ಕುಂದಾಪುರ, ಫೆ.14: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ ಎಚ್ಎಂ) ಅಭಿಯಾನದಡಿಯಲ್ಲಿ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯ ಮೂಲ ಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಹಮ್ಮಿ ಕೊಳ್ಳಲಾದ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದರಿಂದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ವಿಭಾಗಕ್ಕೆ 2022-23ನೇ ಸಾಲಿನ ರಾಷ್ಟ್ರ ಮಟ್ಟದ ‘ಲಕ್ಷ್ಯ್ ಅವಾರ್ಡ್’ ಲಭಿಸಿದೆ.
ಆಸ್ಪತ್ರೆಯ ಮೂಲಸೌಕರ್ಯ ಬಲವರ್ಧನೆ, ಶುಚಿತ್ವಕ್ಕೆ ಒತ್ತು. ಉತ್ತಮ ನಿರ್ವಹಣೆ ಮೂಲಕವಾಗಿ ತಾಯಿ ಮತ್ತು ಶಿಶುಗಳ ಮರಣ ತಪ್ಪಿಸಲು ಆಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ರಾಜ್ಯದಲ್ಲಿನ 289 ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗಳಲ್ಲಿ 104 ಆಸ್ಪತ್ರೆಗಳನ್ನು ಶಿಫಾರಸು ಮಾಡಿದ್ದು. ಇದರಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿನ ತಾಯಿ-ಮಕ್ಕಳ ಈ ಪುರಸ್ಥಾರ ಲಭಿಸಿದೆ.
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ಶಕ್ತ್ರಚಿಕಿತ್ಸಕ ಡಾ.ರಾಬರ್ಟ್ ರೆಬೆಲ್ಲೋ: ಮಾರ್ಗದರ್ಶನದಲ್ಲಿ ಇಬ್ಬರು ಪ್ರಸೂತಿ ತಜ್ಞರು, ಇಬ್ಬರುಮಕ್ಕಳ ತಜ್ಞರು, ಇಬ್ಬರು. ಅರಿವಳಿಕೆ ತಜ್ಞರು, ಶುಶ್ರೂಷಕ ಅಧಿಕ್ಷಕರು ಹಾಗೂ ಸಿಬ್ಬಂದಿಯನ್ಹೊಳಗೊಂಡ ತಂಡ ಈ ಹೆರಿಗೆ ಆಸ್ಪತ್ರೆಯಲ್ಲಿ ಗುಣಮಟ್ಟದ ನೀಡುತ್ತಿದ್ದು, ಒಂದು ತಿಂಗಳಿನಲ್ಲಿ ಸರಾಸರಿ 100-120 ಹೆರಿಗೆಗಳನ್ನು ಮಾಡಲಾಗುತ್ತದೆ.ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ಕುಂದಾಪುರ ಮತ್ತು ಗ್ರಾಮೀಣ ಭಾಗದಿಂದ ಬರುವರಿಗೆ ಇಲ್ಲಿನ ಸೇವೆ ವರದಾನವಾಗಿದೆ. ಮಾತ್ರವಲ್ಲದೆ ಹೊರ ಜಿಲ್ಲೆಯ ಭಟ್ಕಳ, ನಗರ, ಹೊಸನಗರ, ನಿಟ್ಟೂರು ಮತ್ತು ಮೊದಲಾದಕಡೆಯಿಂದ ಇಲ್ಲಿ ಹೆರಿಗಾಗಿ ಬರುತ್ತಾರೆ.
ಲಕ್ಷ್ಯ್ ಪ್ರಶಸ್ತಿ ಆಯ್ಕೆ ಪ್ರಕ್ರೀಯೆ ಹೇಗೆ?
