ಕಸಬಾ ಸೊಸೈಟಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ – ಜನ ಸ್ನೇಹಿ ಕಾರ್ಯಕ್ಕೆ ಮೆಚ್ಚುಗೆ ಡಿಸಿಸಿ ಬ್ಯಾಂಕಿಗೆ ರೈತರು , ತಾಯಂದಿರು ಆಧಾರ ಸ್ಥಂಭವಾಗಲಿ ಕೆ.ಆರ್.ಶ್ರೀನಿವಾಸಯ್ಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಸಹಕಾರಿ ಕ್ಷೇತ್ರದಿಂದ ರೈತರು , ಮಹಿಳೆಯರು , ಬಡವರು ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಕೋಲಾರ – ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಡೀ ದೇಶಕ್ಕೆ ಸಾಧಿಸಿ ತೋರಿಸಿದೆ , ಜನ ಸ್ನೇಹಿಯಾಗಿ ಬೆಳೆಯುತ್ತಿರುವ ಈ ಸಂಸ್ಥೆಗೆ ರೈತರು , ತಾಯಂದಿರು ಆಧಾರ ಸ್ಥಂಭವಾಗಿ ನಿಲ್ಲಬೇಕು ಎಂದು ಮಾಜಿ ಶಾಸಕ ಕೆ.ಆರ್‌.ಶ್ರೀನಿವಾಸಯ್ಯ ಕರೆ ನೀಡಿದರು .

ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಆಗೋ ಬೇಸ್ ಅಗಿ ಕಾಂಪ್ಲೆಕ್ಸ್ ಮತ್ತು ಸಂಘದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು . ನಿಷ್ಠೆ ಮತ್ತು ಪ್ರಾಮಾಣಿತೆ , ಶ್ರಮದಿಂದ ಯಾವುದೇ ಅಧಿಕಾರದಲ್ಲಿರುವ ವ್ಯಕ್ತಿ ಸಮಾಜದಲ್ಲಿ ಗೌರವಗಳಿಸಲು ಸಾಧ್ಯ ಮತ್ತು ಒಂದು ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ಘನತೆ ಸಾಧಿಸಬಹುದು ಎಂಬುದನ್ನು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸಾಧಿಸಿ ತೋರಿಸಿದ್ದಾರೆ , ಅದರಲ್ಲೂ ದಿವಾಳಿಯಾಗಿದ್ದ ಒಂದು ಸಂಸ್ಥೆಯನ್ನು ಇಷ್ಟೊಂದು ಎತ್ತರಕ್ಕೆ ನಿಲ್ಲಿಸಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯ ಎಂದರು . ಕೋಲಾರ ಡಿಸಿಸಿ ಬ್ಯಾಂಕ್ ಹೆಸರು ಇನ್ನು ಇತಿಹಾಸದ ಪುಟ ಸೇರಿತು ಎಂದು ಭಾವಿಸಿದ್ದೆ ಆದರೆ ಇಷ್ಟೊಂದು ವೇಗವಾಗಿ ತನ್ನ ಮೇಲಿನ ಅಪವಾದ ದೂರ ಮಾಡಿಕೊಂಡು ಮತ್ತೆ ರೈತರು , ತಾಯಂದಿರ ನೆರವಿಗೆ ನಿಲ್ಲುವಷ್ಟು ಶಕ್ತಿ ತುಂಬಿರುವ ಗೋವಿಂದಗೌಡರು ಮತ್ತವರ ಆಡಳಿತ ಮ೦ಡಳಿ ಅ೦ಭಿನಂದನೆಗೆ ಅರ್ಹ ಎಂದರು .


ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮಾರ್ಗದರ್ಶನದಲ್ಲಿ ಶ್ರಮ ಪಟ್ಟಿರುವುದಕ್ಕೆ ಕಸಬಾ ಸೊಸೈಟಿಗೆ ಈಗ ಭಗವಂತ ಒಳ್ಳೆಯದು ಮಾಡಿದ್ದಾನೆ . ಬ್ಯಾಂಕ್ ಸಹ ಈ ಹಿಂದೆ ಕಸಬಾ ಸೊಸೈಟಿ ಮಾದರಿಯಲ್ಲಿ ತೀರ ಸಂಕಷ್ಟ ಪರಿಸ್ಥಿತಿಯಲ್ಲಿತ್ತು ಅದನ್ನು ಗೋವಿಂದಗೌಡರು ಅಧಿಕಾರವಹಿಸಿದ ನಂತರ ಅತ್ಯಂತ ಉತ್ತಮ ಸ್ಥಾನಕ್ಕೆ ತಂದಿದ್ದಾರೆ , ಅದೇ ಮಾದರಿಯಲ್ಲಿ ಕಸಬಾ ಸೊಸೈಟಿಯು ಇಂದು ಉತ್ತಮ ಸ್ಥಿತಿಯಲ್ಲಿರುವುದು ಶ್ಲಾಘನೀಯ ಎಂದರು . ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ , ಆರ್ಥಿಕವಾಗಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಮತ್ತು ಕಸಬಾ ಸೊಸೈಟಿ ಎರಡೂ ಇಂದು ಉತ್ತಮ ಸ್ಥಿತಿಗೆ ತಲುಪಿವೆ , ಈ ಭಾಗದ ಮಹಿಳೆಯರು , ರೈತರಿಗೆ ಜೀವನಾಡಿಯಾಗಿ ಬೆಳೆದಿದೆ ಎಂದು ತಿಳಿಸಿದರು . ಕಸಬಾ ಸೊಸೈಟಿ ಅಭಿವೃದ್ಧಿಗೆ ಪತಿಯೊಬ್ಬರೂ ಕೈಜೋಡಿಸೋಣ , ಸೊಸೈಟಿಯನ್ನು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟಗೊಳಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಬೆಳೆಸೋಣ ಎಂದು ತಿಳಿಸಿ , ಸೊಸೈಟಿ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು ಸ್ಮರಿಸಿದರು . ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ , ಎಲ್ಲರೂ ಸ್ವಾರ್ಥಕ್ಕಾಗಿ ಭೂಮಿಯನ್ನು ಕಬಳಿಸುತ್ತಿರುವ ಕಾಲದಲ್ಲಿ ಅಂದಿನ ಶಾಸಕರಾಗಿದ್ದ ಕೆ.ಆರ್.ಶ್ರೀನಿವಾಸಯ್ಯನವರು ಸೊಸೈಟಿಗೆ ಜಾಗವನ್ನು ಮಂಜೂರು ಮಾಡಿಸಿಕೊಟ್ಟರು . ಇವರೊಟ್ಟಿಗೆ ಛತ್ರಕೋಟಿಹಳ್ಳಿ ರಾಮಣ್ಣನವರು ನ್ಯಾಯಲಯದಲ್ಲೂ ಹೋರಾಟ ಮಾಡಿ ಜಾಗ ಉಳಿಸಿಕೊಂಡಿರುವುದು ಸೊಸೈಟಿಯ ಇತಿಹಾಸ ಎಂದು ಸ್ಮರಿಸಿದರು .


