JANANUDI.COM NETWORK
ನವದೆಹಲಿ: ಭಾರೀ ಚರ್ಚೆ ಹಾಗೂ ರೈತರ ಭಾರಿ ಸಾವು ನೋವಿಗೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಕೊನೆಗೂ ಪ್ರಧಾನಿ ಮೋದಿ ಘೋಷಿಸಿದ್ದು, ರೈತರ ತೀವ್ರ ಹೋರಾಟ, ಬಲಿದಾನಕ್ಕೆ ಕೊನೆಗೂ ನ್ಯಾಯ ದೊರಕಿದಂತಾಗಿದೆ.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇವೆ. ಇದೇ ತಿಂಗಳು ಸಂಸತ್ತಿನಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇನ್ನೂ ಕೃಷಿ ಕಾಯ್ದೆಗಳ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರ ಸಮಿತಿಯನ್ನು ರಚಿಸುತ್ತೇವೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನೂ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಕಾಲಿ ದಳ ಸ್ವಾಗತಿಸಿದೆ. ಈ ಹೋರಾಟದಲ್ಲಿ ನೂರಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಎಲ್ಲ ರೈತರಿಗೆ ದೊರೆತ ಗೆಲುವು ಎಂದು ಆಲ್ ಇಂಡಿಯಾ ಕಿಸಾನ್ ಸಭಾ ಸ್ವಾಗತಿಸಿದೆ.
ಆದರೆ “ರಾಕೇಶ್ ಟಿಕಾಯತ್ ಕೃಷಿ ಕಾಯಿದೆಯನ್ನು ಮೋದಿ ಸರಕಾರ ಹಿಂಪಡೆದಿದೆ ಎಂದು ಘೋಷಿಸಿದೆಯಷ್ಟೆ, ಇಷ್ಟಕ್ಕೆ ಪ್ರತಿಭಟನೆಯನ್ನು ತಕ್ಷಣವೇ ನಿಲ್ಲಿಸುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದು ಪಡಿಸಿದ ನಂತರವೇ ಪ್ರತಿಭಟನೆಯನ್ನು ನಿಲ್ಲಿಸಲಾಗುವುದೆಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.