

ಭಾರತದ ಖ್ಯಾತ ಬಾನ್ಸುರಿ ವಾದನ ಕಲಾವಿದ ಪರಿಷತ್ ರಾಜೇಂದ್ರ ಪ್ರಸನ್ನ ನವದೆಹಲಿಯವರ “ವೇಣುನಾದ ಲಹರಿ” ಕುಂದಾಪುರದಲ್ಲಿ ಜ. 5 ರಂದು ರವಿವಾರ ನಡೆಯಲಿದೆ.
ಸಂಗೀತ ಭಾರತಿ ಟ್ರಸ್ಟ್ (ರಿ.) ಆಶ್ರಯದಲ್ಲಿ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ತಬಲಾವಾದಕರಾಗಿ ಖ್ಯಾತ ಕಲಾವಿದ ಪಂಡಿತ್ ರವೀಂದ್ರ ಯಾವಗಲ್, ಬೆಂಗಳೂರು ಭಾಗವಹಿಸಲಿದ್ದಾರೆ.
ಸಂಗೀತಾಸಕ್ತರು ಈ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಗೀತ ಭಾರತಿ ಟ್ರಸ್ಟ್ ಆಹ್ವಾನಿಸಿದೆ.