ಗಂಗೊಳ್ಳಿ: ಕೊಸೇಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿಯಲ್ಲಿ ಆಗಸ್ಟ್ 18 ರಂದು ಕಥೋಲಿಕ್ ಸಭಾ, ಕಾರ್ಮಿಕರ ಆಯೋಗ ಮತ್ತು ನೀತಿ ಮತ್ತು ಶಾಂತಿ ಆಯೋಗದ ಸಹಯೋಗದೊಂದಿಗೆ ಕಾರ್ಮಿಕರ ದಿನ ಮತ್ತು ನ್ಯಾಯ ಮತ್ತು ನೀತಿಯ ದಿನದ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆಯ ಪ್ರಾಂಶುಪಾಲರಾದ ಶ್ರೀಯುತ ಎಡ್ವರ್ಡ್ ಲಾರ್ಸನ್ ಡಿಸೋಜಾ ಹಾಗೂ ಉಡುಪಿ ಧರ್ಮ ಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಶ್ರೀಯುತ ಎಲ್ರಾಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಶ್ರೀ ಲಾರ್ಸೆನ್ ದಿಸೋಜರವರು ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶ್ರೀ ಕಿರಣ್ ಕ್ರಾಸ್ತಾರವರು ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯದ ಬಗ್ಗೆ ಮತ್ತು ನೋಂದಾವಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಚರ್ಚಿನ ಧರ್ಮಗುರುಗಳು ವಂದನಿಯ ಫಾದರ್ ಥೋಮಸ್ ರೋಶನ್ ಡಿಸೋಜಾರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಥೋಲಿಕ್ ಸಭಾ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು. ಆಯೋಗದ ಸಂಚಾಲಕರಾದ ರೆನಿಟಾ ಬಾರ್ನೆಸ್ ಮತ್ತು ಸೆಲಿನ್ ಲೋಬೊ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನೀಡಿದರು. ವಿಲ್ಸನ್ ಡಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಓವಿನ್ ರೆಬೆಲ್ಲೊ ವಂದನಾರ್ಪಣೆಗೈದರು.