನಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಕುಸಿದು ಬಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್ ರಾಜ್, ಇಂತಹ ತಾಯಿ ಮತ್ತೆ ಸಿಗೋಕೆ ಸಾಧ್ಯ ಇಲ್ಲ ಅಂತ ಕಣ್ಣೀರಿಟ್ಟಿದ್ದಾರೆ.