

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಗೆ ಮಂಗಳವಾರ ಕ್ಷೇತ್ರ ಸಂಯೋಜಕರಾದ ಕೆಸಿ ವಸಂತ ಮೇಡಂ ರವರು ಭೇಟಿ ನೀಡಿ ಅಕ್ಷರ ದಾಸೋಹದಲ್ಲಿ ಬರಗಾಲ ಬಿಸಿಯೂಟದಲ್ಲಿ 72 ಮಕ್ಕಳು ಹಾಜರಾಗಿ ಒಟ್ಟಿಗೆ ಊಟ ಮಾಡುತ್ತಿರುವ ಸ್ಥಳವನ್ನು ಪರಿಶೀಲಿಸಿದರು.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಳಿ ಫಾರಂ, ಇಟ್ಟಿಗೆ ಫ್ಯಾಕ್ಟರಿ ಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ಮಕ್ಕಳ ಊಟಕ್ಕೆ ಅನುವು ಮಾಡಿಕೊಡುತ್ತಿರುವುದಾಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಹಾಗೂ ನೋಡಲ್ ಅಧಿಕಾರಿಗಳಾದ ಆರ್ ಆಂಜನೇಯ ರವರು ತಿಳಿಸಿದರು.
ವೀಕ್ಷಣೆ ಪರಿಶೀಲನೆ ಅಕ್ಷರ ದಾಸೋಹ ಸಿಬ್ಬಂದಿ ವರ್ಗಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು ಸಂಪನ್ಮೂಲ ವ್ಯಕ್ತಿಗಳಾದ ವೆಂಕಟಚಲಪತಿ ,ನಾಗರಾಜ್ , ಬಿಐಇಆರ್ಟಿ ಅಧಿಕಾರಿ ಚಂದ್ರಪ್ಪ, ಮುಖ್ಯ ಶಿಕ್ಷಕರಾದ ಕಲಾಚಾರಿ ಹಾಜರಿದ್ದರು.”