




ದೆಹಲಿ: ಕುವೈಟ್ ನ ಮಂಗಾಫ ನಗರದಲ್ಲಿ ಕಟ್ಟಡ ಒಂದಕ್ಕೆ ಬೆಂಕಿ ತಾಗಿ ಹಲವರು ಸಜೀವ ದಹನವಾದ ಕರಾಳ ಘಟನೆ ನಡೆದಿದೆ. ಕೇರಳ ಮೂಲದವರ ಒಡೆತನದ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್-ಅಹ್ಮದಿ ಗವರ್ನರೇಟ್ನ ಮಂಗಾಫ್ ಬ್ಲಾಕನಲ್ಲಿರುವ ಫ್ಲ್ಯಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮುಂಜಾನೆ 4 ಗಂಟೆಗೆ ಬೆಂಕಿ ಉರಿಯಲು ಆರಂಭಸಿದ್ದು ಕೆಲವೆದ ಕ್ಷಣಗಳಲ್ಲಿ ಆ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಭಾರತೀಯರು ಸೇರಿದಂತೆ ಅನೇಕ ಜನರು ಅಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಘಡದಲ್ಲಿ ಭಾರತೀಯರು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.ಬೆಂಕಿಯಲ್ಲಿ ಸಾವನ್ನಪ್ಪಿದವರ ಪಯ್ಕಿ ನಾಲ್ವರು ಭಾರತೀಯರು ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 15 ಜನರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕುವೈಟ್ ಪೊಲೀಸ್ ಅಧಿಕಾರಿ ಈದ್ ರಶೀದ್ ಹಮಾಸ್ ಕುವೈಟ್ ಮಾಹಿತಿ ಸಚಿವಾಲಯಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಂಕಿಅಂಶಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.