ಜೂನ್ 25 ಆದಿತ್ಯವಾರವನ್ನು ಶ್ರೀಸಾಮಾನ್ಯರ ದಿನವನ್ನಾಗಿ ಆಚರಿಸಬೇಕೆಂದು ಉಡುಪಿ ಧರ್ಮಪ್ರಾಂತ್ಯ ಘೊಶಿಸಲಾಗಿ, ಮೌಂಟ್ ರೋಜರಿ ದೇವಾಲಯಕ್ಕೆ ಅಧೀನಪಟ್ಟ ಕಥೊಲಿಕ್ ಸಭಾ ಸಂಘಟನೆಯು ಶ್ರೀಸಾಮಾನ್ಯರ ಆಯೋಗದೊಡಗೂಡಿ ಈ ದಿನವನ್ನು ಅರ್ಥವತ್ತಾಗಿ ಆಚರಿಸಿತು. ಆಚರಣೆಯ ಸಭಾಧ್ಯಕ್ಷತೆಯನ್ನು ಕ,ಸಭೆಯ ಅಧ್ಯಕ್ಷರು ಹಾಗೂ ಶ್ರೀಸಾಮಾನ್ಯರ ಆಯೋಗದ ಸಂಚಾಲಕರೂ ಆಗಿರುವ ರೋಜಿ ಕ್ವಾಡ್ರಸ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೂಕ್ ಡಿಸೋಜ, ಕಾರ್ಯದರ್ಶಿ ಪ್ರಿಯಾ ಫುರ್ಟಾಡೊ, ಕ.ಸಭಾ ಉಡುಪಿ ಪ್ರದೇಶ್ ಕೇಂದ್ರಾಧ್ಯಕ್ಷರಾದ ಸಂತೋಷ್ ಕರ್ನೇಲಿಯೊ, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಎಲ್ ರೊಯ್ ಕಿರಣ್ ಕ್ರಾಸ್ತೊ, ಕಾನ್ವೆಂಟಿನ ಭಗಿನಿ ಜೇನ್, ಕ. ಸಭಾ ಕಾರ್ಯದರ್ಶಿ ಜೋರ್ಜ್ ಡಿಸೋಜ ಹಾಜರಿದ್ದರು.
ಲೂಕ್ ಡಿಸೋಜರು ವೇದಿಕೆಯ ಮುಂದಿರಿಸಿದ್ದ ಹೂ ಕುಂಡಲದ ಸಸಿಗೆ ನೀರೊಯ್ಯುವ ಸಾಂಕೇತಿಕ ನಡೆ ಮತ್ತು ವೇದಿಕೆಯಲ್ಲಿದ್ದವರೆಲ್ಲರು ಅವರ ಜೊತೆ ಕೂಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಐಸಿವೈಎಮ್ ಯುವಸಂಘಟನ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವ್ರತ್ತ ಪ್ರೊಫೆಸರ್, ಅವಿಭಜಿತ ಮಂಗಳೂರು ಧರ್ಮ ಪ್ರಾಂತ್ಯದ ಕ. ಸಭಾ ಮಾಜಿ ಅಧ್ಯಕ್ಷರು ಹಾಗೂ ಕ್ರಶಿಕ ರಚನಾ ಪ್ರಶಸ್ತಿ ವಿಜೇತರೂ ಆಗಿರುವ ರಿಚರ್ಡ್ ರೆಬೆಲ್ಲೊರವರನ್ನು ಈ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿಯ ಸೇವೆಯನ್ನು ಶ್ಲಾಗಿಸಿ ಸನ್ಮಾನಿಸಲಾಯಿತು. ತದನಂತರ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ 18 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಯಿತು.
ಎಲ್ ರೊಯ್ ಕಿರಣ್ ಕ್ರಾಸ್ತೊ ಅವರು, ಜನ್ಮದುದ್ದಕ್ಕೂ ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಸ್ವಲ್ಪ ಮಟ್ಟಿಗಾದರೂ ನಮ್ಮಿಂದಾದಷ್ಟು ಶ್ರೀಸಾಮಾನ್ಯರ ಸೇವೆಯ ಮೂಲಕ ಮರಳಿ ಅರ್ಪಿಸಬೇಕೆಂಬ ಸಂದೇಶವನ್ನು ಕೊಟ್ಟರು.
ಮೊದಲಿಗೆ ರೋಜಿ ಕ್ವಾಡ್ರಸ್ ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದರು ಸಭಾಂತ್ಯದಲ್ಲಿ ಜೊರ್ಜ್ ಡಿಸೋಜರು ಧನ್ಯವಾದ ಅರ್ಪಣೆಗೈದರು. ಕಾರ್ಯಕ್ರಮವನ್ನು ಪ್ರಮೀಳಾ ಡಿಸೋಜರು ನಡೆಸಿ ಕೊಟ್ಟರು.