ಕುಂದಾಪುರ, ಜೂ 23: ಕುಂದಾಪುರ ಹೋಲಿ ರೋಜರಿ ಚರ್ಚಿನ, ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮನ್ಯರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಅ|ವಂ| ಪಾವ್ಲ್ ರೇಗೊ ನೇತ್ರತ್ವದಲ್ಲಿ ಚರ್ಚಿನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.
ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಪಾವ್ಲ್ ರೇಗೊ ಇವರು ಭಾಗವಹಿಸಿ ಕ್ರೈಸ್ತ ಸಮಾಜದಲ್ಲಿ ಪತ್ರಕರ್ತರಾಗಿ ಸೇವೆ ನೀಡುತ್ತಿರುವ ಹಾಗೇಯೆ ಕೊಂಕಣಿ ಮತ್ತು ಕನ್ನಡದಲ್ಲಿ ಸಾಹಿತ್ಯ, ನಾಟಕಗಳನ್ನು ರಚಿಸಿ ಹೆಸರುವಾಸಿಯಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ. ಮತ್ತು ಕೊಂಕಣಿಯ ಹಲವಾರು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿದ, ಹಲವಾರು ಸಂಗೀತ ಸಿ.ಡಿ. ಗಳನ್ನು ಹೊರತೆಗೆದ ಹೆಸರುವಾಸಿ ಸಂಗೀತಗಾರನಾದ ವಿಲ್ಸನ್ ಒಲಿವೆರಾ ಪಡುಕೋಣೆ ಇವರುಗಳ ಸೇವೆಯನ್ನು ಪರಿಗಣಿಸಿ ಶ್ರೀಸಾನ್ಯರ ದಿನಾಚರಣೆ ಅಂಗವಾಗಿ ಶಾಲು, ಹಾರ, ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಇವರುಗಳನ್ನು ಸನ್ಮಾನಿಸಿದ ಅ|ವಂ| ಪಾವ್ಲ್ ರೇಗೊ ಮಾತನಾಡಿ “ಬರ್ನಾಡ್ ಡಿಕೋಸ್ತಾ ತುಂಬಾ ಸಾಹಿತ್ಯ ರಚಿಸಿದ್ದಾರೆ, ನಮ್ಮ ಮಧ್ಯೆ ಇಂದು ಪತ್ರಕರ್ತನಾಗಿ ನಮ್ಮ ಚಟುವಟಿಕೆಗಳನ್ನು ಸುದ್ದಿ ಪ್ರಕಟಿಸುತ್ತಾರೆ, ಅಲ್ಲದೆ ಕನ್ನಡ ದಿನಪತ್ರಿಕೆಗಳಲ್ಲಿ ಬರುವಂತೆ ಶ್ರಮಿಸುತ್ತಾರೆ, ಅವರ ಸೇವೆ ನಿಸ್ವಾರ್ಥ ಮತ್ತು ಅಮೂಲ್ಯವಾಗಿದೆ, ಹಾಗೇಯೆ ಸಂಗೀತಗಾರರಾದ ವಿಲ್ಸನ್ ಬಹಳ ಹೆಸರುವಾಸಿ, ಅವರ ಸಂಗೀತ ರಸಮಂಜರಿ ಎಲ್ಲ ಕಡೆ ನಡೆದಿದೆ, ¸ ಅವರಿಗೆ ಉತ್ತಮ ಸ್ವರವಿದೆ, ಇವತ್ತು ಸನ್ಮಾನಿಸಲ್ಪಟ್ಟ ಈ ಇಬ್ಬರೂ ಪ್ರತಿಭಾವಂತರು, ಇವರು ನಮ್ಮ ಚರ್ಚಿಗೆ ಕಣ್ಮಣಿಗಳು ನಕ್ಷತ್ರಗಳು’ ಎಂದು ಹೇಳುತ್ತಾ ನಮ್ಮ ಕಥೊಲಿಕ್ ಸಭೆಯು ಸಾಕಷ್ಟು ಉತ್ತಮ ಕಾರ್ಯಗಳನ್ನು ಸೇವೆಯನ್ನು ನೀಡುತ್ತದೆ ಎಂದು ಶ್ಲಾಘಿಸಿದರು.
ಸನ್ಮಾನಿತರಿಬ್ಬರೂ ತಮ್ಮ ಆನ್ನಿಸಿಕೆಗಳನ್ನು ವ್ಯಕ್ತಪಡಿಸಿದರು. ಸನ್ಮಾನಿತರನ್ನು ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಸರ್ವ ಆಯೋಗಗಳ ಸಂಚಾಲಕರಾದ ಪ್ರೇಮ ಡಿಕುನ್ಹಾ ಪರಿಚಯಿಸಿದರು. ಚರ್ಚಿನ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ ಶುಭ ಕೋರಿದರು.
ಕಥೊಲಿಕ್ ಸಭಾ ಅಧ್ಯಕ್ಷರಾದ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು, ಶ್ರೀ ಸಾಮಾನ್ಯ ಆಯೋಗದ ಸಂಚಾಲಕ ವಾಲ್ಟರ್ ಡಿಸೋಜಾ, ವೇದಿಕೆಯಲ್ಲಿದ್ದರು, ಕಥೊಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು, ಡಾ|ಸೋನಿ ಕೋಸ್ತಾ ನಿರೂಪಿಸಿದರು.