ಪತ್ರಕರ್ತರ ಭವನಕ್ಕೆ ಲಕ್ಷ ಮೌಲ್ಯದ ಯುಪಿಎಸ್‌ ಕೊಡುಗೆ ಕೋವಿಡ್ ಸುರಕ್ಷತಾಕ್ರಮ ಮರೆಯದಿರಿ – ಸಿಎಂಆರ್ ‌ಶ್ರೀನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಕೋವಿಡ್ ಸಂದರ್ಭದಲ್ಲಿ ಜನತೆಗೆ ಸುದ್ದಿ ತಲುಪಿಸುವ ಕಾತರದಲ್ಲಿರುವ ಪತ್ರಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ತಮ್ಮ ಸುರಕ್ಷತೆ ಕುರಿತು ಎಚ್ಚರವಹಿಸಿ ಎಂದು ರೋಟರಿ ಕೋಲಾರ ಸೆಂಟ್ರಲ್‌ ಅಧ್ಯಕ್ಷ , ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್ ಕರೆ ನೀಡಿದರು . ಶನಿವಾರ ನಗರದ ಪತ್ರಕರ್ತರ ಭವನಕ್ಕೆ ಸುಮಾರು ೧ ಲಕ್ಷ ಮೌಲ್ಯದ ಯುಪಿಎಸ್ ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು . ಪತ್ರಕರ್ತರು ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದೀರಿ ಆದರೆ ನಿಮ್ಮ ಸುರಕ್ಷತೆಯೂ ಮುಖ್ಯವಾಗಿದ್ದು , ಕೋವಿಡ್ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದರು . ರೋಟರಿ ಸಂಸ್ಥೆ ಸಾಮಾಜಿಕ ಕಾಳಜಿಯಿಂದ ಕೋವಿಡ್ ಸಂತಸ್ಥರಿಗೆ ನಿರಂತರವಾಗಿ ಸ್ಪಂದಿಸಿಕೊಂಡು ಬಂದಿದೆ . ೧ ಮತ್ತು ೨ ನೇ ಅಲೆ ಸಂದರ್ಭದಲ್ಲಿ ರೋಗಿಗಳ ಬಳಿಗೆ ಹೋಗಿ ಅವರಿಗೆ ಅಗತ್ಯವಾದ ಮೆಡಿಕಲ್ ಕಿಟ್ ನೀಡಿ ಬಂದಿದ್ದೇವೆ , ಆಸ್ಪತ್ರೆಗಳಿಗೆ ಅಗತ್ಯವಾದ ಆಕಿಜನ್ ಕಾನ್ಸಂಟೇಟರ್‌ಗಳನ್ನು ಒದಗಿಸಿದ್ದೇವೆ ಎಂದು ತಿಳಿಸಿದರು . ಇದೀಗ ಕೋವಿಡ್ ೩ ನೇ ೬೮ ಆರಂಭಗೊಂಡಿದೆ . ಜನತೆ ಮುನ್ನಚ್ಚರಿಕೆ ವಹಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು . ಲಸಿಕೆ ಪಡೆಯಬೇಕು ಎಂದು ಕಿವಿಮಾತು ಹೇಳಿ , ಭನವಕ್ಕೆ ನೀಡಿರುವ ಯುಪಿಎಸ್ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು .
ಸಿಎಂಆರ್‌ ಶೀನಾಥ್‌ರಿಂದ ಯುಪಿಎಸ್ ಸ್ವೀಕರಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ಶೀನಾಥ್ ಅವರು ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲ ಎಲ್ಲಾ ಕಾಲಗಳಲ್ಲೂ ತಮ್ಮ ಸಮಾಜಸೇವೆ ಮುಂದುವರೆಸಿಕೊಂಡು ಬಂದಿದ್ದಾರೆ , ಅವರಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸಿದರು .
ಈ ಸಂದರ್ಭದಲ್ಲಿ ರೋಟರಿ ಸೆಂಟಲ್ ಹಾಗೂ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್‌ , ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್‌ , ಖಜಾಂಚಿ ಎ.ಜಿ.ಸುರೇಶ್‌ಕುಮಾರ್‌ ಮತಿತರರು ಉಪಸ್ಥಿತರಿದ್ದರು .