ಬಡವರ ಅನುಕೂಲಕ್ಕಾಗಿ ಸಹಕಾರ ವ್ಯವಸ್ಥೆಯಿದೆ . ನಮ್ಮ ಬದುಕಿಗಿಂತ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಕಾರದ ಸೌಲಭ್ಯಗಳು ತಲುಪಬೇಕೆಂಬುದು ಸಹಕಾರದ ಧೈಯವಾಗಿದೆ . ನಿಷ್ಕ್ರಿಯ ಪರಿಸ್ಥಿತಿಯಲ್ಲಿದ್ದ ಸೊಸೈಟಿಗೆ ಶ್ರೀನಿವಾಸಗೌಡರು ೨.೫ ಕೋಟಿ ರೂ ಸಾಲಸೌಲಭ್ಯವನ್ನು ಕಲಿಸಿದ ಹಿನ್ನಲೆಯಲ್ಲಿ ಇಂದು ೩೦ ಕೋಟಿ ವಹಿವಾಟು ನಡೆಸುವ ಶಕ್ತಿಹೊಂದಿದೆ . ಸಾವಿರಾರು ಮಂದಿಗೆ ಸಾಲಸೌಲಭ್ಯವನ್ನು ಕಲ್ಪಿಸುವ ಮೂಲಕ ಸೊಸೈಟಿ ಬಡವರು , ರೈತರು , ತಾಯಂದಿರ ಜೀವನಾಡಿಯಾಗಿದೆ ಎಂದರು . ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ಬಡ್ಡಿ ರಹಿತವಾಗಿ ೧೦ ವರ್ಷಗಳ ಅವಧಿಗೆ ೧.೫೦ ಕೋಟಿ ರೂ ಮಂಜೂರು ಮಾಡಲಾಗಿದೆ . ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿವಿಧೋದ್ದೇಶ ಸೇವಾ ಕೇಂದ ( ಎಂ.ಎಸ್.ಎಂ.ಇ ) ಯೋಜನೆಯಡಿಯಲ್ಲಿ ಹಂತ , ಹಂತವಾಗಿ ಅನುದಾನ ನೀಡಿ ಕಾರ್ಯಗತ ಗೊಳಿಸಲಾಗುತ್ತಿದೆ ಎಂದು ತಿಳಿಸಿದರು . ಕಸಬಾ ಸೊಸೈಟಿಯ ಮಾಜಿ ಅಧ್ಯಕ್ಷಛತಕೋಡಿಹಳ್ಳಿ ಮುನೇಗೌಡ ಮಾತನಾಡಿ , ಸೊಸೈಟಿಯು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಅಂದಿನ ಶಾಸಕರಾದ ಕೆ.ಆರ್.ಶ್ರೀನಿವಾಸಯ್ಯನವರು ಈ ಜಾಗವನ್ನು ಮಂಜೂರು ಮಾಡಿಸಿದರು . ಇದರ ಜತೆಗೆ ಮಾರ್ಕೆಟಿಂಗ್ ಫಡ್‌ರೇಷನ್ ಅಧ್ಯಕ್ಷರಾಗಿದ್ದ ಕೆ.ಶೀನಿವಾಸಗೌಡರು ೨.೫ ಕೋಟಿ ರೂ ಅರ್ಥಿಕ ಸೌಲಭ್ಯವನ್ನು ಕಲ್ಪಿಸಿ , ಸಹಕಾರ ನೀಡಿದ ಹಿನ್ನಲೆಯಲ್ಲಿ ಸೊಸೈಟಿಯು ಇಂದು ೩೦ ಕೋಟಿ ರೂಗಳ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು .

ಶ್ರೀನಿವಾಸಯ್ಯನವರು ಮತ್ತು ಶ್ರೀನಿವಾಸಗೌಡರು ಹಣತೆಯ ಎಣ್ಣೆ ಮತ್ತು ಬತ್ತಿ ಇಟ್ಟಿದ್ದು , ಬ್ಯಾಲಹಳ್ಳಿ ಗೋವಿಂದಗೌಡರು ಇದನ್ನು ಬೆಳಗಿಸಿದ್ದಾರೆ . ಸೊಸೈಟಿ ಇತಿಹಾಸದಲ್ಲಿ ಇವರ ಸಾಧನೆ ಸ್ಮರಣೀಯ ಎಂದ ಅವರು ಸೂಸೈಟಿಯ ಅಭಿವೃದ್ಧಿಗೆ ಎಲ್ಲರೂ ಸಂಘಟಿತರಾಗಬೇಕು ಎಂದು ಕೋರಿದರು . ಕಾರ್ಯಕ್ರಮದ ಅಧ.ಕತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಜೋಳಘಟ್ಟ ಎನ್‌. ಶ್ರೀನಿವಾಸ್ ಮಾತನಾಡಿ , ಸೊಸೈಟಿಯಿಂದ ೧೭೫ ಅಡಿ ಅಗಲ ಹಾಗೂ ೫೫ ಅಡಿ ಉದ್ದ ವಿಸ್ತೀರ್ಣ ಜಾಗದಲ್ಲಿ ೧.೫೦ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಒಂದು ವಾರದಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ ಎಂದರು .

ಅತಿ ಶೀಘ್ರವಾಗಿ ಕಟ್ಟಡ ನಿರ್ಮಾಣ ಮಾಡಿ ಸೊಸೈಟಿಗೆ ಹಸ್ತಾಂತರ ಮಾಡಬೇಕು . ನಂತರದಲ್ಲಿ ಮೊದಲನೇ ಅಂತಸ್ತು ಕಟ್ಟಡ ನಿರ್ಮಾಣಕ್ಕೆ ಮತ್ತೆ ೧ ಕೋಟಿ ರೂ ಮಂಜೂರು ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದರು .