ಕರೋನಾ 2ನೇ ಅಲೆ: ನರಸಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ 2500 ಕುಟುಂಬಗಳಿಗೆ ಮಾಸ್ಕ್, ಗ್ಲೂಕೋಸ್, ಎನರ್ಜಿ ಡ್ರಿಂಕ್ ವಿತರಿಸಿದ ಕುರ್ಕಿ ಕೆ.ಆರ್ ರಾಜರಾಜೇಶ್ವರಿ ಹರೀಶಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಏ.28: ದೇಶದಲ್ಲಿ ಕೊರೊನಾದ ಎರಡನೇ ಅಲೆಯ ಸೋಂಕಿನ ಭೀತಿ ಹೆಚ್ಚಿದ್ದು, ಜಿಲ್ಲೆಯಲ್ಲಿಯೂ ಸೋಂಕು ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ ಜನರ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಹರೀಶ್‍ಗೌಡ ಮನವಿ ಮಾಡಿದರು.
ತಾಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಸಾರ್ವಜನಿಕರಿಗೆ ಮಾಸ್ಕ್, ಗ್ಲೂಕೋಸ್, ಎನರ್ಜಿ ಡ್ರಿಂಕ್ ವಿತರಿಸಿ ಮಾತನಾಡಿದ ಅವರು ದೇಶಾದ್ಯಂತ ಕರೋನಾ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡಬೇಕು ಮನೆಯಲ್ಲಿ ಇದ್ದು ಅಗತ್ಯವಿದ್ದರೆ ಅಷ್ಟೇ ಹೊರಗಡೆ ಹೊಗಬೇಕು ಎಂದು ಮನವಿ ಮಾಡಿದರು.
ಕರೋನಾ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಭಯ ಪಡುವ ಅವಶ್ಯಕತೆಯಿಲ್ಲ ಸರ್ಕಾರ ಮತ್ತು ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕು ಕೊರೊನಾ ನಿಯಂತ್ರಣ ಮಾಡುವುದು ನಮ್ಮೆಲ್ಲರ ಕೈಯಲ್ಲಿದ್ದು, ಮುಖಕ್ಕೆ ಮಾಸ್ಕ್ ಧರಿಸುವುದು, ಸ್ವಚ್ಛತೆಯ ಕಡೆ ಗಮನ ಹರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸರ್ಕಾರದ ನಿಯಮಗಳನ್ನು ಪಾಲಿಸುವುದು ಬಹುಮುಖ್ಯವಾಗಿದೆ ನಿರ್ಲಕ್ಷತೆ ತೋರದೇ ಜವಾಬ್ದಾರಿಯಿಂದ ವರ್ತಸಬೇಕು ಎಂದರು.
ನರಸಾಪುರ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚಾಗಿದ್ದು, ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರು ಕೂಡ ನೆಲೆಸಿದ್ದು, ಗ್ರಾಮ ಪಂಚಾಯತಿ ವತಿಯಿಂದ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕು ಹಾಗೂ ಬಡ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸರಕಾರ ಲಾಕ್ ಡೌನ್ ಮಾಡಿದ್ದು ಒಂದು ಹೊತ್ತಿನ ಊಟಕ್ಕೂ ಸಮಸ್ಯೆಯಾಗಿದ್ದು, ಜಿಲ್ಲಾಡಳಿತ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೇಮಗಲ್ ಪಿಎಸ್‍ಐ ಆಂಜಿನಪ್ಪ, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ರಾಜಣ್ಣ, ಉಪಾಧ್ಯಕ್ಷ ಸುಮನ್, ನರಸಾಪುರ ಎಸ್‍ಎಫ್ ಸಿಎಸ್ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಶ್ರೀಧರ್, ಗ್ರಾಮ ಪಂಚಾಯತಿ ಸದಸ್ಯರಾದ ಕೆಇಬಿ ಚಂದ್ರು, ಕೃಷ್ಣ, ಮುನಿರಾಜು, ಕುಮಾರ್, ಶ್ರೀನಿವಾಸ್, ಹಸೀನಾ, ರಾಜೇಂದ್ರ, ಅಮರಮ್ಮ ಮುಖಂಡರಾದ ಕುರ್ಕಿ ಹರೀಶ್‍ಗೌಡ, ಶ್ರೀಕಾಂತ್, ನಂಜುಂಡ, ಬೈರೇಗೌಡ, ಶ್ರೀನಿಧಿ, ಭುವನ್, ನಾಗೇಶಬಾಬು ಉಪಸ್ಥಿತರಿದ್ದರು
.