ಕುಂದಾಪುರ, ಜು. 16: ಕುಂದಾಪುರ ಹೋಲಿ ರೋಜರಿ ಚರ್ಚಿನ ಜನಸಾಮಾನ್ಯರ ಆಯೋಗ ಮತ್ತು ಕುಂದಾಪುರ ಘಟಕ ಕಥೊಲಿಕ್ ಸಭಾ ವತಿಯಿಂದ ಮೊದಲು ಚರ್ಚಿನನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.
ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಸ್ಟ್ಯಾನಿ ತಾವ್ರೊ ಮುಖ್ಯ ಅತಿಥಿಯಾಗಿ 1981 ಇಸವಿಯಿಂದ ನಡೆದು ಬಂದ ಕಥೊಲಿಕ್ ಸಭಾ ಸಂಘಟನೇಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳಿಗೆ ಶಾಲು ಹೊದೆಸಿ ಹೂ ನೀಡಿ ಸನ್ಮಾನಿಸಲಾಯಿತು.
ಕಥೊಲಿಕ್ ಸಭಾದ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ ವಿಕ್ಟರ್ ಡಿಸೋಜಾ, ವಿನಯ ಪಾಯ್ಸ್, ಜೊನ್ಸನ್ ಡಿಆಲ್ಮೆಡಾ, ವಿನೋದ್ ಕ್ರಾಸ್ಟೊ, ವಿಲ್ಸನ್ ಒಲಿವೆರಾ, ಎಲಿಜಬೆತ್ ಡಿಸೋಜಾ, ವಿಲ್ಸನ್ ಡಿಆಲ್ಮೇಡಾ, ಶೈಲಾ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ ಮತ್ತು ಬರ್ನಾಡ್ ಡಿಕೋಸ್ತಾ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನರಾಗಿದ್ದ ಫಿಲಿಪ್ ಗೊನ್ಸಾಲ್ವಿಸ್ ಪರವಾಗಿ ಅವರ ಸಂಬಂಧಿ ಫಿಲಿಫ್ ಗೊನ್ಸಾಲ್ವಿಸ್, ಜೆ.ಬಿ.ಡಿಸೋಜಾರ ಪರವಾಗಿ ಅವರ ಪತ್ನಿ ಆಯ್ರಿನ್ ಡಿಸೋಜಾ, ಜೇಕಬ್ ಡಿಸೋಜಾರ ಪರವಾಗಿ ಅವರ ಪತ್ನಿ ಆಲಿಸ್ ಡಿಸೋಜಾ, ಡೋರಾ ಲೋಬೊರ ಪರವಾಗಿ ಅವರ ಪತಿ ಸ್ಟ್ಯಾನಿ ಲೋಬೊ, ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಅ|ವಂ| ಸ್ಟ್ಯಾನಿ ತಾವ್ರೊ ಮಾತನಾಡಿ ಪವಿತ್ರ ಸಭೆ ಮುನ್ನೆಡೆಯಲು ಜನಸಾಮಾನ್ಯರ ಅವಶ್ಯಕತೆ ತುಂಬ ಇದೆ, ಪವಿತ್ರ ಸಭೆಗಾಗಿ ಮತ್ತು ನಮ್ಮ ಸಮಾಜಕ್ಕಾಗಿ ಸೇವೆ ನೀಡುವ ಕಥೊಲಿಕ್ ಸಭಾ ಸಂಸ್ಥೆ ನಮಗೆ ತುಂಬಾ ಹೆಮ್ಮೆಯ ಸಂಸ್ಥೆ, ಅದು ಯಾವಾಗಲೂ ಜನಸಾಮಾನ್ಯರಿಗಾಗಿ ಸೇವೆ ನೀಡುತ್ತಿದೆ’ ಎಂದು ಶ್ಲಾಘಿಸಿದರು. ಸನ್ಮಾನ ಕಾರ್ಯಕ್ಕೆ ಸಹಕರಿಸಿದ ಇನ್ನೊರ್ವ ಅತಿಥಿ ವರ್ಕರ್ಸ್ ಇಂಡಿಯಾ, ಫೆಡೆರೇಶನ್ ಆಲ್ ಇಂಡಿಯಾ ಕಥೊಲಿಕ್ ಬಿಷಪ್ ಕೊನ್ಫೆರೆನ್ಸ್ ಇದರ ಖಜಾಂಚಿ ಕಿರಣ್ ಕ್ರಾಸ್ಟೊ ಮಾತನಾಡಿ ‘ಕುಂದಾಪುರದಲ್ಲಿ ಜನಸಾಮನ್ಯರ ಸಂಘ ಚಟುವಟಿಕೆಗಳು 1977 ರಲ್ಲೇ ಪ್ರಾರಂಭಗೊಂಡಿದ್ದು, ಆಗಲೇ ಜನಸಾನ್ಯರಲ್ಲಿ ನಾಯಕತ್ವ ಗುಣಗಳಿಂದ ಮುನ್ನೆಲೆಗೆ ಬಂದಿದ್ದರು, ಇಂದು ಕಥೊಲಿಕ್ ಸಭಾ ಬಲಗೊಳ್ಳಲು ಕುಂದಾಪುರವೇ ಕಾರಣವಾಗಿದೆ. ಕುಂದಾಪುರ ಘಟಕ ಮಾಡುವ ಕಾರ್ಯವಿಧಾನಗಳು ಎಲ್ಲಾ ಕಥೊಲಿಕ್ ಸಭಾ ಘಟಕಗಳಿಗೆ ಪ್ರೇರಣೆಯಾಗಿದೆ” ಎಂದು ತಿಳಿಸಿದರು. ಕುಂದಾಪುರ ಘಟಕ ಅವರನ್ನು ಸನ್ಮಾನಿಸಿತು. ರೋಜರಿ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇವರನ್ನು ಕೂಡ ಜನಸಾಮಾನ್ಯರ ದಿನಾಚರಣೆಯ ಪರವಾಗಿ ಸನ್ಮಾನಿಸಲಾಯಿತು. ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷ ‘ಕಥೊಲಿಕ್ ಸಭೆಯ ಸದಸ್ಯರಾಗಲು ಯುವಕರು ಹೆಚ್ಚು ಆಸಕ್ತಿ ವಹಿಸಬೇಕೆಂದು’ ಆಗ್ರಹಿಸಿದರು. ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ದ ಹಾಸ್ಯ ನಟ ಅವರನ್ನು ಕೂಡ ಅವರ ಕಲಾ ಸೇವೆಗೆ ಸನ್ಮಾನಿಸಲಾಯಿತು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಕಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ. ರೋಜರಿ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲಿದ್ದು, ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಕಾರ್ಯಕ್ರಮದ ಸಂಚಾಲಕ ವಾಲ್ಟರ್ ಡಿಸೋಜಾ ಧನ್ಯವಾದ ಅರ್ಪಿಸಿದರು. ಆಲ್ಡ್ರಿನ್ ಡಿಸೋಜಾ ನಿರೂಪಿಸಿದರು.