ಸಂ.ಲಾರೆನ್ಸ್ ಪ.ಪೂ. ಕಾಲೇಜಿನಲ್ಲಿ ವಿಜ್ರಂಭಣೆಯ ಮಕ್ಕಳ ದಿನಾಚರಣೆ: ಮೂಡಿಬಂದ ಸಂಭ್ರಮ ಆಕರ್ಷಕ ಕಾರ್ಯಕ್ರಮ

JANANUDI.COM NETWORK

ವಿದ್ಯಾರ್ಥಿಗಳು ಬೆಳಗುವ ನಕ್ಷತ್ರ ವಿದ್ದಂತೆ ಅವರು ತಮ್ಮ ಜೀವನದಲ್ಲಿ ಹೆತ್ತವರು ಶಿಕ್ಷಕರು ನೀಡಿದ ಮಾರ್ಗದರ್ಶನವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಈ ಮೂಲಕ ತನ್ನ ವ್ಯಕ್ತಿತ್ವವನ್ನು ಬೆಳೆಸುವುದರೊಂದಿಗೆ ಉತ್ತಮ ಪ್ರಜೆಯಾಗಲು ಬೇಕಾದ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು” ಎಂದು ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ವಂದನೀಯ ಜಾರ್ಜ್ ಡಿಸೋಜರವರು ಹೇಳಿದರು ಅವರು ಕಾಲೇಜಿನಲ್ಲಿ ನಡೆ ಪ್ರತಿಭಾ ಪ್ರದರ್ಶನ ಮತ್ತು ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು 8ನೇ ತರಗತಿಯ ವಿದ್ಯಾರ್ಥಿ ಧನುಷ್ ವಹಿಸಿದ್ದನು . ವಿದ್ಯಾರ್ಥಿಗಳ ಪರವಾಗಿ ಬಸವಣ್ಣ ಹಾಗೂ ಶಿಕ್ಷಕರ ಪರವಾಗಿ ಶ್ರೀ ರಾಜೇಂದ್ರ ಪ್ರಭು ಸಂದೇಶ ನೀಡಿದರು .ಕಾರ್ಯಕ್ರಮದ ಪ್ರಾಯೋಜಕರಾದ ಸಂಸ್ಥೆಯ ಹಳೆ ವಿದ್ಯಾರ್ಥಿ ಶ್ರೀ ಚಾರ್ಲ್ಸ್ ಕ್ವಾಡ್ರಸ್ ಇವರನ್ನು ಅಭಿನಂದಿಸಲಾಯಿತು .ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜಾ ಸ್ವಾಗತಿಸಿ, ಸಹಶಿಕ್ಷಕ ಸ್ಟ್ಯಾನಿ ಮಿನೇಜಸ್ ವಂದಿಸಿದರು. ವೇದಿಕೆಯಲ್ಲಿ ಪ್ರೌಢಶಾಲೆ ಹಿರಿಯ ಶಿಕ್ಷಕಿ ಸುನೀತಾ ಕಾಮತ್ ವಿದ್ಯಾರ್ಥಿ ನಾಯಕರಾದ ದಿಲೀಪ್ ಮತ್ತು ಕೃಷ್ಣ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ನವೀನ್ ಕೊರೆಯ ನಿರೂಪಿಸಿ, ಆಂಗ್ಲ ಭಾಷಾ ಉಪನ್ಯಾಸಕ್ಕೆ ಶ್ರೀಮತಿ ಸುಧಾ ಭಟ್ ಪ್ರಾರ್ಥನ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಗಣೇಶ್ ಗಂಗೊಳ್ಳಿ ಇವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಾ ಪ್ರದರ್ಶನದ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ- ಶಿಕ್ಷಕೇತರರು ಹಾಜರಿದ್ದರು.