ಗಂಗೊಳ್ಳಿ, ಜೂ.18: ಗಂಗೊಳ್ಳಿ ಕಥೊಲಿಕ್ ಸಭಾ ಘಟಕದಿಂದ ಶ್ರೀಸಾಮಾನ್ಯರ ದಿನಾಚರಣೆ ಆಚರಿಸಲಾಯಿತು. ಕಳೆದ 34 ವರ್ಷಗಳಿಂದ ಗಂಗೊಳ್ಳಿ ಕಥೊಲಿಕ್ ಸಭಾ ಘಟಕಕ್ಕೆ, ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ನೀಡಿರುವರಿಗೆ ಗಂಗೊಳ್ಳಿ ಚರ್ಚಿನ ಶ್ರೀಸಾಮನ್ಯ ಆಯೋಗ ಮತ್ತು ಕಥೊಲಿಕ್ ಸಭಾ ಘಟಕದಿಂದ ಸನ್ಮಾನಿಸಿ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿನೋದ್ ಕ್ರಾಸ್ಟೊ ಮಾತನಾಡಿ “ಕಥೊಲಿಕ್ ಸಭಾ ಸಂಘಟನೇಯು, ಶ್ರೀಸಾಮಾನ್ಯರಿಗೆ ಸಮಾಜದಲ್ಲಿ ಸೇವೆ ಮಾಡುವಂತೆ ಪರಿವರ್ತಿಸುತ್ತದೆ, ವಿವಿಧ ರೀತಿಯಲ್ಲಿ ಸೇವೆ ಮಾಡಬಹುದು, ಹೀಗೆ ವಿವಿಧ ರೀತಿಯಲ್ಲಿ ಸೇವೆ ಮಾಡಿ ಸಮಾಜದಲ್ಲಿ ಗುರುತಿಸಲು ಅವಕಾಶ ನೀಡುತ್ತದೆ ಮತ್ತು ನಾಯಕನಾಗಿ ರೂಪಿಸುತ್ತದೆ” ಎಂದರು.
ಗಂಗೊಳ್ಳಿ ಕಥೊಲಿಕ್ ಸಭಾ ಘಟಕದಲ್ಲಿ ಸೇವೆ ನೀಡಿ, ಕುಂದಾಪುರ ವಲಯ ಮತ್ತು ಉಡುಪಿ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಕಿರಣ್ ಕ್ರಾಸ್ಟೊ, ಜೋನ್ಸನ್ ಡಿಆಲ್ಮೇಡಾ, ಜೆರಾಲ್ಡ್ ಕ್ರಾಸ್ತಾ ಮತ್ತು ಹೆರಿಕ್ ಗೊನ್ಸಾಲ್ವಿಸ್ ಇವರನ್ನು ಕೂಡ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಕಿರಣ್ ಕ್ರಾಸ್ಟೊ ಮತ್ತು ಜೋನ್ಸನ್ ಡಿಆಲ್ಮೇಡಾ ‘ನಮ್ಮ ಬೆಳವಣಿಗೆಯಲ್ಲಿ ಕಥೊಲಿಕ್ ಸಭೆಯ ಪಾತ್ರವಿದ್ದು, ಕಥೊಲಿಕ್ ಸಭೆಯ ಪ್ರೇರಣೆಯಿಂದ ಇಂದು ನಾವು ಸಮಾಜದಲ್ಲಿ ಹಲವು ಸಂಘಟನೆಗಳಲ್ಲಿ ತೊಡಗಿಕೊಂಡು ಯಶ್ವಸಿಯಾಗಿದ್ದೇವೆ’ ಎಂದು ತಿಳಿಸಿದರು.
ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ ವಂ|ತೊಮಸ್ ರೋಶನ್ ಡಿಸೋಜಾ ಮಾತನಾಡಿ “ನಮ್ಮ ಗಂಗೊಳ್ಳಿಯಲ್ಲಿ ಕಥೊಲಿಕ್ ಸಭೆಯು ಸಮಾಜಕ್ಕಾಗಿ ಹಾಗೂ ಚರ್ಚಿನ ಕಲ್ಯಾಣಕ್ಕಾಗಿ ಅನೇಕ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಅವರ ಕಾರ್ಯಕ್ರಮ ಶಿಸ್ತುಬದ್ದ ಮತ್ತು ಅಚ್ಚುಕಟ್ಟಾಗಿರುತ್ತವೆ’ ಎಂದು ಶುಭ ಹಾರೈಸಿದರು.ಮಾಜಿ ಅಧ್ಯಕ್ಷರಾದ ವಿಲ್ಸನ್ ರೇಬೆರೊ ಮುಖ್ಯ ಅತಿಥಿಗಳನ್ನು ಪರಿಚಯಿದರು, ಕ್ಲೆರಾ ರೆಬೆಲ್ಲೊ ಪುಷ್ಪ ನೀಡಿದರು. ನಿಯೋಜಿತ ಅಧ್ಯಕ್ಷರಾದ ಒವಿನ್ ರೆಬೆಲ್ಲೊ 24-24 ರ ಕಾರ್ಯಕ್ರಮಗಳನ್ನು ವಿವರಿಸಿದರು. ಪ್ರಸ್ತೂತ ಸಾಲಿನ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಲೊಯ್ಡ್ ರೆಬೆಲ್ಲೊ ವಂದಿಸಿದರು, ಕಾರ್ಯಕ್ರಮದ ಸಂಚಾಲಕಾರದ ಸೆಲಿನ್ ಲೋಬೊ ನಿರೂಪಿಸಿದರು.