ಶ್ರೀನಿವಾಸಪುರ 1 : ಲಕ್ಷ್ಮೀಪುರ ಗ್ರಾಮಪಂಚಾಯಿತಿ ಪಿಡಿಒ ಶಂಕರಪ್ಪ ಕೋಲಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳವು ಮಂಗಳವಾರ ನಿವೇಶನದ ಇ-ಖಾತೆ ಮಾಡುವ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಖೆಡ್ಡಾಗೆ ಬಿದ್ದಿದ್ದಾರೆ.
ಪಿರ್ಯಾದುದಾರ ವೆಂಕರಾಜು ರವರು ತಂದೆಯ ಹೆಸರಿನಲ್ಲಿ ಹಾಗು ತನ್ನ ತಾಯಿ ರವರ ಹೆಸಿನಲ್ಲಿ ಖಾಲಿ ನಿವೇಶನಗಳು ಇದ್ದು, ನಿವೇಶನಗಳಿಗೆ ಸಂಬಂದಿಸಿದಂತೆ ಇ-ಖಾತ ಮಾಡಲು ಮಾರ್ಚ್ 2022ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಇ-ಖಾತ ಮಾಡಲು ಒಟ್ಟು 15ಸಾವಿರ ಬೇಡಿಕೆ ಇಟ್ಟಿದ್ದ ಪಿಡಿಓ ಮುಂಗಡವಾಗಿ 2ಸಾವಿರವನ್ನು ನೀಡಲಾಗಿತ್ತು . ಉಳಿದ ಹಣವನ್ನು ಲಕ್ಷ್ಮೀಪುರ ಕ್ರಾಸ್ನ ಮಯೂರಿ ಬಾರ್ ಮತ್ತು ರೆಸ್ಟೋರೆಂಟ್ ಮುಂಬಾಗ 13ಸಾವಿರ ರೂಗಳನ್ನು ಲಂಚ ಪಡೆಯುತ್ತಿದ್ದ ವೇಳೆ ಕೋಲಾರದ ಎಸ್ಪಿ ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುದೀರ್ ನೇತೃತ್ವದ ತಂಡ ಲಂಚ ಪಡೆಯುತ್ತಿದ್ದ ವೇಳೆ ಪಿಡಿಓ ಶಂಕರಪ್ಪ ರವರನ್ನು ದಸ್ತಗಿರಿ ಮಾಡಿ. ಲಂಚದ ಹಣ 13ಸಾವಿರರೂಗಳನ್ನು ಮುಂದಿನ ತನಿಖೆಯ ಸಲುವಾಗಿ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಡಿವೈಎಸ್ಪಿ ಸುದೀರ್ ಮಾಹಿತಿ ನೀಡಿದರು.