ಬೆಂಗಳೂರು: ಕಾಂಗ್ರಸ್ ಸರ್ಕಾರದ ಮಕತ್ವಾಕಾಂಕ್ಷೆಯ ಪಂಚಖಾತ್ರಿ ಯೋಜನಗಳ ಪೃಕಿ ಕೂನೆಯದಾದ ಯುವನಿಧಿಗೆ ಇಂದಿನಿಂದ ಚಾಲನೆ
ನೀಡಲಾಗಿದೆ. ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಪ್ರಯುಕ್ತ. ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಚುನಾವಣೆಗಾಗಿ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿಲ್ಲ ನಿರುದ್ಯೋಗಿ
ಯುವಕರಿಗೆ ನೆರವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ದಿನಬಳಕೆ, ಪೆಟ್ರೋಲ್, ಡಿಸೇಲ್ ದರ
ಏರಿಕೆಯಾಗಿದೆ. ಜನಸಮಾನ್ಯರಿಗೆ ಖರೀದಿಸುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.
1.38 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ ರೂ.2,000 ನೀಡುತ್ತಿರುವುದು ಸತ್ಯವಲ್ಲವೇ? ಇದುವರೆಗೆ ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿಲ್ಲದೇ ಮಹಿಳೆಯರು ಶಕ್ತಿ ಯೋಜನೆಯಡಿ 130 ಕೋಟಿ ಉಚಿತ ಟಿಕೇಟ್ ಪಡೆದು ಪ್ರಯಾಣಿಸಿರುವುದು ಸುಳ್ಳಾಗಲು ಸಾಧ್ಯವೇ? 200 ಯೂನಿಟ್ ವರೆಗೆ ಉಚಿತ ವಿದ್ಯುತ್ 1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 170 ರೂ. ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಲಿ ಎಂದು ಸಿಎಂ ಸವಾಲು ಹಾಕಿದರು.
ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಮಾಸಿಕ 4 ರಿಂದ 5 ಸಾವಿರ ರೂ.ಗಳು ಸೇರುತ್ತಿದ್ದು ವರ್ಷಕ್ಕೆ 48 ರಿಂದ 50 ಸಾವಿ ರೂ.
ನೀಡಲಾಗುತ್ತಿದೆ. ಇದು ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು ಬಡವರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಈ
ಯೋಜನೆಗಳು ಹೆಚ್ಚಿಸುತ್ತಿವೆ ಎಂದರು.
ಯುವನಿಧಿ ಯೋಜನೆಯ ಬಗ್ಗೆಮಾಹಿತಿ: ಪದವಿ ಅಥವಾ ಡಿಫ್ಲೋಮಾ ಪಡೆದ ಬಳಿಕ 6 ತಿಂಗಳವರೆಗೂ ಉದ್ಯೋಗ ದೊರೆಯದೇ ಇದ್ದವರಿಗೆ 2
ವರ್ಷಗಳ ಕಾಲ ನಿರುದ್ಯೋಗ ಭತ್ಯೆ ನೀಡುವುದು ಯುವನಿಧಿ ಯೋಜನೆಯ ಮುಖ್ಯ ಉದ್ದೇಶ. ಪದವಿಧರರಿಗೆ 3,000, ಡಿಫ್ಲೋಮಾದಾರರಿಗೆ 1,500 ರೂ. ಭತ್ಯೆ ನೀಡುವುದಾಗಿ ಚುನಾವಣೆಗೂ ಮೊದಲೇ ಘೋಷಣೆ ಮಾಡಲಾಗಿತ್ತು. ಅದರ ಪ್ರಕಾರ ಸರ್ಕಾರ ರಚನೆಯಾದ 7 ತಿಂಗಳು ಕಳೆದ ಬಳಿಕ ಮತ್ತು ಪದವಿ, ಡಿಫ್ಲೋಮಾ ಪರೀಕ್ಷೆಗಳು ಮುಗಿದ 6 ತಿಂಗಳ ನಂತರ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಕಳೆದ ಡಿಸೆಂಬರ್ 26 ರಂದು ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಲಾಯಿತು. ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ 5.29 ಲಕ್ಷ ಮಂದಿ ಪದವಿ ಹಾಗೂ ಡಿಫ್ಲೋಮಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅವರಲ್ಲಿ ನಿರುದ್ಯೋಗಿಗಳಾಗಿರುವವರು ಯುವನಿಧಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು.ನಿನ್ನೆಯವರೆಗೂ ಸುಮಾರು 66 ಸಾವಿರ ಮಂದಿ ಅರ್ಜಿ
ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಒಟ್ಟು ಫಲಾನುಭವಿಗಳ ಪೈಕಿ ಶೇ.12 ರಷ್ಟು ಮಾತ್ರ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನುಳಿದಂತೆ ಪದವೀಧರರಲ್ಲಿ ಯುವನಿಧಿ ಯೋಜನೆ ಬಗ್ಗೆ ನಿರಾಸಕ್ತಿ, ಶ್ರೀಮಂತಾಗಿದ್ದು, ಅಥವ ಸರ್ಕಾರದ ಧೋರಣೆಗಳು ಇಷ್ಟವಿಲ್ಲದೆ ಕಾರಣಗಳು ಇರುವ ಸಾಧ್ಯತೆಗಳಿವೆ.