ಕಾನಿಡೆಂಟ್ ಗ್ರೂಪಿಗೆ ಭೂಮಂಜೂರು-ಗುಂಡುತೋಪಿನಲ್ಲಿ ರಸ್ತೆ !ವಿವರವಾದ ವರದಿ ನೀಡುವಂತೆ ಡಿಸಿಗೆ ಕಂದಾಯ ಇಲಾಖೆ ಪತ್ರ ತಹಸೀಲ್ದಾರ್ ವರದಿಯಲ್ಲಿ ನ್ಯೂನ್ಯತೆ -ವಿವರ ವರದಿ ಕ್ರಮದ ಮಾಹಿತಿಗೆ ಸೂಚನೆ

  • ಬಂಗಾರಪೇಟೆ ವಗ್ಗಯ್ಯನ ದಿನ್ನೆ ಮತ್ತು ಸಿದ್ದನಹಳ್ಳಿಗೆ ಸೇರಿದ 6 ಎಕರೆ 09 ಗುಂಟೆ ಬಿ ಖರಾಬ್ ಜಮೀನುಗಳಲ್ಲಿ ಸರಕಾರಿ ಜಮೀನು ಒತ್ತುವರಿಯಾಗಿದ್ದು, ಈ ಒತ್ತುವರಿ ತೆರವುಗೊಳಿಸಲು ತೆಗೆದುಕೊಂಡಿರುವ ಕ್ರಮಗಳ ಮಾಹಿತಿ.
  • ವಗ್ಗಯ್ಯನ ದಿನ್ನೆ ಸ.ನಂ.4 ರ ಕೆರೆ ಪ್ರದೇಶ ಹಾಗೂ ಜಲಕಾಯ ಮತ್ತು ಜಲಮೂಲ ಪ್ರದೇಶಗಳನ್ನು ಸಂರಕ್ಷಿಸಲು ಕೈಗೊಂಡಿರುವ ಕ್ರಮ.
  • ಅರ್ಜಿದಾರರು ಭೂಮಂಜೂರಾತಿಗೆ ಕೋರಿರುವ ಪ್ರಶ್ನಿತ ಸರಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಲು ಕೈಗೊಂಡಿರುವ ಕ್ರಮ.
  • ಗಾಲ್ ಕಾಂಪೌಂಡ್ ಒಳಗಡೆ ಇರುವ ಕಾಲುದಾರಿ ಹಾದು ಹೋಗಿದ್ದು, ಸಾರ್ವಜನಿಕರು ಇದನ್ನು ಬಳಸುತ್ತಿಲ್ಲ ಹಾಗೂ ಕಾಲುದಾರಿಯು ಅಸ್ತಿತ್ವದಲ್ಲಿರುವುದಿಲ್ಲ ಎಂದು ವರದಿ ನೀಡಲಾಗಿದ್ದು, ಈ ಬಗ್ಗೆ ವಿವರಣೆ.
  • ಸ.ನಂ.4 ರ ಕೆರೆ ಮತ್ತು ಸರವು ಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಮತ್ತು ಸಂಪರ್ಕ ರಸ್ತೆಯನ್ನು ಒದಗಿಸುವ ಬಗ್ಗೆ ವಿವರ.
  • ಸಿದ್ದನಹಳ್ಳಿ ಸ.ನಂ.98 ಗೋಮಾಳ ಜಮೀನಾಗಿದ್ದು, ಗಾಲ್ ಕಾಂಪೌಂಡ್ ಒಳಗೆ ಇದ್ದು, ಈ ಜಮೀನಿನಲ್ಲಿ ತಾತ್ಕಾಲಿಕ ಶೀಟ್‍ಗಳಿಂದ ಶೆಡ್ ಗಳನ್ನು ನಿರ್ಮಿಸಿ ಒತ್ತುವರಿಯಾಗಿದ್ದು, ಅನಕೃತ ಶೆಡ್ ತೆರವುಗೊಳಿಸದಿರಲು ಒತ್ತುವರಿ ತೆರವುಗೊಳಿಸಿ ಸಂರಕ್ಷಿಸದಿರಲು ಕಾರಣ.
  • ಗಾಲ್ ಅಕ್ಕಪಕ್ಕದ ಜಮೀನುಗಳು ಒತ್ತುವರಿಯಾಗಿದ್ದು, ತೆರವುಗೊಳಿಸಲು ಕೈಗೊಂಡ ಕ್ರಮ.
  • ಪ್ರಸ್ತಾವಿತ ಗುಂಡುತೋಪು ಜಮೀನಿನಲ್ಲಿ ಅನಕೃತ ರಸ್ತೆ ನಿರ್ಮಾಣ ಮಾಡಿ ಖಾಸಗಿ ಬಡಾವಣೆಗೆ ಮಾತ್ರ ಸಂಪರ್ಕ ಕಲ್ಪಿಸಿರುವುದರಿಂದ ಸದರಿ ಜಮೀನಿನಲ್ಲಿರುವ ಆರ್ಚ್ ತೆರವುಗೊಳಿಸಲು ಮತ್ತು ಗುಂಡು ತೋಪು ಜಮೀನಿನ ಒತ್ತುವರಿ ತೆರವುಗೊಳಿಸಲು ತೆಗೆದುಕೊಂಡಿರುವ ಕ್ರಮ.
  • ಸರಕಾರಿ ಜಮೀನಿನಲ್ಲಿ ಅನಕೃತವಾಗಿ ನಿರ್ಮಾಣ ಮಾಡಿರುವ ರಸ್ತೆಯನ್ನು ಹೊರತುಪಡಿಸಿ ಖಾಸಗಿ ಬಡಾವಣೆಗೆ ಪ್ರತ್ಯೇಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆಯೇ?
  • ಜಮೀನಿನ ಅಕ್ಕಪಕ್ಕದಲ್ಲಿ ಬರುವ ಸರಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಲು ಕೈಗೊಂಡ ಕ್ರಮ.
    ಈ ಅಂಶಗಳ ಕುರಿತಂತೆ ವಿವರವಾದ ವರದಿ ಕೈಗೊಂಡ ಕ್ರಮದ ಮಾಹಿತಿ ನೀಡುವಂತೆ ಸೆ.10, 2024 ರಂದೇ ಕಂದಾಯ ಇಲಾಖೆಯ ಸರಕಾರದ ಅೀನ ಕಾರ್ಯದರ್ಶಿ ಎಂ.ಭಾನುರೇಖ ವರದಿ ಕೋರಿದ್ದಾರೆ.
    ಸ್ವೀಕೃತವಾಗದ ಮಾಹಿತಿ!
    ಕಂದಾಯ ಇಲಾಖೆಯ ಹಿರಿಯ ಅಕಾರಿಗಳು ಹಲವು ಅಂಶಗಳನ್ನು ಪತ್ರದಲ್ಲಿಯೇ ಪ್ರಸ್ತಾಪಿಸಿ ಈ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆದಿದ್ದರೂ, ಕಾಣದ ಕೈಗಳ ಪ್ರಭಾವದಿಂದಾಗಿ ಡಿಸಿ ಕಚೇರಿಯ ಕೋರಿದ ಮಾಹಿತಿಯು ಹಿರಿಯ ಅಕಾರಿಗಳ ಕಚೇರಿಗೆ ಸ್ಪೀಕೃತವಾಗಿರಲಿಲ್ಲ.
    ಈ ಹಿನ್ನೆಲೆಯಲ್ಲಿ ಹಿಂದಿನ ಪತ್ರದಲ್ಲಿ ಕೋರಿರುವಂತೆ ಎಲ್ಲಾ ಮಾಹಿತಿಯನ್ನು ಹಾಗೂ ಜುಲೈ.4, 2024 ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿಕೆಯಲ್ಲಿ ಅಂತರ್ಗತವಾಗಿರುವ ಕೆಲವೊಂದು ಅಂಶಗಳಿಗೆ ವಿವರವಾದ ವರದಿ ಹಾಗೂ ಕೈಗೊಂಡ ಕ್ರಮದ ಮಾಹಿತಿಯನ್ನು ಕೂಡಲೇ ಒದಗಿಸುವಂತೆ ಸರಕಾರದ ಅೀನ ಕಾರ್ಯದರ್ಶಿ ಪತ್ರ ಬರೆದು ಡಿಸಿಯನ್ನು ಕೋರಿರುವುದು ಆಡಳಿತಾತ್ಮಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಒತ್ತಡ ಮೂಡಿಸಿದೆ.
    ಅಕಾರಿಗಳ ವರ್ಗಾವಣೆಗೆ ಹುನ್ನಾರ

ಬಂಗಾರಪೇಟೆ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕುಗಳಿಗೆ ಸಂಬಂಧಪಟ್ಟಂತೆ ಭೂವಿವಾದದ ಹಲವಾರು ಪ್ರಕರಣಗಳಲ್ಲಿ ನಿಖರವಾದ ಮಾಹಿತಿ ರವಾನಿಸದಂತೆ ಜಿಲ್ಲೆಯ ಕಂದಾಯ ಇಲಾಖೆಯ ಅಕಾರಿಗಳ ಮೇಲೆ ವಿಪರೀತ ಒತ್ತಡ ಹೇರುತ್ತಿರುವುದು ಕಂಡು ಬರುತ್ತಿದೆ. ಹಿಂದೆಯೂ ಇದೇ ವಿಚಾರಗಳಿಗಾಗಿ ಹಲವಾರು ಅಕಾರಿಗು ವರ್ಗವಾಗಿಯೂ ಹೋಗಿದ್ದಾರೆ. ಬರುವ ಅಕಾರಿಗಳು ಒತ್ತಡಕ್ಕೆ ಸಿಲುಕಿ ತಪ್ಪು ಮಾಹಿತಿ ರವಾನಿಸಿ ತಾವು ತಪ್ಪಿತಸ್ಥರಾಗುವ ಭೀತಿಯಲ್ಲಿ ಅಡಕತ್ತರಿಗೆ ಸಿಕ್ಕಿ ಒದ್ದಾಡುವಂತಾಗಿದೆ. ಹಿರಿಯ ಅಕಾರಿಗಳ ಆದೇಶವನ್ನು ಪಾಲಿಸದೆ ತಪ್ಪಿಸಿಕೊಳ್ಳಲಾಗದೆ, ಪ್ರಭಾವಿಗಳ ವಿರುದ್ಧ ನಿಖರ ಮಾಹಿತಿಯನ್ನು ರವಾನಿಸಲಾಗದೆ ತೊಳಲಾಡುವ ಸ್ಥಿತಿ ಸದ್ಯ ಕೋಲಾರ ಜಿಲ್ಲೆಯ ಕೆಲವು ಅಕಾರಿಗಳದ್ದಾಗಿದೆ.