80-100ಕ್ಕೂ ಅಧಿಕ ಹೆರಿಗೆ ನಡೆಯುವ ಆಸ್ಪತ್ರೆಗಳಿಗೆ ರಾಜ್ಯದ ಮೌಲ್ಯ ಮಾಪನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಅಲ್ಲಿ ಆಯ್ಕೆಯಾದ ಆಸ್ಪತ್ರೆಗಳಿಗೆ ಕೇಂದ್ರದಿಂದ ಬಾಹ್ಯ ಮೌಲ್ಯ ಸಮಾಪನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಹೆರಿಗೆ ವಾರ್ಡ್ನಲ್ಲಿ 300 ಅಂಶಗಳು ಹಾಗೂ ಶಸ್ತ್ರ ಚಿಕಿತ್ಸಾ ‘ಕೊಠಡಿಯಲ್ಲಿ 300 ಅಂಶಗಳನ್ನು ಪರಿಶೀಲಿಸಿ. ಅದರ ನಿರ್ವಹಣೆ ಮೇಲೆ ಮೌಲ್ಯಾಂಕನ ಮಾಡಲಾಗುತ್ತದೆ. ” ಔಷಧಿ, ಉಪಕರಣಗಳ ಲಭ್ಯತೆ, ಆರೈಕೆ, ಶುಚಿತ್ವ, ಆಸ್ಪತ್ರೆ ನಿರ್ವಹಣೆ, ದಾಖಲಾತಿ ನಿರ್ವಹಣೆ ಸಹಿತ ಒಟ್ಟು 600 ಪ್ರಕ್ರಿಯೆಗಳ ಮಾನದಂಡ ಇರುತ್ತದೆ. ರಾಜ್ಯ ತಂಡ ಈಗಾಗಾಲೇ 104 ಆಸ್ಪತ್ರೆಗಳನ್ನು ಶಿಫಾರಸು ಮಾಡಿದೆ. ಬಾಹ್ಯ ಮೌಲ್ಯ ಮಾಪನ ತಂಡ ಅದರಲ್ಲಿ ಭಾಗಶಃ ಸಮೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಿದ್ದು, 104 ಆಸ್ಪತ್ರೆಗಳಲ್ಲಿ ಕುಂದಾಪುರ ಆಸ್ಪತ್ರೆ ಕೂಡ ಸೇರಿದೆ.
“ಹೆರಿಗೆ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ರಕ್ಷಣೆ ಹೊಣೆಗಾರಿಕೆಗಾಗಿ ಸಂಬಂಧಿಸಿದ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆ ಈ ಅಭಿಯಾನದ ಗುರಿ. ಉಡುಪಿ, ಕುಂದಾಪುರ, ದ.ಕ, ಶಿವಮೊಗ್ಗ ಸಹಿತ ರಾಜ್ಯದ ವಿವಿಧ ಜಿಲ್ಲೆಗಳ 104 ಆಸ್ಪತ್ರೆಗಳನ್ನು ಗುರುತಿಸಿ ಬಾಹ್ಯ ಮೌಲ್ಯಮಾಪನಾ ತಂಡಕ್ಕೆ ಕಳುಹಿಸಲಾಗಿದೆ. ಲಕ್ಷ್ಮ ಪ್ರಮಾಣಪತ್ರ ಸಿಕ್ಕಿದ ಈ ಎಲ್ಲಾ 104 ಆಸ್ಪತ್ರೆಗಳಿಗೆ. ವರ್ಷಕ್ಕೆ 4 ಲಕ್ಷ ರೂ. ಅನುದಾನ ಸಿಗುವುದರಿಂದ ಆಸ್ಪತ್ರೆಗಳ ಬಲವರ್ಧನೆ ಹೆಚ್ಚಲು ಸಾಧ್ಯವಿದೆ. ಗುಣಮಟ್ಟದ ಮಾನ್ಯತೆ ಇರುವ ತನಕ ಈ ಯೋಜನೆಯಡಿ ಪ್ರತಿವರ್ಷ ಈ ಅನುದಾನ ಸಿಗಲಿದೆ”
-ಡಾ.ರಾಜಕುಮಾರ್, ಉಪನಿರ್ದೇಶಕರು, ತಾಯಿ ಆರೋಗ್ಯ ಮತ್ತು ಗುಣಮಟ್ಟ ಖಾತ್ರಿ ವಿಭಾಗ
“ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಈಗಾಗಲೇ ರಾಜ್ಯದ ಕಾಯಕಲ್ಪ ಪ್ರಶಸ್ತಿ ಮುಡಿ ಗೇರಿಸಿಕೊಂಡಿದ್ದು, ಇದೀಗ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಗೊಂಡ ಒಂದೇ ವರ್ಷಕ್ಕೆ ಎನ್ಎಚ್ ಎಂ ನಡಿಯಲ್ಲಿ ನೀಡುವ ಪ್ರತಿಷ್ಠಿತ “ಲಕ್ಷ್ಯ್” ಪ್ರಶಸ್ತಿ ಲಭಿಸಿದೆ. ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಶುಶ್ರೂಷಕ ಅಧೀಕ್ಷಕರು ಹಾಗೂ ಸಿಬ್ಬಂದಿಯ ಸೇವೆ ಇಲ್ಲಿ ಗಮನಾರ್ಹವಾಗಿದೆ. ಈ ಪ್ರಶಸ್ತಿ ಲಭಿಸಿದ್ದರಿಂದ ವರ್ಷಕ್ಕೆ 4 ಲಕ್ಷರೂ. ಅನುದಾನ ಸಿಗಲಿದ್ದು, ಆಸತ್ರೆಯನ್ನು ಇನ್ನಷ್ಟು ಬಲವರ್ಧನೆ ಗೊಳಿಸಲು ಸಾಧ್ಯವಾಗಲಿದೆ”
– ಡಾ.ರಾಬರ್ಟ್ ರೆಬೆಲ್ಲೋ, ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು