

ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾಜಿ ಯೋಧ ಜಗನ್, ರೈತ ಮುಖಂಡರಾದ ರಾಧಾಕೃಷ್ಣ, ನೆನುಮನಹಳ್ಳಿ ಚಂದ್ರಶೇಖರ್, ಕಾರ್ಮಿಕಮುಖಂಡ ಯಲ್ಲಪ್ಪ, ಮಹಿಳಾ ಮುಖಂಡರಾದ ಅಂಧ್ರಹಳ್ಳಿ ಶಾಂತಮ್ಮ, ಮಂಜುಳಾ ಭೀಮರಾವ್, ಸ್ವಾತಂತ್ರ್ಯ ಹೋರಾಟಗಾರ ಮುನಿಸ್ವಾಮಿ ಅವರ ಪತ್ನಿ ಗೌರಮ್ಮ, ಪೌರ ಕಾರ್ಮಿಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