ವಗ್ಗಯ್ಯನ ದಿನ್ನೆ, ಸಿದ್ದನಹಳ್ಳಿ, ಅನಿಗಾನಹಳ್ಳಿ ಗ್ರಾಮದ ಗುಂಡು ತೋಪು ಸರಕಾರಿ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಸೂಚನೆಗಳಿದ್ದರೂ ಅಕಾರಿಗಳು ಈವರೆವಿಗೂ ತೆರವುಗೊಳಿಸುತ್ತಿಲ್ಲ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಬಡವರು ಭೂ ಮಂಜೂರು ಮಾಡಿಕೊಡುವಂತೆ ಕೋರಿರುವ ಅನೇಕ ಪ್ರಸ್ತಾಪನೆಗಳು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಧೂಳು ಹಿಡಿಯುತ್ತಿವೆ, ಪ್ರಭಾವಿ ಸಂಸ್ಥೆಗಳ ಭೂಮಂಜೂರಾತಿ ಕಡತಗಳು ಆದ್ಯತೆ ಮೇರೆಗೆ ಮುನ್ನಲೆಗೆ ಬರುತ್ತವೆ. ಈ ಒತ್ತುವರಿ ತೆರವುಗೊಳಿಸಲು ಆಗ್ರಹಿಸುವ ಹೋರಾಟ ಮುಂದುವರೆಸುತ್ತೇವೆ.

  • ಕೆ.ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ ಕೋಲಾರ.

ಕಾನಿಡೆಂಟ್ ಸಂಸ್ಥೆ ಹಾಗೂ ಅನಿಗಾನಹಳ್ಳಿ ಗುಂಡುತೋಪಿನಲ್ಲಿ ರಸ್ತೆ ನಿರ್ಮಾಣ ವಿಚಾರದಲ್ಲಿ ಕೋರಲಾದ ಮಾಹಿತಿ ಪ್ರಸ್ತಾಪನೆ ಸ್ಪೀಕೃತವಾಗಿರುವುದಿಲ್ಲ, ಆದ್ದರಿಂದ ಪತ್ರದಲ್ಲಿ ಕೋರಿರುವಂತೆ ಪ್ರಸ್ತಾಪನೆಯ ಕುರಿತು ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿಯಲ್ಲಿ ಅಂತರ್ಗತವಾಗಿರುವ ಕೆಲವೊಂದು ಅಂಶಗಳಿಗೆ ವಿವರವಾದ ವರದಿ ಹಾಗೂ ಕೈಗೊಂಡ ಕ್ರಮದ ಮಾಹಿತಿಯನ್ನು ಕೂಡಲೇ ಒದಗಿಸುವಂತೆ ಕೋರಲು ನಿರ್ದೇಶಿತನಾಗಿದ್ದೇನೆ. (ಡಿಸಿಗೆ ಬರೆದ ಪತ್ರದಲ್ಲಿರುವಂತೆ )

  • ಮಹಾಂತಯ್ಯ ಎಸ್.ಹೊಸಮಠ, ಸರಕಾರದ ಅೀನ ಕಾರ್ಯದರ್ಶಿ, ಕಂದಾಯ ಇಲಾಖೆ, (ಭೂಮಂಜೂರಾತಿ)

0511ಕೆಎಲ್‍ಆರ್‍ಪಿ-1
ಕೋಲಾರ ಬಂಗಾರಪೇಟೆ ಮಾರ್ಗ ಮಧ್ಯೆ ಇರುವ ಅನಿಗಾನಹಳ್ಳಿ ವ್ಯಾಪ್ತಿಯ ಗುಂಡುತೋಪು ಒತ್ತುವರಿ ಅಕ್ರಮ ಕಟ್ಟಡ ವಿನ್ಯಾಸಗಳ ನಿರ್ಮಾಣ ಕುರಿತಂತೆ ಜುಲೈ.23, 2024 ರಂದು ಸ್ಥಳ ಪರಿಶೀಲನೆ ಮಾಡುತ್ತಿರುವ ಡಿಸಿ ಅಕ್ರಂಪಾಷಾ ಹಾಗೂ ಅಕಾರಿಗಳ ತಂಡ.